ಕರ್ನಾಟಕಕ್ಕೆ ಮೋದಿ ಕೊಡುಗೆ : ಎಫ್ ಗ್ರೇಡ್ ನೀಡಿದ ರಾಹುಲ್

Published : May 03, 2018, 12:25 PM IST
ಕರ್ನಾಟಕಕ್ಕೆ ಮೋದಿ ಕೊಡುಗೆ : ಎಫ್ ಗ್ರೇಡ್ ನೀಡಿದ ರಾಹುಲ್

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ರಿಪೋರ್ಟ್ ಕಾರ್ಡ್ ಒಂದನ್ನು ನೀಡಿದ್ದಾರೆ.  ಅಗ್ರಿಕಲ್ಚರ್ ಇನ್ ಕರ್ನಾಟಕ ಎನ್ನುವ ಹೆಸರಿನಲ್ಲಿ ರಿಪೋರ್ಟ್ ಕಾರ್ಡ್ ನೀಡಿದ್ದು,  ಕರ್ನಾಟಕ ರೈತರಿಗಾಗಿ ಭಾರತೀಯ ಜನತಾ ಪಾರ್ಟಿಯಿಂದ ಯಾವುದೇ ರೀತಿಯಾದ ಅನುಕೂಲತೆಯನ್ನೂ ಒದಗಿಸಿಲ್ಲ ಎಂದು ರಾಹುಲ್ ಈ ಕಾರ್ಡ್’ನಲ್ಲಿ ಉಲ್ಲೇಖ ಮಾಡಿದ್ದಾರೆ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ರಿಪೋರ್ಟ್ ಕಾರ್ಡ್ ಒಂದನ್ನು ನೀಡಿದ್ದಾರೆ.  ಅಗ್ರಿಕಲ್ಚರ್ ಇನ್ ಕರ್ನಾಟಕ ಎನ್ನುವ ಹೆಸರಿನಲ್ಲಿ ರಿಪೋರ್ಟ್ ಕಾರ್ಡ್ ನೀಡಿದ್ದು,  ಕರ್ನಾಟಕ ರೈತರಿಗಾಗಿ ಭಾರತೀಯ ಜನತಾ ಪಾರ್ಟಿಯಿಂದ ಯಾವುದೇ ರೀತಿಯಾದ ಅನುಕೂಲತೆಯನ್ನೂ ಒದಗಿಸಿಲ್ಲ ಎಂದು ರಾಹುಲ್ ಈ ಕಾರ್ಡ್’ನಲ್ಲಿ ಉಲ್ಲೇಖ ಮಾಡಿದ್ದಾರೆ.

ರಿಪೋರ್ಟ್ ಕಾರ್ಡಲ್ಲಿ  ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆಯಿಂದ ರೈತರು ಸಮಸ್ಯೆ ಎದುರಿಸಿದ್ದಾರೆ. 

ಖಾಸಗಿ ಕಂಪನಿಗಳು ಲಾಭವನ್ನು ಪಡೆದಿವೆ ಎಂದು ಹೇಳಿದ್ದಾರೆ.  ರಿಪೋರ್ಟ್ ಕಾರ್ಡನ್ನು ರಾಹುಲ್ ಟ್ವೀಟ್ ಮಾಡಿದ್ದು, ಕರ್ನಾಟಕದ ರೈತರಿಗೆ ಮೋದಿ ಸರ್ಕಾರ ಯಾವುದೇ ರೀತಿಯಾದ ಉಪಯೋಗವನ್ನು ಮಾಡಿಕೊಟ್ಟಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಇದರಲ್ಲಿ ರಾಹುಲ್ ಎಫ್ ಗ್ರೇಡನ್ನು ನೀಡಿದ್ದಾರೆ.

ಮೇ 12 ರಂದು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ  ನಾಯಕರ ನಡುವೆ ಪರಸ್ಪರ ವಾಗ್ಯುದ್ದಗಳು ಹೆಚ್ಚಿದೆ. 

 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ