ರಾಜಾಜಿನಗರದಲ್ಲಿ ಹಣ ಹಂಚಿಕೆ ಆರೋಪ; ಹಣದ ಮೂಟೆ ವಶಕ್ಕೆ

Published : May 09, 2018, 07:18 PM ISTUpdated : May 09, 2018, 07:19 PM IST
ರಾಜಾಜಿನಗರದಲ್ಲಿ ಹಣ ಹಂಚಿಕೆ ಆರೋಪ; ಹಣದ ಮೂಟೆ ವಶಕ್ಕೆ

ಸಾರಾಂಶ

ಆರ್.ಆರ್.ನಗರದಲ್ಲಿ ಪತ್ತೆಯಾದ ಅಕ್ರಮ ಮತಚೀಟಿ ಪ್ರಕರಣದ ಬಗ್ಗೆ ರಾಜಕೀಯ ಪಕ್ಷಗಳು ಇನ್ನೂ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ನಡುವೆ, ರಾಜಾಜಿನಗರದಲ್ಲಿ ಹಣ ಹಂಚಿಕೆ ಆರೋಪ ಕೇಳಿಬಂದಿದೆ. ಮನೆಯೊಂದರಿಂದ ಪೊಲೀಸರು ಮೂಟೆ ಹಣವನ್ನು ವಶಪಡಿಸಿಕೊಂಡಿದ್ದಾರೆ.   

ಬೆಂಗಳೂರು [ಮೆ.09]: ಆರ್. ಆರ್.ನಗರದ ಅಕ್ರಮ ಮತ ಚೀಟಿ ಪತ್ತೆಯಾದ ಬಳಿಕ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಗಳಲ್ಲಿ ತೊಡಗಿರುವ ನಡುವೆಯೇ, ಬೆಂಗಳೂರಿನ ರಾಜಾಜಿನಗರದ ಕ್ಷೇತ್ರದ ಮನೆಯೊದರಿಂದ, ಮತದಾರರಿಗೆ ಹಂಚಲು ಇಡಲಾಗಿತ್ತೆನ್ನಲಾದ ಭಾರೀ ಪ್ರಮಾಣದ ಹಣವನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಇಎಸ್‌ಐ ಆಸ್ಪತ್ರೆ ಬಳಿ ಮನೆಯೊಂದರಲ್ಲಿ ಮೂಟೆಯಲ್ಲಿ 500 ಮುಖಬೆಲೆಯ ಸುಮಾರು 93 ಸಾವಿರ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ಕಾರ್ಯಕರ್ತರು ಮನೆಯೊಳಗಿದ್ದ ನೋಟುಗಳ ಕಂತೆಗಳನ್ನು  ಪ್ರದರ್ಶಿಸಿದ್ದಾರೆ. 

ಬಳಿಕ ಮಾಜಿ ಉಪ-ಮೇಯರ್ ಹರೀಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಹಣ ಜಪ್ತಿ ಮಾಡಿದ್ದು, ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.  

(ಸಾಂದರ್ಭಿಕ ಚಿತ್ರ)

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ