ಕಾಂಗ್ರೆಸ್ ಪರ ಮುಖ್ಯಮಂತ್ರಿ ಚಂದ್ರು ಚುನಾವಣಾ ಪ್ರಚಾರ

Published : May 02, 2018, 12:36 PM IST
ಕಾಂಗ್ರೆಸ್ ಪರ ಮುಖ್ಯಮಂತ್ರಿ ಚಂದ್ರು ಚುನಾವಣಾ ಪ್ರಚಾರ

ಸಾರಾಂಶ

ಕಳೆದ ಐದು ವರ್ಷಗಳಲ್ಲಿ ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲ ಅಂಶಗಳನ್ನು ಕಾಂಗ್ರೆಸ್ ಈಡೇರಿಸಿದೆ. ಈ ಮೂಲಕ ಭರವಸೆಗಳನ್ನು ಈಡೇರಿಸಿದೆ. ಆದ್ದರಿಂದ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವುದಾಗಿ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. 

ಮೈಸೂರು : ರಾಜ್ಯದಲ್ಲಿ ದಿನದಿನಕ್ಕೂ ಕೂಡ ಚುನಾವಣಾ ಕಣ ರಂಗೇರುತ್ತಿದೆ. ವಿವಿಧ ಪಕ್ಷಗಳ ಪರವಾಗಿ ಸ್ಟಾರ್ ಪ್ರಚಾರಕರು ಅಖಾಡಕ್ಕೆ ಧುಮುಕುತ್ತಿದ್ದಾರೆ. ಇದೇ ವೇಳೆ ಸಿನಿಮಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಂದೇ ಫೇಮಸ್ ಆದ ನಟ ಮುಖ್ಯಮಂತ್ರಿ ಚಂದ್ರು ಅವರು ಇದೀಗ ಪ್ರಚಾರಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲ ಅಂಶಗಳನ್ನು ಕಾಂಗ್ರೆಸ್  ಜಾರಿಗೆ ತಂದಿದೆ. ಈ ಮೂಲಕ ಎಲ್ಲಾ  ಭರವಸೆಗಳನ್ನು ಈಡೇರಿಸಿದೆ. ಆದ್ದರಿಂದ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವುದಾಗಿ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. 

ಕಾಂಗ್ರೆಸ್ ಸಮಾಜವಾದದ ಪಕ್ಷವಾಗಿದೆ.  ಶೋಷಿತ ವರ್ಗಕ್ಕೆ ಸಿದ್ದರಾಮಯ್ಯ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಈ ಬಾರಿ ಪ್ರಚಾರದ ವೇಳೆ ಕೋಮುವಾದಿಗಳನ್ನು ದೂರ ಇಡುವಂತೆ ಜನರಲ್ಲಿ ಮನವಿ ಮಾಡಲಿದ್ದೇವೆ ಎಂದು ಮೈಸೂರಿನಲ್ಲಿ ನಟ  ಚಂದ್ರು ಹೇಳಿದ್ದಾರೆ. 

ಇನ್ನು ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು  ಕೇಂದ್ರ ದಲ್ಲಿ ಆಡಳಿತದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ. 
ಕಪ್ಪುಹಣ ತಂದು ಜನರಿಗೆ ಒಳ್ಳೆಯದು ಮಾಡುತ್ತೇವೆ ಅಂದಿದ್ದ ಬಿಜೆಪಿ ಅದನ್ನು ಮಾಡಲಿಲ್ಲ. ತರಾತುರಿಯಲ್ಲಿ ಜಿಎಸ್ಟಿ ಜಾರಿಗೆ ತರಲಾಯಿತು. ಬಿಜೆಪಿಯನ್ನು  ಅಧಿಕಾರದಿಂದ ದೂರ ಇಡಬೇಕು ಅನ್ನುವುದೇ ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.

ಇದೇ ಕಾರಣದಿಂದ ತಾವು ಕಾಂಗ್ರೆಸ್ ಪರವಾಗಿ ರಾಜ್ಯದ ಚುನಾವಣೆಯ ಈ ಸಂದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.  

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ