ಕಾಂಗ್ರೆಸ್ ಸಿ ರೋಗಗಳಿಂದ ಬಳಲುತ್ತಿದೆ : ಪ್ರಧಾನಿ ಮೋದಿ

First Published May 10, 2018, 7:50 AM IST
Highlights

ವಿಧಾನಸಭೆ ಚುನಾವಣೆ ಕೊನೇ ಚರಣ ಸಮೀಪಿಸುತ್ತಿದಂತೆ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರವಾಸದ ಕೊನೇ ದಿನವಾದ ಬುಧವಾರ ರಾಜ್ಯ ಸರ್ಕಾರದ ವಿರುದ್ಧ ತೀಕ್ಷ್ಣವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು :  ವಿಧಾನಸಭೆ ಚುನಾವಣೆ ಕೊನೇ ಚರಣ ಸಮೀಪಿಸುತ್ತಿದಂತೆ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರವಾಸದ ಕೊನೇ ದಿನವಾದ ಬುಧವಾರ ರಾಜ್ಯ ಸರ್ಕಾರದ ವಿರುದ್ಧ ತೀಕ್ಷ್ಣವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಪತ್ತೆಯಾಗಿರುವ ವೋಟರ್ ಐಡಿ, ಬಾದಾಮಿಯಲ್ಲಿ ನಡೆದ ಐಟಿ ದಾಳಿ, ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಜಪ್ತಿ ಮಾಡಲಾದ 130 ಕೋಟಿಗೂ ಹೆಚ್ಚು ನಗದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ‘ಭ್ರಷ್ಟಾಚಾರದ ಬ್ರಹ್ಮಾಸ್ತ್ರ’ ಪ್ರಯೋಗಿಸಿ ದ್ದಾರೆ ಮೋದಿ. 

ಇದೇ ವೇಳೆ ಕಾಂಗ್ರೆಸ್ ಆರು ‘ಸಿ’ ರೋಗಗಳಿಂದ ಬಳಲುತ್ತಿದೆ, ಆ ಪಕ್ಷಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ ಎಂದು ಆರೋಪಿಸಿದ ಅವರು, ಯುಪಿಎ ಅಧಿಕಾರಕ್ಕೆ ಬಂದರೆ ನಾನೇ ಪ್ರಧಾನಿಯಾಗುತ್ತೇನೆ ಎಂದಿರುವ ರಾಹುಲ್ ಗಾಂಧಿಯನ್ನೂ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ಅಪ್ರಬುದ್ಧ ನಾಮ್‌ದಾರ್‌ನನ್ನು ದೇಶದ ಜನ ಒಪ್ಪುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

ಕೋಲಾರ, ಚಿಕ್ಕಮಗಳೂರು, ಬೆಳಗಾವಿಯ ಪ್ರಚಾರ ಸಭೆಯಲ್ಲಿ ತೀಕ್ಷ್ಣ ಭಾಷಣವನ್ನೇ ಮಾಡಿದ ಮೋದಿ, ಕಾಂಗ್ರೆಸ್ ‘ದಿಲ್ ವಾಲೀಯೂ ಅಲ್ಲ, ದಲಿತೋವಾಲಿಯೂ ಅಲ್ಲ, ಬರೇ ಡೀಲ್ ವಾಲಿ(ಭ್ರಷ್ಟ) ಪಕ್ಷ’ ಎಂದು ಕಿಡಿಕಾರಿದರು. ಪ್ರತಿಯೊಂದರಲ್ಲೂ ಡೀಲ್ ಮಾಡುವುದು ಕಾಂಗ್ರೆಸ್‌ನ ಕೆಲಸ. ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವುದೇ ಕೆಲಸಕ್ಕೂ ಹೇಸುವುದಿಲ್ಲ. ಮಾಧ್ಯಮದಲ್ಲಿ ನಕಲಿ ವೋಟರ್ ಐಡಿ ಸಿಕ್ಕಿದ ಕುರಿತು ವರದಿಯಾಗಿದೆ. 

ಈ ವೋಟರ್ ಐಡಿಗಳ ಸಣ್ಣ ಸಣ್ಣ ಬಂಡಲ್ ಮಾಡಿ ಅದನ್ನು ಯಾರ‌್ಯಾರಿಗೆ ಹಂಚಬೇಕು ಎಂದೂ ಅದರ ಮೇಲೆ ಬರೆಯಲಾಗಿದೆ. ಈ ರೀತಿ ಅಕ್ರಮ ದಾರಿಯ ಮೂಲಕ ಚುನಾವಣೆ ಗೆಲ್ಲಲು ಹೊರಟ ಕಾಂಗ್ರೆಸ್ ಅನ್ನು ಕರ್ನಾಟಕದಜನ ಕ್ಷಮಿಸಬಾರದು. 4 ಲಕ್ಷದ  ಮತದಾರಿರುವ ಕ್ಷೇತ್ರದಲ್ಲಿ ಒಂದು ಲಕ್ಷ ನಕಲಿ ಐಡಿ ಮಾಡಲಾಗಿದೆಎಂದರೆ ಕಾಂಗ್ರೆಸ್ ಹೇಗೆ ಸೋಲಿಗೆ ಹೆದರುತ್ತದೆ ಎನ್ನುವುದು ಅರಿವಾಗುತ್ತದೆ. ಇದು ಒಂದು ಕಡೆ ಪತ್ತೆಯಾದ ಅಕ್ರಮ, ಉಳಿದೆಡೆ ಈ ರೀತಿಯ ಇನ್ನಷ್ಟು ಪಾಪದ ಕೆಲಸಗಳನ್ನು ಕಾಂಗ್ರೆಸ್ ಮಾಡಿದೆ ಎಂದು ಮೋದಿ ಆರೋಪಿಸಿದರು.

 

https://business.facebook.com/SuvarnaNews/videos/1926959534001756/?t=0

click me!