ಕರ್ನಾಟಕ ಚುನಾವಣೆ: ಗದಗದಲ್ಲಿ ಕೈಗೆ ಗುದ್ದು ನೀಡಿ ಅರಳಿದ ಕಮಲ

Published : May 15, 2018, 08:08 PM ISTUpdated : May 15, 2018, 08:09 PM IST
ಕರ್ನಾಟಕ ಚುನಾವಣೆ: ಗದಗದಲ್ಲಿ ಕೈಗೆ ಗುದ್ದು  ನೀಡಿ ಅರಳಿದ ಕಮಲ

ಸಾರಾಂಶ

ಕರ್ನಾಟಕ ವಿಧಾನಸಭೆಗೆ ಕಳೆದ ಮೇ. 12ರಂದು ನಡೆದ ಚುನಾವಣೆಗಳ ಫಲಿತಾಂಶ ಇಂದು ಹೊರಬಂದಿದ್ದು, ಕಾಂಗ್ರೆಸ್ ಭದ್ರಕೋಟೆಯಾದ ಗದಗದಲ್ಲಿ ಬಿಜೆಪಿಯ ಕಮಲ ಅರಳಿದೆ. ಗದಗ ಜಿಲ್ಲೆಯ 4 ವಿಧಾನಸಭಾ ಸ್ಥಾನಗಳ ಪೈಕಿ 3ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಬೆಂಗಳೂರು [ಮೇ.15]:  ಕರ್ನಾಟಕ ವಿಧಾನಸಭೆಗೆ ಕಳೆದ ಮೇ. 12ರಂದು ನಡೆದ ಚುನಾವಣೆಗಳ ಫಲಿತಾಂಶ ಇಂದು ಹೊರಬಂದಿದ್ದು, ಕಾಂಗ್ರೆಸ್ ಭದ್ರಕೋಟೆಯಾದ ಗದಗದಲ್ಲಿ ಬಿಜೆಪಿಯ ಕಮಲ ಅರಳಿದೆ. ಗದಗ ಜಿಲ್ಲೆಯ 4 ವಿಧಾನಸಭಾ ಸ್ಥಾನಗಳ ಪೈಕಿ 3ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

2013ರ ವಿಧಾನಸಬಾ ಚುನಾವಣೆಯಲ್ಲಿ ಎಲ್ಲಾ 4 ಸ್ಥಾನಗಳಲ್ಲಿ ಜಯಭೆರಿ ಬಾರಿಸಿದ್ದ ಕಾಂಗ್ರೆಸ್ ಈ ಬಾರಿ ಕೇವಲ 1 ಸ್ಥಾನವನ್ನು ಗಳಿಸುವಲ್ಲಿ ಸಫಲವಾಗಿದೆ. ಕಳೆದ ಬಾರಿ ಸುಮಾರು 33 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದ ಗ್ರಾಮೀಆಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಗದಗ ಕ್ಷೇತ್ರದಿಂದ ಬಹಳ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕ್ಷೇತ್ರಗೆಲುವುಪಕ್ಷವೋಟುಸೋಲುಪಕ್ಷವೋಟುಅಂತರ
ಶಿರಹಟ್ಟಿರಾಮಪ್ಪ ಸೋಬೆಪ್ಪ ಲಮಾಣಿಬಿಜೆಪಿ91967ದೊಡ್ಡಮನಿ ಆರ್ ಸಿದ್ದಲಿಂಗಪ್ಪಕಾಂಗ್ರೆಸ್6197429993
ಗದಗಎಚ್.ಕೆ. ಪಾಟೀಲ್ಕಾಂಗ್ರೆಸ್77699ಅನಿಲ್ ಪಿ. ಮೆಣಸಿನಕಾಯಿಬಿಜೆಪಿ758311868
ರೋಣಕಲಕಪ್ಪ ಜಿ ಬಂಡಿಬಿಜೆಪಿ83735ಗುರುಪಾದಗೌಡ ಎಸ್ ಪಾಟೀಲ್ಕಾಂಗ್ರೆಸ್764017334
ನರಗುಂದ ಸಿ.ಸಿ.ಪಾಟೀಲ್ಬಿಜೆಪಿ73045ಬಿ.ಆರ್. ಯಾವಗಲ್ಕಾಂಗ್ರೆಸ್650667979

ಕಳೆದ ಬಾರಿ ಶಾಸಕರಾಗಿ  ಆಯ್ಕೆಯಾಗಿದ್ದ ಮೂವರೂ ಕಾಂಗ್ರೆಸ್ ಅಭ್ಯರ್ಥಿಗಳು ಈ ಬಾರಿ ಜಯಗಳಿಸಲು ವಿಫಲರಾಗಿದ್ದಾರೆ.  ಗದಗ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 74% ಮತದಾನವಾಗಿದೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ