
ಚಿತ್ರದುರ್ಗ (ಮೇ. 11): ಜಿಲ್ಲೆ ಗಡಿಭಾಗದ ರಾಯದುರ್ಗದ ಹತ್ತಿರ ಯದ್ದಲಬೊಬ್ಬನಹಟ್ಟಿ ಗ್ರಾಮದಲ್ಲಿ ಮಧ್ಯರಾತ್ರಿ ಐಟಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 2 ಕೋಟಿ 17 ಲಕ್ಷ ರೂ.ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶದದಿಂದ ಮೊಳಕಾಲ್ಮೂರಿಗೆ ಮತದಾದರರಿಗೆ ಹಂಚಲು ತರುತ್ತಿದ್ದ ಹಣ ಇದಾಗಿತ್ತು ಎಂದು ಹೇಳಲಾಗಿದೆ. ಬಿಜೆಪಿ ಅಭ್ಯರ್ಥಿಗೆ ಸೇರಿದ ಹಣ ಎಂದು ಡ್ರೈವರ್’ನಿಂದ ಐಟಿ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.
ಸದ್ಯ ಹಣವನ್ನ ವಶಕ್ಕೆ ಪಡೆದು ಮೊಳಕಾಲ್ಮೂರು ಎಸ್ ಬಿ ಐ ಬ್ಯಾಂಕ್ ಗೆ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ.