
ಬೆಂಗಳೂರು (ಮೇ 18) : ಕ್ಷಣ ಕ್ಷಣಕ್ಕೂ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯ ರಾಜಕಾರಣ ಹೈದ್ರಾಬಾದ್ ಗೆ ಶಿಫ್ಟ್ ಆಗಿದೆ. ಬಿ.ಎಸ್. ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಲ್ಲಿ ಅಪರೇಷನ್ ಕಮಲದ ಭೀತಿ ಇನ್ನಷ್ಟು ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ತಮ್ಮ ಶಾಸರನ್ನು ರಕ್ಷಿಸಿಕೊಳ್ಳಲು ಹೊರ ರಾಜ್ಯಕ್ಕೆ ಕರೆದ್ಯೊಯುವುದು ಅನಿವಾರ್ಯ ಎಂಬುದನ್ನು ಅರಿತ ಎರಡು ಪಕ್ಷದ ನಾಯಕರು, ಮೊದಲು ಕೇರಳದ ಕೊಚ್ಚಿಗೆ ಹೋಗಲು ತೀರ್ಮಾನಿಸಿದ್ದರು. ಆದ್ರೆ, ಕೊಚ್ಚಿಗೆ ಹೋಗಲು ವಿಮಾನ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಮಾರ್ಗ ಬದಾವಣೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷದ ನಾಯಕ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ತಡ ರಾತ್ರಿ 76 ಶಾಸಕರು ಬಿಡದಿಯ ಈಗಲ್ ಟನ್ ರೆಸಾರ್ಟ್ ನಿಂದ ನೇರವಾಗಿ ಹೈದ್ರಾಬಾದ್ ಕಡೆ ಪ್ರಯಾಣ ಬೆಳೆಸಿದರು. ಇನ್ನು ಜೆಡಿಎಸ್ 35 ಶಾಸಕರು ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ, ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಶಾಂಗ್ರಿಲಾ ಹೋಟೆಲ್ ನಿಂದ ಹೆಬ್ಬಾಳ ಮಾರ್ಗವಾಗಿ ಹೈದ್ರಾಬಾದ್ ಕಡೆ ಪ್ರಯಾಣ ಬೆಳೆಸಿದರು.