ಮೊನ್ನೆ ದೇವೇಗೌಡರನ್ನು ಹೊಗಳಿದ್ದ ಮೋದಿ ಇಂದು ಟಾಂಗ್

First Published May 3, 2018, 6:42 PM IST
Highlights

ಕರ್ನಾಟಕದ ಕೊನೆಯ ಕೋಟೆ ಕಾಂಗ್ರೆಸ್ ನಿರ್ನಾಮ ಆಗಲಿದೆ. ಮೇ 12ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಜನತೆ ನಿರ್ಧರಿಸಿದ್ದಾರೆ. ಎರಡು ದಿನಗಳಲ್ಲಿ ನನಗೆ ಕರ್ನಾಟಕದ ಹಲವು ಕ್ಷೇತ್ರ ತಿಳಿಯುವ ಅವಕಾಶ. ಬೃಹತ್ ಸಮಾವೇಶದಲ್ಲಿ ಈ ಅದ್ಭುತ ದೃಶ್ಯವನ್ನು ಇಲ್ಲಿ ನೋಡುತ್ತಿದ್ದೇನೆ. ಕರ್ನಾಟಕದ ನಾಲ್ಕೂ ದಿಕ್ಕುಗಳಲ್ಲಿಯೂ ಇದೇ ರೀತಿಯ ದೃಶ್ಯ ಕಾಣುತ್ತಿದೆ'

ಬೆಂಗಳೂರು(ಮೇ.03): ಮೊನ್ನೆ ಉಡುಪಿಯಲ್ಲಿ ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ದೇವೇಗೌಡರನ್ನು ಕಾಂಗ್ರೆಸ್ ನಾಯಕರು ಹಿನಾಯವಾಗಿ ನಡೆಸಿಕೊಳ್ಳುತ್ತಿದ್ದು, ಆದರೆ ನಾನು ಹಿರಿಯ ನಾಯಕನನ್ನು ಅಪಾರವಾಗಿ ಗೌರವಿಸುತ್ತೇನೆ ಎಂದಿದ್ದ ಮೋದಿ ಇಂದು ಬೆಂಗಳೂರಿನಲ್ಲಿ ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಕೊನೆಯ ಕೋಟೆ ಕಾಂಗ್ರೆಸ್ ನಿರ್ನಾಮ ಆಗಲಿದೆ.  ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಗೆಲ್ಲುವುದಿಲ್ಲ. ದೇಶದ್ರೋಹಿ ಪಕ್ಷದ ಜತೆ  ಜೆಡಿಎಸ್  ಹೊಂದಾಣಿಕೆ ಮಾಡಿಕೊಂಡಿದೆ. ಇದು ಕರ್ನಾಟಕ್ಕೆ ಮಾಡಿದ ಅಪಮಾನ. ಜೆಡಿಎಸ್ ಗೆ ಮತ ಹಾಕಿ ಸುಮ್ಮನೆ ತಪ್ಪು ನಿರ್ಧಾರ ಮಾಡಬೇಡಿ. ಬುದ್ಧಿವಂತರು ಜೆಡಿಎಸ್'ಗೆ ಮತ ಹಾಕ್ತಾರಾ ಹೇಳಿ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮ 
ಕರ್ನಾಟಕದ ಕೊನೆಯ ಕೋಟೆ ಕಾಂಗ್ರೆಸ್ ನಿರ್ನಾಮ ಆಗಲಿದೆ. ಮೇ 12ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಜನತೆ ನಿರ್ಧರಿಸಿದ್ದಾರೆ. ಎರಡು ದಿನಗಳಲ್ಲಿ ನನಗೆ ಕರ್ನಾಟಕದ ಹಲವು ಕ್ಷೇತ್ರ ತಿಳಿಯುವ ಅವಕಾಶ. ಬೃಹತ್ ಸಮಾವೇಶದಲ್ಲಿ ಈ ಅದ್ಭುತ ದೃಶ್ಯವನ್ನು ಇಲ್ಲಿ ನೋಡುತ್ತಿದ್ದೇನೆ. ಕರ್ನಾಟಕದ ನಾಲ್ಕೂ ದಿಕ್ಕುಗಳಲ್ಲಿಯೂ ಇದೇ ರೀತಿಯ ದೃಶ್ಯ ಕಾಣುತ್ತಿದೆ' ಎಂದರು.
ಇದೇ ಸಂದರ್ಭದಲ್ಲಿ ಡಾ. ರಾಜಕುಮಾರ್, ವಿಶ್ವೇಶ್ವರಯ್ಯ, ಕೆಂಪೇಗೌಡ ಮುಂತಾದ ಮಹನೀಯರನ್ನು ನೆನಪಿಸಿಕೊಂಡರು. ಹಿರಿಯ ನಾಯಕ ಎಸ್.ಎಂ. ಕೃಷ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.

click me!