ಹೇಮಾವತಿ - ನೇತ್ರಾವತಿ ನದಿ ಜೋಡಣೆಗೆ ಬಿಜೆಪಿ ಬದ್ಧ

First Published May 6, 2018, 9:43 AM IST
Highlights

ಭದ್ರಾ ಮೇಲ್ದಂಡೆ ಯೋಜನೆ, ಹೇಮಾವತಿ-ನೇತ್ರಾವತಿ ನದಿ ಜೋಡಣೆ ಕನಸು ನನಸು ಮಾಡಲು ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ಸರ್ಕಾರ 50 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ ನೀರಾವರಿ ಯೋಜನೆಗಳನ್ನು ಬಿಜೆಪಿ ಪೂರ್ಣಗೊ
ಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ತುಮಕೂರು: ಭದ್ರಾ ಮೇಲ್ದಂಡೆ ಯೋಜನೆ, ಹೇಮಾವತಿ-ನೇತ್ರಾವತಿ ನದಿ ಜೋಡಣೆ ಕನಸು ನನಸು ಮಾಡಲು ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ಸರ್ಕಾರ ೫೦ ವರ್ಷಗಳಲ್ಲಿ ಮಾಡಲು ಸಾಧ್ಯವಾಗದ ನೀರಾವರಿ ಯೋಜನೆಗಳನ್ನು ಬಿಜೆಪಿ ಪೂರ್ಣಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ, ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಲ್ಲಿ ಕಾಂಗ್ರೆಸ್ ಪಕ್ಷ ಭಾರೀ ವಿಳಂಬ ಮಾಡಿದೆ ಎಂದು ಹರಿಹಾಯ್ದಿದ್ದಾರೆ.

ಕಲ್ಪತರು ನಾಡಿನ ಬಹುದಿನಗಳ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆ, ಹೇಮಾವತಿ-ನೇತ್ರಾವತಿ ನದಿ ಜೋಡಣೆ ಕನಸು ನನಸು ಮಾಡಲು ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ಸರ್ಕಾರ ೫೦ ವರ್ಷಗಳಲ್ಲಿ ಮಾಡಲು ಸಾಧ್ಯವಾಗದ ನೀರಾವರಿ ಯೋಜನೆಗಳನ್ನು ಬಿಜೆಪಿ ಪೂರ್ಣಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ರ‌್ಯಾಲಿಯಲ್ಲಿ ಮಾತನಾಡಿ ರೈತರ ಹೆಸರಿನಲ್ಲಿ ಹಲವು ಘೋಷಣೆ ಮಾಡುವ ಕಾಂಗ್ರೆಸ್ ಯಾಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿಲ್ಲ. ಹೇಮಾವತಿ ಏಕೆ ಇನ್ನೂ ತುಮಕೂರಿಗೆ ಬಂದಿಲ್ಲ? ಎತ್ತಿನಹೊಳೆ ಯೋಜನೆ ವಿಚಾರ ಎತ್ತಿದ ಮೋದಿ, ಈ ಯೋಜನೆಯಿಂದ ತುಮಕೂರಿಗೆ ಕುಡಿಯುವ ನೀರು ಒದಗಿಸಲು ಯಾಕೆ ವಿಳಂಬ ಮಾಡಲಾಗುತ್ತಿದೆ ಎಂದು ಮೋದಿ ಪ್ರಶ್ನಿಸಿದರು. ಈ ಜಿಲ್ಲೆಯ ರೈತರಿಗೆ ದಿಲ್ಲಿಯಲ್ಲಿ ಹಾಗೂ ಕರ್ನಾಟಕದಲ್ಲಿ 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ನೀರು ತಲುಪಿಸುವ ಕೆಲಸ ಮಾಡಬೇಕಿತ್ತೋ, ಬೇಡವೋ? ಎಂದ ಅವರು, ಕಾಂಗ್ರೆಸ್ಸಿಗರಿಗೆ ರೈತರ ಜಮೀನಿಗೆ ನೀರು ತಲುಪಿಸುವ ವಿಚಾರದಲ್ಲಿ ಆಸಕ್ತಿ ಇಲ್ಲ, ಬದಲಾಗಿ ಅಲ್ಲಿಂದ, ಇಲ್ಲಿಂದ ಹಣ ಆಚೀಚೆ ಮಾಡಿ ತಿಜೋರಿ ತುಂಬಿಸುವ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಹಣವನ್ನೆಲ್ಲಾ ಸಚಿವರು ಖಜಾನೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದರು.

ಹೇಮಾವತಿ ಮತ್ತು ನೇತ್ರಾವತಿ ನದಿ ಜೋಡಣೆ ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಗೊಳ್ಳುವುದಾಗಿ  ಪ್ರಧಾನಿ ಮೋದಿ ಭರವಸೆ ನೀಡಿದರು. ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾದ ನದಿ ಜೋಡಣೆಯನ್ನು ಪೂರ್ಣಗೊಳಿಸಲು ನಾವು ಬದ್ಧರಾಗಿದ್ದು, ಇದರಿಂದ ರಾಜ್ಯದ ೮ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ಕಳೆದ ೩೫ ವರ್ಷಗಳಿಂದ ನಿಂತು ಹೋಗಿರುವ ನೀರಾವರಿ ಯೋಜನೆಗಳನ್ನು ಒಂದು ಲಕ್ಷ ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದೇವೆ. ಇದರಲ್ಲಿ ಕರ್ನಾಟಕದ ಐದು ಯೋಜನೆಗಳು ಸೇರಿವೆ. ನಮ್ಮ ಸರ್ಕಾರ   ಸಣ್ಣ ನೀರಾವರಿ, ತುಂತುರು ನೀರಾವರಿ ಯೋಜನೆಗಳ ಮೂಲಕ ೨೪ ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ನೀರು ಕೊಟ್ಟಿದ್ದೆ.
ಆದರೆ, ಕಾಂಗ್ರೆಸ್ ಸರ್ಕಾರ ಎತ್ತಿನಹೊಳೆ ಕುಡಿಯುವ ನೀರು ಯೋಜನೆಯನ್ನು ಇಲ್ಲಿವರೆಗೂ ಮುಗಿಸಿಲ್ಲ. ಆ ಯೋಜನೆ ದಾರಿ ತಪ್ಪುತ್ತಲೇ ಸಾಗುತ್ತಿದೆ ಎಂದರು. 

click me!