ಬಾದಾಮಿಯಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್ : ಮಧ್ಯರಾತ್ರಿ ಐಟಿ ದಾಳಿ

Published : May 08, 2018, 07:56 AM IST
ಬಾದಾಮಿಯಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್ : ಮಧ್ಯರಾತ್ರಿ ಐಟಿ ದಾಳಿ

ಸಾರಾಂಶ

ಚುನಾವಣೆಗೂ ಮುನ್ನ ಬಾದಾಮಿಯಲ್ಲಿ ಕಾಂಗ್ರೆಸ್​​ಗೆ ಬಿಗ್ ಶಾಕ್ ದೊರಕಿದೆ. ಕಾಂಗ್ರೆಸ್ ಮುಖಂಡನ ಸಂಬಂಧಿ ಒಡೆತನದ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  

ಬಾದಾಮಿ :  ಚುನಾವಣೆಗೂ ಮುನ್ನ ಬಾದಾಮಿಯಲ್ಲಿ ಕಾಂಗ್ರೆಸ್​​ಗೆ ಬಿಗ್ ಶಾಕ್ ದೊರಕಿದೆ. ಕಾಂಗ್ರೆಸ್ ಮುಖಂಡನ ಸಂಬಂಧಿ ಒಡೆತನದ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  

ಮಧ್ಯ ರಾತ್ರಿ ವೇಳೆ ಕಾರ್ಯಾಚರಣೆಗೆ ಇಳಿದ ಐಟಿ ಅಧಿಕಾರಿಗಳು ಬಾದಾಮಿ ಹೊರವಲಯದ ರೆಸಾರ್ಟ್​​ನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.  ಸುಮಾರು 8 ರಿಂದ 10 ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.  

ವಿಜಯನಗರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಆನಂದ್ ಸಿಂಗ್ ಸಂಬಂಧಿ ಒಡೆತನದ ರೆಸಾರ್ಟ್ ಇದಾಗಿದ್ದು, ಪಾಂಡುರಂಗ ಸಿಂಗ್​ ಎನ್ನುವವರಿಗೆ ಸೇರಿದ್ದಾಗಿದೆ.  ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ  ರೆಸಾರ್ಟ್​ನಲ್ಲಿ ಸಿದ್ದರಾಮಯ್ಯ ಆಪ್ತ ಸಿಎಂ ಇಬ್ರಾಹಿಂ ಅವರು ಇದ್ದರು ಎನ್ನಲಾಗಿದೆ.

ಇನ್ನು  ಸಿಆರ್​ಪಿ ಎಫ್ ಹಾಗೂ ಸಿವಿಲ್ ಪೊಲೀಸ್​ರಿಂದ ರೆಸಾರ್ಟ್​ಗೆ ಬಿಗಿ ಭದ್ರತೆ ಒದಗಿಸಲಾಗಿದೆ.  

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ