ಜಯನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ್ ಬಾಬು ಕಣಕ್ಕೆ?

First Published May 20, 2018, 4:49 PM IST
Highlights

ಜಯನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆ ರಂಗೇರಿದೆ. ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದಿಂದಾಗಿ ಮುಂದೂಡಲ್ಪಟ್ಟಿದೆ.  ದಿವಗಂತ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬುರವರನ್ನು  ಜಯನಗರ ಕ್ಷೇತ್ರದ  ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.  ಅನುಕಂಪದ ಅಲೆ ಎಬ್ಬಿಸಿ ಮತ ಸೆಳೆಯುವ ಪ್ಲಾನ್ ಇದಾಗಿದೆ. 

ಬೆಂಗಳೂರು (ಮೇ. 20):  ಜಯನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆ ರಂಗೇರಿದೆ. ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದಿಂದಾಗಿ ಮುಂದೂಡಲ್ಪಟ್ಟಿದೆ. 

ದಿವಗಂತ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬುರವರನ್ನು  ಜಯನಗರ ಕ್ಷೇತ್ರದ  ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.  ಅನುಕಂಪದ ಅಲೆ ಎಬ್ಬಿಸಿ ಮತ ಸೆಳೆಯುವ ಪ್ಲಾನ್ ಇದಾಗಿದೆ. ಕಾಂಗ್ರೆಸ್ ನಿಂದ ಕಣಕ್ಕಿಳಿದಿರುವ ರಾಮಲಿಂಗಾರೆಡ್ಡಿ ಮಗಳು ಸೌಮ್ಯಾರಿಗೆ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.  ಶತಾಯಗತಾಯ ಜಯನಗರ ಕ್ಷೇತ್ರ ಗೆಲ್ಲಲು ಬಿಜೆಪಿ ರಣತಂತ್ರ ಹೂಡಿದೆ. 

ರಾಮಲಿಂಗಾರೆಡ್ಡಿ ಪುತ್ರಿಯನ್ನಯ ಮಣಿಸಿ ಜಯನಗರ  ಕ್ಷೇತ್ರವನ್ನ ಮತ್ತೊಮ್ಮೆ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ.  ಜಯನಗರ ಚುನಾವಣಾ ಉಸ್ತುವಾರಿಯನ್ನು  ಕೇಂದ್ರ ಸಚಿವ ಅನಂತ್‌ಕುಮಾರ್’ಗೆ ವಹಿಸಲಾಗಿದೆ. ಅನಂತ್‌ಕುಮಾರ್ ಟೀಮ್ ನಲ್ಲಿ ಅಶೋಕ್ ಕೆಲಸ ಮಾಡಲು ಹೈಕಮಾಂಡ್ ಸೂಚನೆ ನೀಡಿದೆ. 
 

click me!