ಭಾರಿ ಮಳೆಯಾಗಬಹುದು : ಬೇಗ ಮತ ಹಾಕಿ ಬನ್ನಿ

First Published May 12, 2018, 7:13 AM IST
Highlights

ಳೆದ ಎರಡು ದಿನಗಳಂತೆ ಮತದಾನದ ದಿನವಾದ ಇಂದು ಕೂಡ ಸಂಜೆ ವೇಳೆಗೆ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ‘ಸಂಜೆ ತಾನೇ ಮಳೆಯಾಗುತ್ತೆ?’ ಎಂದು ಉದಾಸೀನ ಮಾಡಿ ತಡ ಮಾಡದಿರಿ. ಯಾವಾಗ ಬೇಕಾದರೂ ಮಳೆ ಆದೀತು. 

ಬೆಂಗಳೂರು: ಕಳೆದ ಎರಡು ದಿನಗಳಂತೆ ಮತದಾನದ ದಿನವಾದ ಇಂದು ಕೂಡ ಸಂಜೆ ವೇಳೆಗೆ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ‘ಸಂಜೆ ತಾನೇ ಮಳೆಯಾಗುತ್ತೆ?’ ಎಂದು ಉದಾಸೀನ ಮಾಡಿ ತಡ ಮಾಡದಿರಿ. ಯಾವಾಗ ಬೇಕಾದರೂ ಮಳೆ ಆದೀತು. 

ಹಾಗಾಗಿ, ಆದಷ್ಟು ಬೇಗ ಮತಗಟ್ಟೆಗೆ ತೆರಳಿ ಪ್ರಜಾಪ್ರಭುತ್ವ ನೀಡಿರುವ ಅತಿ ದೊಡ್ಡ ಹಕ್ಕನ್ನು ಚಲಾಯಿಸಿ. ಮಹತ್ವದ ಮತದಾನದ ದಿನವಾದ ಇಂದು ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಅತಿ ಹೆಚ್ಚಿದೆ. ಆದರೆ, ಇದು ಸಂಜೆ ಆರರ ಮಳೆ ಎಂಬ ಭಾವನೆಯಿಂದ 
ತಡ ಮಾಡಬೇಡಿ, ವರ್ಷಧಾರೆಯನ್ನು ನಂಬುವ ಹಾಗಿಲ್ಲ. ಹೀಗಾಗಿ ಸಾಧ್ಯವಾದಷ್ಟು ಬೇಗ ಮತಗಟ್ಟೆಗೆ ತೆರಳಿ ಮತದಾನ ಮಾಡಿ.  


ಪ್ರಜಾಪ್ರಭುತ್ವ ನೀಡಿರುವ ಅತಿ ದೊಡ್ಡ ಹಕ್ಕನ್ನು ಚಲಾಯಿಸಿ. ಕಳೆದ ಎರಡು ದಿನಗಳಂತೆ ಮತದಾನದ ದಿನವಾದ ಮೇ ಇಂದು ಕೂಡ ಸಂಜೆ ವೇಳೆಗೆ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿ ಚದುರಿದಂತೆ  ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ವಿವಿಧೆಡೆಯೂ ಮಳೆ ಬೀಳುವ ನಿರೀಕ್ಷೆ ಇದೆ. ಸಂಜೆ 4 ಗಂಟೆ ನಂತರ ಮಳೆ ಆರಂಭವಾಗಬಹುದು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. 

ಹಾಗಾಗಿ ಮತದಾರರು ಸಂಜೆವರೆಗೂ ಕಾಯದೆ ಬೆಳಗ್ಗೆಯಿಂದಲೇ ಮತಗಟ್ಟೆಗೆ ತೆರಳಿ ಮತದಾನ ಮಾಡುವುದು ಸೂಕ್ತ. ಮಧ್ಯಾಹ್ನದ  ನಂತರವೇ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನ 3ರ ಒಳಗೆ ಮತದಾನ ಮಾಡಿದರೆ ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಬಂಗಾಳಕೊಲ್ಲಿ ಮತ್ತು ಅರಬ್ಬಿಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ದಕ್ಷಿಣ ಭಾಗದವರೆಗೆ ಗಾಳಿಯ ಒತ್ತಡ ತಗ್ಗಿದೆ. 

ಇದು ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಎರಡೂ ಭಾಗಗಳಿಂದ ಉತ್ತಮ ತೇವಾಂಶದ ಮೋಡಗಳು ಹೆಚ್ಚಾಗಿ ಒಳನಾಡಿನ ಒಳಗೆ ಚಲಿಸುವಂತೆ ಮಾಡಿದೆ. ಈ ಮೋಡಗಳು ರಾಜ್ಯದಲ್ಲಿ ಮಳೆ ಸುರಿಸುತ್ತಿವೆ. ಮೋಡಗಳ ದಟ್ಟಣೆ ಹೆಚ್ಚಿರುವುದರಿಂದ ಮೇ12ರ ಶನಿವಾರ ಕೂಡ ದಕ್ಷಿಣ ಒಳನಾಡು ಮತ್ತು ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಚದುರಿದಂತೆ ಮಳೆ ನಿರೀಕ್ಷಿಸಲಾಗಿದೆ. 

ಉತ್ತರ ಒಳನಾಡಿನ ಕೆಲವೆಡೆಯೂ ಮಳೆ ಬೀಳುವ ಸಾಧ್ಯತೆ ಇದೆ. ಪೂರ್ವ ಮುಂಗಾರಿನಲ್ಲಿ ಶೇ.90ರಷ್ಟು ಮಳೆ ಸಂಜೆ ಹಾಗೂ ರಾತ್ರಿ ವೇಳೆಯೇ ಆಗಿದೆ. ಶನಿವಾರ ಕೂಡ ಸಂಜೆ 4 ಗಂಟೆ ನಂತರ ಮಳೆ ಆರಂಭವಾಗಬಹುದು. ಹಾಗಾಗಿ ಮತದಾರರು ಸಂಜೆಯೊಳಗೆ ಮತಗಟ್ಟೆಗೆ ತೆರಳಿ ಮತದಾನ ಮಾಡುವುದು ಒಳಿತು ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸರೆಡ್ಡಿ ಸಲಹೆ ನೀಡಿದ್ದಾರೆ.

click me!