ಬಾದಾಮಿ IT ದಾಳಿ: ಮಹತ್ತರ ದಾಖಲೆ ಲಭ್ಯ, ಸುವರ್ಣನ್ಯೂಸ್ ಎಕ್ಸ್‌ಕ್ಲೂಸಿವ್

First Published May 10, 2018, 6:15 PM IST
Highlights

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಬಾದಾಮಿಯಲ್ಲಿ ಕಾಂಗ್ರೆಸ್ ಮುಖಂಡ ಆನಂದ್ ಸಿಂಗ್ ಮಾಲೀಕತ್ವದ ರೆಸಾರ್ಟ್‌ನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ಅವರು ತಂಗಿದ್ದ ಕೊಠಡಿಯಲ್ಲಿ ಮಹತ್ತರದ ದಾಖಲೆಗಳು ಲಭ್ಯವಾಗಿದ್ದು, ಇವು ಸುವರ್ಣ ನ್ಯೂಸ್‍ಗೆ ಲಭ್ಯವಾಗಿವೆ.

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಬಾದಾಮಿಯಲ್ಲಿ ಕಾಂಗ್ರೆಸ್ ಮುಖಂಡ ಆನಂದ್ ಸಿಂಗ್ ಮಾಲೀಕತ್ವದ ರೆಸಾರ್ಟ್‌ನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ತಂಗಿದ್ದ ಕೊಠಡಿಯಲ್ಲಿ ಮಹತ್ತರದ ದಾಖಲೆಗಳು ಲಭ್ಯವಾಗಿದ್ದು, ಇವು ಸುವರ್ಣ ನ್ಯೂಸ್‍ಗೆ ಲಭ್ಯವಾಗಿವೆ.

ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕೀಯವನ್ನೇ ತಲ್ಲಣಗೊಳಿಸುವ ಸುದ್ದಿ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಗಳಲ್ಲಿ ಪ್ರಸ್ತಾಪಿಸಿದ ದಾಖಲೆಗಳು ಲಭ್ಯವಾಗಿದವೆ. 

ಅಧಿಕಾರಿಗಳು ನಡೆಸಿದ ದಾಳಿ ವೇಳೆ ಕೇವಲ ಲಕ್ಷ ಲಕ್ಷ ಹಣ ಮಾತ್ರವಲ್ಲ. ಆದ್ರೆ ಕೋಟಿ ಕೋಟಿ ವ್ಯವಹಾರ ನಡೆಸಿರುವ ಬಗ್ಗೆ ದಾಖಲೆ ಪತ್ರಗಳೂ ಸಿಕ್ಕಿವೆ. ಜತೆಗೆ ಪ್ರಭಾವಿ ಸಚಿವರ ಹೆಸರೂ ಈ ದಾಖಲೆಗಳಲ್ಲಿ ಇದ್ದು, ಸುಮಾರು 3 ಪುಟಗಳ ಲೆಕ್ಕಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಮತದಾನ ನಡೆಯುವ ಪ್ರತಿ ಬೂತ್​ಗೆ ಹಂಚಲಾಗಿದೆ ಲಕ್ಷ, ಲಕ್ಷ ಹಣದ ಲೆಕ್ಕ ಈ ದಾಖಲೆಗಳಲ್ಲಿವೆ.

ಲಭ್ಯವಾದ ದಾಖಲೆಗಳೇನು?
- ಮತದಾನದ ಬೂತ್​ಗಳಿಗೆ ಹಂಚಿರುವ ಹಣದ ಲೆಕ್ಕ ಬರೆದಿಟ್ಟಿದ್ದ ಸೀಕ್ರೆಟ್ ಪತ್ರಗಳು.
- ಪ್ರತಿ ಜಾತಿ ಸಂಘಟನೆಗಳಿಗೂ ಲಕ್ಷ, ಲಕ್ಷ ಹಣ ಹಂಚಲಾಗಿತ್ತು. ವಾಲ್ಮೀಕಿ ಸಮಾಜ ಹಾಗೂ ಇತರೆ ಸಮಾಜಗಳಿಗೂ ಹಂಚಿಕೆಯಾದ ಹಣದ ವಿವರವಿದೆ
- ಕಾಫಿ- ತಿಂಡಿ ಲೆಕ್ಕಾಚಾರವೂ ಇದೆ.
- 253 ಬೂತ್​ಗಳಿಗೆ 63 ಲಕ್ಷ 25 ಸಾವಿರ ಹಣ ಹಂಚಿಕೆ.
- ಆಯಾ ಬೂತ್ ಮುಖಂಡರಿಗೆ ಹೆಚ್ಚುವರಿಯಾಗಿ 21 ಲಕ್ಷ 20 ರೂ. ಹಂಚಿಕೆ
- ಪ್ರಭಾವಿ ಸಚಿವರಿಗೆ 5 ಲಕ್ಷ ರೂ. ಹಂಚಿಕೆ
- ಭೋವಿ ಸಮಾಜ, ಭಜಂತ್ರಿ ಸಮಾಜ, ಮಚಗಾರ ಸಮಾಜ, ಯಾದವ ಸಮಾಜಗಳಿಗೆ ಸಾವಿರಾರು ರೂಪಾಯಿ ಹಣ ಹಂಚಿಕೆ
- ನೀಲಗುಂದ, ಬೆಳವಲಕೊಪ್ಪ, ಮುತ್ತಲಗೇರಿ ಗ್ರಾಮಗಳಿಗೆ ಹಣ ಹಂಚಿಕೆ. ಈ ಗ್ರಾಮಗಳಿಗೆ ಹಣ ಹಂಚಿರುವ ಬಗ್ಗೆ ಪ್ರತ್ಯೇಕವಾಗಿ ಪ್ರಸ್ತಾಪವಿದ್ದು, 'ಈ 3 ಊರಲ್ಲಿ ವಾಲ್ಮೀಕಿ ಜನಾಂಗ ಹೆಚ್ಚು ಇರುತ್ತದೆ' ಎಂದ ಒಕ್ಕಣೆಯೂ ಇದೆ. 
- ಪ್ರತಿ ಬೂತ್​ಗೆ ತಲಾ 25 ಸಾವಿರ ರೂ. ಹಣ ಹಂಚಲಾಗಿದೆ. ಪ್ರತಿಬೂತ್​ನ ಪ್ರಭಾವಿ ಮುಖಂಡರಿಗೆ ಹೆಚ್ಚುವರಿಯಾಗಿ 2 ರಿಂದ 3 ಲಕ್ಷ ಹಣ ಹಂಚಿದ್ದು ದಾಖಲೆಗಳಲ್ಲಿ ಪ್ರಸ್ತಾಪವಾಗಿದೆ.
 

click me!