4 ಸಚಿವ ಸ್ಥಾನಗಳು ಖಾಲಿ ಉಳಿಯುವ ಸಂಭವ

First Published May 23, 2018, 11:12 AM IST
Highlights

ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿರುವ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ತಮ್ಮ ಕೋಟಾದಲ್ಲಿ ತಲಾ ಎರಡೆರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡದೇ ಖಾಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿರುವ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ತಮ್ಮ ಕೋಟಾದಲ್ಲಿ ತಲಾ ಎರಡೆರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡದೇ ಖಾಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಮೊದಲ ಮೈತ್ರಿ ಸೂತ್ರದ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಡಿಸಿಎಂ ಸೇರಿ 22 ಹಾಗೂ ಜೆಡಿಎಸ್‌ಗೆ ಸಿಎಂ ಸೇರಿ 12 ಸಚಿವ ಸ್ಥಾನಗಳು ದೊರಕಿವೆ. ಆದರೆ, ಉಭಯ ಪಕ್ಷಗಳಲ್ಲೂ ಸಚಿವ ಸ್ಥಾನಕ್ಕೆ ಭರ್ಜರಿ ಪೈಪೋಟಿಯಿದೆ. 

ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಲಾಬಿಗೆ ನಾಯಕತ್ವವೇ ಸುಸ್ತಾಗಿದೆ. ಹೀಗಾಗಿ ಕಾಂಗ್ರೆಸ್ ಡಿಸಿಎಂ ಹುದ್ದೆ ಹೊರತುಪಡಿಸಿ ತನ್ನ ಬಳಿಯಿರುವ 21 ಸಚಿವ ಸ್ಥಾನಗಳ ಪೈಕಿ 19 ಮಾತ್ರ ಭರ್ತಿ ಮಾಡಿಕೊಂಡರೆ, ಜೆಡಿಎಸ್ 9 ಸಚಿವ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

click me!