ಜಾನ್ ಅಬ್ರಾಹಿಂ ಹೇಳಿದ ಸರಳತೆಯ ಗುಟ್ಟು

Published : May 19, 2018, 03:34 PM IST
ಜಾನ್ ಅಬ್ರಾಹಿಂ ಹೇಳಿದ ಸರಳತೆಯ ಗುಟ್ಟು

ಸಾರಾಂಶ

ಜಾನ್ ಅಬ್ರಹಾಂ. ಈ ಹೆಸರು ಕೇಳಿದರೆ ಒಂದು ಕ್ಷಣ ಅಭಿಮಾನಿಗಳ ಕಿವಿ ನೆಟ್ಟಗಾಗುತ್ತದೆ. ಸದೃಢ ಮೈ ಕಟ್ಟು, ಮುಖದಲ್ಲಿನ ಗಾಂಭೀರ್ಯವೇ ಮುಖ್ಯ ಆಕರ್ಷಣೆಯಾಗಿರುವ ಈ ನಟ ಹೇಗೆ ಬದುಕುತ್ತಿರಬಹುದು, ಹಿನ್ನೆಲೆ ಏನು ಎನ್ನುವ ಸಹಜ ಕುತೂಹಲ ಬಹಳಷ್ಟು ಜನರಿಗೆ  ಇರುತ್ತದೆ. ಇದಕ್ಕೆ ಸ್ವತಃ ಅಬ್ರಹಾಂ ಉತ್ತರ ಕೊಟ್ಟಿದ್ದಾರೆ. 

‘ನಾನು ಸಾಧಾರಣ ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದವನು. ಈಗಲೂ ಹಾಗೇ ಬದುಕು ನಡೆಸುತ್ತಿರುವುದು. ನನಗೆ ಯಾವುದೇ ಬಾಡಿಗಾರ್ಡ್‌ಗಳಿಲ್ಲ. ನಾನು ಎಂದೂ ವಾಚ್ ಕಟ್ಟಿದವನಲ್ಲ. ಈಗಲೂ ನನ್ನ ಬಳಿ ಇರುವುದು ಬೇಸಿಕ್ ಕಾರ್ ಮಾತ್ರ. ನನ್ನದೇ ಬೇಲಿಯನ್ನು ನಿರ್ಮಾಣ ಮಾಡಿಕೊಂಡು ಅದರೊಳಗೆ ಬದುಕುತ್ತಿದ್ದೇನೆ. ನಾನು ಅದರಿಂದ ಹೊರಗೆ ಬರಲು ಇಷ್ಟಪಡುವುದಿಲ್ಲ. ನನಗೆ ಯಾವುದೇ ಸ್ಟಾರ್ ಗಿರಿ, ಸೆಲೆಬ್ರಿಟಿ ಮೂಡ್ ಏನೂ ಇಲ್ಲ. ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇನೆ’ ಎಂದು ಅಬ್ರಹಾಂ ಹೇಳಿರುವುದು ಅವರ ಬಗ್ಗೆ ಗೊತ್ತಿಲ್ಲದೇ ಇರುವ  ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿಯಂತೂ ಹೌದು. ಆಕ್ಷನ್ ಫಿಲ್ಮ್‌ಗಳಲ್ಲಿ ದೊಡ್ಡ ದೊಡ್ಡ ಕಾರು, ಬೈಕ್‌ಗಳಲ್ಲಿ ರೈಡ್ ಮಾಡುವಾಗ ನಿಜ ಜೀವನದಲ್ಲಿ ಇವರು ಹೀಗೆಯೇ  ಇರಬಹುದಾ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ ಈಗ ಅವರದೇ ಮಾತಿನಿಂದ ಇಲ್ಲ ಸಿನಿಮಾ ಮತ್ತು ಜಾನ್ ಬದುಕಿನ ವಾಸ್ತವದಲ್ಲಿ ಸಾಕಷ್ಟು ವ್ಯತ್ಯಾಸವಿದೆ  ಎನ್ನುವುದಂತೂ ಸ್ಪಷ್ಟವಾಗುತ್ತದೆ.  

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ