ತಮಿಳುನಾಡಿಗಿಂತ ನಮ್ಮ ರಾಜ್ಯದಲ್ಲೇ ಹೆಚ್ಚು ಅಕ್ರಮ

First Published May 7, 2018, 8:17 AM IST
Highlights

ವಿಧಾನಸಭಾ ಚುನಾವಣೆ ವೇಳೆ ನಡೆಯುವ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿ ಕಾರಿಗಳು ನೀತಿ ಸಂಹಿತೆ ಜಾರಿಯಾದ ನಂತರ ಈವರೆಗೆ ನಗದು, ಮದ್ಯ ಸೇರಿದಂತೆ 152 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ದೇಶದಲ್ಲಿಯೇ ಎರಡನೇ ಅಧಿಕ ಜಪ್ತಿಯಾಗಿದೆ. 

ಬೆಂಗಳೂರು: ವಿಧಾನಸಭಾ ಚುನಾವಣೆ ವೇಳೆ ನಡೆಯುವ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿ ಕಾರಿಗಳು ನೀತಿ ಸಂಹಿತೆ ಜಾರಿಯಾದ ನಂತರ ಈವರೆಗೆ ನಗದು, ಮದ್ಯ ಸೇರಿದಂತೆ 152 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ದೇಶದಲ್ಲಿಯೇ ಎರಡನೇ ಅಧಿಕ ಜಪ್ತಿಯಾಗಿದೆ. 

2017 ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ಚುನಾವಣೆ ವೇಳೆ 193.29 ಕೋಟಿ ರು. ಮೌಲ್ಯದ ನಗ-ನಾಣ್ಯ ಸೇರಿದಂ ತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದು ಚುನಾವಣೆ ವೇಳೆ ವಶಪಡಿಸಿಕೊಂಡ ಒಟ್ಟಾರೆ ಮೊತ್ತ ದಲ್ಲಿ ಹೆಚ್ಚಿನದಾಗಿದ್ದು, ಉತ್ತರಪ್ರದೇಶ ದೇಶದ ಮೊದಲ ಸ್ಥಾನದಲ್ಲಿದೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸದ್ಯಕ್ಕೆ ೧೫೨ ಕೋಟಿ ರು.ಗಿಂತ ಹೆಚ್ಚು ಮೌಲ್ಯದ ವಸ್ತುಗ ಳನ್ನು ವಶಕ್ಕೆ ಪಡೆಯಲಾಗಿದೆ. 

ಚುನಾವಣಾ ಅಕ್ರಮಗಳಿ ಗೆ ಬಳಕೆ ಯಾಗುವ ವಸ್ತುಗಳನ್ನು ವಶಪಡಿಸಿಕೊಂಡಿರುವ ದೇಶದ ವಿವಿಧ ರಾಜ್ಯಗಳ ಪೈಕಿ ಕರ್ನಾಟಕ ತಮಿಳುನಾ ಡನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. 2016 ರಲ್ಲಿ ತಮಿ ಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ 130.99 ಕೋಟಿ ರು. ನಗ-ನಾಣ್ಯ, ಮದ್ಯ ಸೇರಿದಂತೆ ಇತರೆ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿತ್ತು. 152 ಕೋಟಿ ರು. ಮೌಲ್ಯದ ವಸ್ತುಗಳಲ್ಲಿ ಚುನಾವಣಾಧಿಕಾರಿಗಳು 67 ಕೋಟಿ ರು. ಗಿಂತ ಹೆಚ್ಚು ನಗದು ವಶಪಡಿಸಿಕೊಂಡರೆ, ಐಟಿ ಇಲಾಖೆ ಅಧಿಕಾರಿಗಳು 20 ಕೋಟಿ ರು.ಗಿಂತ ಹೆಚ್ಚಿನ ನಗದನ್ನು ವಶಪಡಿಸಿಕೊಂಡಿದ್ದಾರೆ. 

click me!