ರಾಜ್ಯದ ಮೂರು ಜಿಲ್ಲೆಗಳಲ್ಲಿ ಮೋದಿ ಪ್ರಚಾರ

First Published May 5, 2018, 8:49 AM IST
Highlights

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಎರಡನೇ ಸುತ್ತಿನ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಇಂದು ಮತ್ತೆ ಅಬ್ಬರಿಸಲು ರಾಜ್ಯದ ಶಿವಮೊಗ್ಗ, ತುಮಕೂರು, ಗದಗ ಜಿಲ್ಲೆಗಳಲ್ಲಿ ಮತಬೇಟೆಗೆ ಆಗಮಿಸುತ್ತಿದ್ದಾರೆ.

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಎರಡನೇ ಸುತ್ತಿನ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಇಂದು ಮತ್ತೆ ಅಬ್ಬರಿಸಲು ರಾಜ್ಯದ ಶಿವಮೊಗ್ಗ, ತುಮಕೂರು, ಗದಗ ಜಿಲ್ಲೆಗಳಲ್ಲಿ ಮತಬೇಟೆಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ 45 ನಿಮಿಷಗಳ ಕಾಲ ಭಾಷಣ  ಮಾಡಿ ತುಮಕೂರು, ಹಾಸನ ಹಾಗೂ ನೆಲಮಂಗಲ ಅಭ್ಯರ್ಥಿ ಗಳ ಪರ ಮತಯಾಚಿಸಲಿದ್ದಾರೆ. 

ಮೊದಲ ಬಾರಿಗೆ ಗದಗಗೆ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 2 ಗಂಟೆಗೆ ಗದಗಿನ ಮುಂಡರಗಿ ರಸ್ತೆಯ ಮೈದಾನದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದು, 40 ಎಕರೆ ಜಮೀನಿನಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. 

3 ದಶಕಗಳ ಬಳಿಕ ಪ್ರಧಾನಿ ಶಿವಮೊಗ್ಗಕ್ಕೆ:  ಮೂರು ದಶಕಗಳ ಬಳಿಕ ಪ್ರಧಾನಿಯೊಬ್ಬರು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು, ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನ ನರೇಂದ್ರ ಮೋದಿ ಭಾಗವಹಿಸಲಿದ್ದು, ಪಕ್ಷ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. 

ಇಂದು ಮಂಗಳೂರಿಗೆ ಮೋದಿ: ಶಿವಮೊಗ್ಗದಿಂದ ವಿಶೇಷ ವಿಮಾನದಲ್ಲಿ ಶನಿವಾರ ಸಂಜೆ 6.10ಕ್ಕೆ ದಿ ಮಂಗಳೂರಿನ  ಅಂತಾರಾಷ್ಟ್ರೀಯ ವಿಮಾನ ಲ್ದಾಣಕ್ಕೆಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 6.30ಕ್ಕೆ ನೆಹರೂ ಮೈದಾನದಲ್ಲಿ ನಡೆಯುವ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿಲಿದ್ದಾರೆ. ಬಳಿಕ ಇಲ್ಲಿಂದ 7.15ಕ್ಕೆ  ಹೊರಟು ವಿಮಾನ ನಿಲ್ದಾಣದಿಂದ 7.45ಕ್ಕೆ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ತೆರಳುವರು.

click me!