ಕೆಪಿಎಸ್ಸಿಯಲ್ಲಿ 2 ಕೋಟಿ ಗುಳುಂ ಮಾಡಿದ್ರಾ ಶ್ಯಾಂ ಭಟ್?

First Published May 10, 2018, 11:06 AM IST
Highlights

ಕೆಪಿಎಸ್ ಸಿ ಅಧ್ಯಕ್ಷ  ಶ್ಯಾಮ್ ಭಟ್ ಎಸಿ, ಡಿಎಸ್ಪಿ ,ಸೇರಿ 460 ಹುದ್ದೆಗಳಿಗೆ ತಲಾ ಒಂದರಿಂದ ಎರಡು ಕೋಟಿ ಹಣ ಸಂಗ್ರಹ ಮಾಡಿದ್ದಾರೆ ಎಂದು  ಮಾಜಿ ಸಚಿವ ಎಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.  

ಬೆಂಗಳೂರು (ಮೇ. 10):  ಕೆಪಿಎಸ್ ಸಿ ಅಧ್ಯಕ್ಷ  ಶ್ಯಾಮ್ ಭಟ್ ಎಸಿ, ಡಿಎಸ್ಪಿ ,ಸೇರಿ 460 ಹುದ್ದೆಗಳಿಗೆ ತಲಾ ಒಂದರಿಂದ ಎರಡು ಕೋಟಿ ಹಣ ಸಂಗ್ರಹ ಮಾಡಿದ್ದಾರೆ ಎಂದು  ಮಾಜಿ ಸಚಿವ ಎಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.  

ಶ್ಯಾಮ್ ಭಟ್ ಹಾಗೂ ಕೆಂಪಯ್ಯ ಜಂಟಿಯಾಗಿ ಹಣ ಸಂಗ್ರಹ ಮಾಡಿದ್ದಾರೆ.  ಕೆಪಿಎಸ್’ಸಿ ಸೀಟ್’ಗಳನ್ನ ಮಾರಾಟಕ್ಕಿಟ್ಟಿದ್ದಾರೆ. ಬಿಡಿಎ ಹಾಳುಮಾಡಿ ಬಂದ ಶ್ಯಾಂ ಭಟ್  ಎಸಿ,ಡಿಎಸ್ಪಿ ಸೇರಿ ಹಲವು ಹುದ್ದೆ ನೇಮಕಕ್ಕೆ ಹಣ ಸಂಗ್ರಹ ಮಾಡಿ ಕೆಪಿಎಸ್ ಸಿಯನ್ನು ಹಾಳು ಮಾಡಿದ್ದಾರೆ.  

ಐಟಿ ಇಲಾಖೆ ಶ್ಯಾಮ್ ಭಟ್ ಮೇಲೆ ಕಣ್ಣಿಡಲಿ. ಅವರು ಎಲ್ಲಿ ಹೋಗಿದ್ದರು, ಯಾರಿಗೆ ಫೋನ್ ಮಾಡಿದ್ದರು ಎಂಬ ಬಗ್ಗೆ ತನಿಖೆಯಾಗಲಿ. ತನಿಖೆಯಾದ್ರೆ ಈ ಬಗ್ಗೆ ಹೆಚ್ಚಿನ‌ ಮಾಹಿತಿ ನೀಡುತ್ತೇನೆ.  ಎಸಿ‌,ಡಿಎಸ್ಪಿ ಹುದ್ದೆಗೆ 2 ಕೋಟಿ ರೂ, ತಹಸಿಲ್ದಾರ್ ಹುದ್ದೆಗೆ 1 ಕೋಟಿ ರೂ ಹಣ ಸಂಗ್ರಹ ಮಾಡಿದ್ದಾರೆ.  ಕೆಪಿಎಸ್’ಸಿ ಕಾಂಗ್ರೆಸ್’ಗೆ ಹಣ ಸಂಗ್ರಹಿಸುವ ಏಜೆನ್ಸಿಯಾಗಿದೆ. ಶ್ಯಾಮ್ ಭಟ್ ಈಗ ಮೈಸೂರಿನಲ್ಲಿ ಕ್ಯಾಂಪ್ ಹಾಕಿದ್ದಾರೆ. ಹಾಗಾಗಿ ಅವರ ಮೇಲೆ ಚುನಾವಣಾ ಆಯೋಗ ಹಾಗೂ ಐಟಿ ಇಲಾಖೆ ಹದ್ದಿನ ಕಣ್ಣಿಡಲಿ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು  ಐಟಿ ಇಲಾಖೆ ಹಾಗೂ ಚುನಾವಣಾ ಆಯೋಗಕ್ಕೆ  ಮಾಜಿ ಸಚಿವ ಎಚ್.ಡಿ.ರೇವಣ್ಣ‌ ಆಗ್ರಹಿಸಿದ್ದಾರೆ.  

click me!