ವಿಜಯಪುರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವೆತ್ತಿದ ಮೋದಿ

First Published May 8, 2018, 2:25 PM IST
Highlights

ಪ್ರಾದೇಶಿಕ ಸಮಸ್ಯೆಗಳನ್ನೇ ಎತ್ತಿಕೊಂಡು ಪ್ರಚಾರ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೇ 8ರಂದು ವಿಜಯಪುರದಲ್ಲಿ ಚುನಾವಣೆ ರಣ ಕಹಳೆ ಮೊಳಗಿಸಿದರು. ಬಸವಣ್ಣನ ಹುಟ್ಟೂರಿನಲ್ಲಿ, ಬಸವ ತತ್ವಗಳನ್ನೇ ಉಲ್ಲೇಖಿಸಿ, ಬಿಜೆಪಿ ಅದನ್ನು ಹೇಗೆ ಅನುಸರಿಸುತ್ತಿದೆ ಎಂದು ಹೇಳುವುದಲ್ಲದೇ, ಕಾಂಗ್ರೆಸ್ ಹೇಗೆ ವಿರೋಧಿಸುತ್ತದೆ ಎಂಬುದನ್ನೂ ವಿವರಿಸಿದರು.

ವಿಜಯಪುರ: ಪ್ರಾದೇಶಿಕ ಸಮಸ್ಯೆಗಳನ್ನೇ ಎತ್ತಿಕೊಂಡು ಪ್ರಚಾರ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೇ 8ರಂದು ಇಲ್ಲಿ ಚುನಾವಣೆ ರಣ ಕಹಳೆ ಮೊಳಗಿಸಿದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಸ್ಪರ್ಧಿಸುತ್ತಿರುವ ವಿಧಾನಸಭಾ ಕ್ಷೇತ್ರವಾದ ಬಬಲೇಶ್ವರ ಇರುವ ಜಿಲ್ಲಾ ಕೇಂದ್ರದಲ್ಲಿ ಪ್ರಚಾರ ನಡೆಸಿ, ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಡಿದ ಪಾಟೀಲ್ ನಿಲುವನ್ನುಮೋದಿ ವಿರೋಧಿಸಿದರು. ಎಲ್ಲರನ್ನೂ ನಮ್ಮವನೆಂದು ತಿಳಿಯಿರಿ ಎಂದು ಹೇಳಿರುವ ಬಸವಣ್ಣನ ತತ್ವಕ್ಕೆ ವಿರುದ್ಧವಾಗಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸಲಾಯಿತು, ಎಂದು ಆರೋಪಿಸಿದರು.

'ವಿಶ್ವಕ್ಕೇ ಮಾನ್ಯವಾದ ಬಸವಣ್ಣನ ತತ್ವವನ್ನು ಎಲ್ಲೆಡೆ ಪಸರಿಸಲು ನಮ್ಮ ಸರಕಾರ ಯತ್ನಿಸುತ್ತಿದೆ. ಲಂಡನ್‌ನ ಥೇಮ್ಸ್ ನದಿಯ ತಟದಲ್ಲಿ ಬಸವಣ್ಣನ ಪುತ್ಥಳಿಯನ್ನು ಲೋಕಾರ್ಪಣೆ ಮಾಡುವ ಸೌಭಾಗ್ಯ ನನ್ನದಾಗಿತ್ತು. ಅಕ್ಷರ, ಅನ್ನ ಹಾಗೂ ಆರೋಗ್ಯ ಎಂಬ ತ್ರಿವಿಧ ಮಂತ್ರವನ್ನು ಸರಕಾರ ಪಾಲಿಸುತ್ತಿದೆ,' ಎಂದು ಪ್ರಧಾನಿ ಕೇಂದ್ರ ಸರಕಾರ ಜಾರಿಗೊಳಿಸಿದ ಆರೋಗ್ಯ, ಶಿಕ್ಷಣ ಹಾಗೂ ಇತರೆ ಕ್ಷೇಮಾಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು.

ಮೋದಿ ಅವರ ಪೂರ್ಣ ಭಾಷಣವನ್ನು ಕೇಳಿ..


 

click me!