’ಸಿಎಂ ಸಿದ್ದರಾಮಯ್ಯ ದಲಿತ ವಿರೋಧಿ; ಖರ್ಗೆ ಪಲಾಯನವಾದಿ’

First Published May 8, 2018, 12:23 PM IST
Highlights

ಸಿಎಂ ಸಿದ್ದರಾಮಯ್ಯ ದಲಿತ ವಿರೋಧಿ. ಮಲ್ಲಿಕಾರ್ಜುನ ಖರ್ಗೆ ಪಲಾಯನವಾದಿ.‌ ದಲಿತ ವಿರೋಧಿ ಅಂತ ಯಾರಾದರೂ ಇದ್ರೆ ಅದು ಸಿದ್ದರಾಮಯ್ಯ ಮಾತ್ರ.  ಸಿದ್ದರಾಮಯ್ಯ ಕೆಟ್ಟ ಜಾತಿ ವಾದಿ ಎಂದು ಮಾಜಿ ಸಚಿವ  ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ‌

ಮೈಸೂರು (ಮೇ. 08): ಸಿಎಂ ಸಿದ್ದರಾಮಯ್ಯ ದಲಿತ ವಿರೋಧಿ. ಮಲ್ಲಿಕಾರ್ಜುನ ಖರ್ಗೆ ಪಲಾಯನವಾದಿ.‌ ದಲಿತ ವಿರೋಧಿ ಅಂತ ಯಾರಾದರೂ ಇದ್ರೆ ಅದು ಸಿದ್ದರಾಮಯ್ಯ ಮಾತ್ರ.  ಸಿದ್ದರಾಮಯ್ಯ ಕೆಟ್ಟ ಜಾತಿ ವಾದಿ ಎಂದು ಮಾಜಿ ಸಚಿವ  ಶ್ರೀನಿವಾಸ  ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ‌

ಸಿದ್ದರಾಮಯ್ಯ  ದಲಿತರನ್ನು ಒಬ್ಬಬ್ಬೊಬ್ಬರಾಗಿ ಮುಗಿಸಿದ. ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್ ಮೂಲೆ ಗುಂಪಾಗಿದ್ದಾರೆ.  ಡಾ.ಮಹದೇವಪ್ಪ, ಆಂಜನೇಯ ಅವರಿಗೆ ಸಿದ್ದರಾಮಯ್ಯನ ವಿರುದ್ಧ ಮಾತನಾಡುವ ಶಕ್ತಿ ಇದೆಯಾ ? 2008 ರ ಚುನಾವಣೆಯಲ್ಲಿ ಖರ್ಗೆ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರು.  ನಂತರದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಿಟ್ಟು ಕೇಂದ್ರಕ್ಕೆ ಓಡಿ ಹೋದ.  ಖರ್ಗೆ ಏನು ನಾಯಕರೇನ್ರಿ?   ನಾಚಿಕೆ ಇಲ್ಲದೇ ಪ್ರಚಾರಕ್ಕೆ ಬರ್ತೀರಾ ಎಂದು ಶ್ರೀನಿವಾಸ ಪ್ರಸಾದ್ ಟೀಕಿಸಿದ್ದಾರೆ. 

ಸಿದ್ದರಾಮಯ್ಯ ಸಿಎಂ ಆಗುವಾಗ ಶಾಸಕಾಂಗ ಸಭೆಯಲ್ಲಿ ಇದೇ ಖರ್ಗೆ ಕಣ್ಣೀರು ಹಾಕಿದ್ರು. 30-40 ವರ್ಷಗಳಿಂದ ಕಾಂಗ್ರೆಸ್ ಕಟ್ಟಿದ್ದೇವೆ. 2-3 ವರ್ಷಗಳ ಹಿಂದೆ ಬಂದ ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಾರೆ ಅಂತ ನೀವು ಕಣ್ಣೀರು ಹಾಕಲಿಲ್ಲವೇ ? ಇದೆಲ್ಲ ನಿಮಗೆ ಮರೆತು ಹೋಗಿದೆಯಾ ಖರ್ಗೆ ? ಎಂದು ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಕೆಪಿಸಿಸಿ ಅಧ್ಯಕ್ಷ ಎಲ್ಲಿಯೂ ಕಾಣಿಸುತ್ತಿಲ್ಲ.  ರಾಹುಲ್ ಗಾಂಧಿ ಬಂದಾಗ ಹಾರ ಹಿಡಿದುಕೊಂಡು ಹಿಂದೆ ನಿಲ್ಲುತ್ತಾರೆ.  ಪರಮೇಶ್ವರ್ ಬ್ಲಾಕ್ ಪ್ರೆಸಿಡೆಂಟ್’ಗಿಂತಲೂ ಕಡೆಯಾಗಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ. 

ಸಿದ್ದರಾಮಯ್ಯನನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ಪಶ್ಚಾತ್ತಾಪ ಇದೆ. ಅವತ್ತಿನ ಸಂಧರ್ಭದಲ್ಲಿ ಮುಖ್ಯಮಂತ್ರಿ ಮಾಡಬೇಕಿತ್ತು. ಆದರೆ ಇವತ್ತು ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಶ್ರೀನಿವಾಸ  ಪ್ರಸಾದ್ ಹೇಳಿದ್ದಾರೆ. 
 

ರೆ. ‌

click me!