ಕರ್ನಾಟಕ ಚುನಾವಣೆ : ಮುನ್ನಡೆ ಸಾಧಿಸಿರುವ ಅಭ್ಯರ್ಥಿಗಳ್ಯಾರು..?

First Published May 15, 2018, 8:13 AM IST
Highlights

ರಾಜ್ಯದಲ್ಲಿ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದ್ದು, ವಿವಿಧ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಕೆಲವೆಡೆ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಇನ್ನು ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೂ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಬೆಂಗಳೂರು [ ಮೇ 15] ರಾಜ್ಯದಲ್ಲಿ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದ್ದು, ವಿವಿಧ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಕೆಲವೆಡೆ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಇನ್ನು ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೂ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಎಸ್  ಪ್ರಕಾಶ್ ಮುನ್ನಡೆ ಸಾಧಿಸಿದ್ದಾರೆ. 

Latest Videos

ಚನ್ನಗಿರಿಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಮುನ್ನಡೆಯಲ್ಲಿದ್ದಾರೆ. 

ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ ಮುನ್ನಡೆ ಸಾಧಿಸಿದ್ದಾರೆ. 

ಮಾಯಕೊಂಡದಲ್ಲಿ ಬಿಜೆಪಿ ಅಭ್ಯರ್ಥಿ ಲಿಂಗಣ್ಣ ಮುಂದಿದ್ದಾರೆ. 

ಹರಿಹರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಇತರೆ ಅಭ್ಯರ್ಥಿಗಳನ್ನು ಸದ್ಯ ಹಿಂದಿಕ್ಕಿದ್ದಾರೆ.  

ಇನ್ನು ಹೈ ವೋಲ್ಟೇಜ್ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಮತ ಎಣಿಕೆ ಆರಂಭವಾಗಿದೆ.
 
ಹರಪನಹಳ್ಳಿಯಲ್ಲಿ ಬಿಜೆಪಿ ಕರುಣಾಕರ ರೆಡ್ಡಿ ಜಗಳೂರು ಬಿಜೆಪಿಯ ರಾಮಚಂದ್ರ ಮುನ್ನಡೆಯಲ್ಲಿದ್ದಾರೆ. 

ಕನಕಪುರದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮುಂದಿದ್ದಾರೆ. 

ರಾಮನಗರದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮುಂದಿದ್ದಾರೆ. 

ಹೊಳೆನರಸೀಪುರದಲ್ಲಿ ಎಚ್ .ಡಿ ರೇವಣ್ಣ ಮುನ್ನಡೆ ಸಾಧಿಸಿದ್ದಾರೆ.  

ಮೊಳಕಾಲ್ಮೂರಿನಲ್ಲಿ ಶ್ರೀ ರಾಮುಲು ಸದ್ಯ ಮುಂದಿದ್ದಾರೆ.

click me!