
ಬೆಂಗಳೂರು (ಏ. 26): ಸಿಎಂ ಸಿದ್ದರಾಮಯ್ಯ ಮತ್ತು ಅವರ ಪಕ್ಷದ ಶಾಸಕರಿಂದ ಜೀವ ಬೆದರಿಕೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಕಮಿಷನರ್’ಗೆ ದೂರು ನೀಡಿದ್ದಾರೆ.
ಅನ್ಯಾಯದ ವಿರುದ್ದ ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಿದ್ದಕ್ಕೆ ಜೀವ ಬೆದರಿಕೆ ಇದೆ. ಸತೀಶ ಜಾರಕಿಹೋಳಿ, ಪಿರೋಜ್ ಸೇಠ ವಿರುದ್ದ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ನನಗೆ ಭದ್ರತೆಯನ್ನು ಒದಗಿಸಿ ಎಂದು ಶಂಕರ ಮುನವಳ್ಳಿ ಕಮಿಷನರ್’ಗೆ ಮನವಿ ಮಾಡಿದ್ದಾರೆ.