
ಕಂಪ್ಲಿ : ಜೆಡಿಎಸ್‌ನ 2ನೇ ಪಟ್ಟಿಯಲ್ಲಿ ಶುಕ್ರವಾರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೆಪಿಸಿಸಿ ಎಸ್‌ಟಿ ಸೆಲ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ನಾರಾಯಣಪ್ಪ ಅವರಿಗೆ ಟಿಕೆಟ್ ಘೋಷಿಸಲಾಗಿದೆ!
ಈ ವಿಚಾರವಾಗಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಬಿ.ನಾರಾಯಣಪ್ಪ, ಜೆಡಿಎಸ್‌ನವರು ಯಾವುದೋ ವಿಶ್ವಾಸದ ಮೇಲೆ ನನಗೆ ಟಿಕೆಟ್ ಘೋಷಿಸಿದ್ದಾರೆ. ಆದರೆ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಕಾಂಗ್ರೆಸ್‌ನಲ್ಲಿದ್ದೇನೆ. ನನ್ನ ಗಮನಕ್ಕೆ ತಾರದೆ ಜೆಡಿಎಸ್‌ನವರು ನನಗೆ ಕಂಪ್ಲಿ ಕ್ಷೇತ್ರದ ಟಿಕೆಟ್ ಘೋಷಿಸಿದ್ದಾರೆ. ಇದರಿಂದ ನನಗೆ ತುಂಬಾ ಮುಜುಗರವಾಗಿದೆ ಎಂದರು.
ನಾನು ಟಿಕೆಟ್‌ಗಾಗಿ ಜೆಡಿಎಸ್‌ಗೆ ಅರ್ಜಿ ಸಲ್ಲಿಸಿರಲಿಲ್ಲ. ನಾನು ಇಂದಿಗೂ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದರು.
ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿರುವ ಬಿ. ನಾರಾಯಣಪ್ಪ ಅವರು ಮೂಲತಃ ಜೆಡಿಎಸ್‌ನವರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ್ದರು. ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆ ಪಕ್ಷದಿಂದ ಟಿಕೆಟ್ ದೊರಕಿರಲಿಲ್ಲ.