ಹುಚ್ಚಾ ವೆಂಕಟ್’ಗೆ ವಿಶೇಷ ಗುರುತು ನೀಡಿದ ಚುನಾವಣಾ ಆಯೋಗ

Published : Apr 28, 2018, 10:06 AM IST
ಹುಚ್ಚಾ ವೆಂಕಟ್’ಗೆ ವಿಶೇಷ ಗುರುತು ನೀಡಿದ ಚುನಾವಣಾ ಆಯೋಗ

ಸಾರಾಂಶ

ನಟ ಹುಚ್ಚಾ ವೆಂಕಟ್ ಅವರು ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರವಾದ ರಾಜರಾಜೇಶ್ವರಿ ನಗರದಿಂದ ಕಣಕ್ಕೆ ಇಳಿದಿದ್ದಾರೆ. ನಟ ಹುಚ್ಚಾ ವೆಂಕಟ್ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ  ಸ್ಪರ್ಧೆ ಮಾಡಿದ್ದಾರೆ. ಹುಮ್ಮಸ್ಸಿನೊಂದಿಗೆ ಕಣದಲ್ಲಿರುವ ವೆಂಕಟ್ ಗೆ ಚುನಾವಣಾ ಆಯೋಗವು ವಿಶೇಷ ಗುರುತನ್ನು ನೀಡಿದೆ.

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ವಿವಿಧ ಅಭ್ಯರ್ಥಿಗಳು ಗೆಲುವಿಗಾಗಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.  ಗೆಲುವಿಗಾಗಿ ಅಭ್ಯರ್ಥಿಗಳ ಶತಪ್ರಯತ್ನ ಸಾಗಿದೆ. 

ಇತ್ತ ನಟ ಹುಚ್ಚಾ ವೆಂಕಟ್ ಅವರು ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರವಾದ ರಾಜರಾಜೇಶ್ವರಿ ನಗರದಿಂದ ಕಣಕ್ಕೆ ಇಳಿದಿದ್ದಾರೆ. ನಟ ಹುಚ್ಚಾ ವೆಂಕಟ್ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ  ಸ್ಪರ್ಧೆ ಮಾಡಿದ್ದಾರೆ. ಹುಮ್ಮಸ್ಸಿನೊಂದಿಗೆ ಕಣದಲ್ಲಿರುವ ವೆಂಕಟ್ ಗೆ ಚುನಾವಣಾ ಆಯೋಗವು ವಿಶೇಷ ಗುರುತನ್ನು ನೀಡಿದೆ.

ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಹುಚ್ಚಾ ವೆಂಕಟ್ ಅವರಿಗೆ ಚಪ್ಪಲಿ ಗುರುತು ನೀಡಲಾಗಿದೆ. ಮಾತು ಮಾತಿಗೆ ಎಕ್ಕಡಾ ಎನ್ನುವ ಡೈಲಾಗ್  ಹೊಡೆಯುವ ವೆಂಕಟ್’ಗೆ ಎಕ್ಕಡಾ ಗುರುತು ದೊರೆತಿದೆ.  

ಸದ್ಯ ಇಲ್ಲಿ ಕಾಂಗ್ರೆಸ್’ನಿಂದ ಮುನಿರತ್ನ ಅವರು ಕಣದಲ್ಲಿ ಇದ್ದು,  ಜೆಡಿಎಸ್’ನಿಂದ ಬಿಜೆಪಿ ಟಿಕೆಟ್ ಸಿಗದೇ ಪಕ್ಷಾಂತರ ಮಾಡಿರುವ ರಾಮಚಂದ್ರ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ಮುನಿರಾಜು ಇಲ್ಲಿಂದ ಸ್ಪರ್ಧೆ ಮಾಡುತ್ತಿದ್ದಾರೆ. ತಮ್ಮ ಚಪ್ಪಲಿ ಗುರುತಿನೊಂದಿಗೆ ಈ ಮೂವರನ್ನು ಎದುರಿಸಲು ವೆಂಕಟ್ ಸಜ್ಜಾಗಿದ್ದಾರೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ