
ಮೈಸೂರು : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಹರಕೆ ಹೊತ್ತ ಅಭಿಮಾನಿಯೋರ್ವ 11 ವರ್ಷದಿಂದ ಗಡ್ಡ, ಕೂದಲು ತೆಗೆಯದೇ ಹಾಗೇ ಇದ್ದಾರೆ. ಕೆ. ಆರ್.ನಗರ ತಾಲೂಕಿನ ಭೇರ್ಯ ಸಮೀಪದ ಮೇಲೂರು ಗ್ರಾಮದ ರಾಮಕೃಷ್ಣೇಗೌಡ ಅವರೇ ಈ ರೀತಿ ವಿಶಿಷ್ಟ ಹರಕೆ ಹೊತ್ತವರು.
ಈ ಹಿಂದೆ ಕುಮಾರಸ್ವಾಮಿ 20 ತಿಂಗಳು ಕಾಲ ಮುಖ್ಯಮಂತ್ರಿಯಾಗಿದ್ದಾಗ ಅವರ ಆಡಳಿತ ಮನಸೋತಿದ್ದ ರಾಮಕೃಷ್ಣೇಗೌಡ ಅಂದಿನಿಂದ ಎಚ್‌ಡಿಕೆ ಅಭಿಮಾನಿ ಆಗಿದ್ದರು.
ಆದರೆ, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಿದ್ದರಿಂದ ಬೇಸರಗೊಂಡ ಅವರು, ಕುಮಾರಸ್ವಾಮಿ ಮತ್ತೆ ಸಿಎಂ ಆಗುವ ತನಕ ತಾನು ಗಡ್ಡ, ಕೂದಲು ತೆಗೆಯುವುದಿಲ್ಲ ಎಂದು ಹರಕೆ ಹೊತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.