ಬಿಎಸ್’ವೈ ವಿರುದ್ಧದ ಡಿನೋಟಿಫಿಕೇಶನ್ ಕೇಸಿಗೆ ಮರುಜೀವ?

First Published May 4, 2018, 1:44 PM IST
Highlights

ಬಿ.ಎಸ್.ಯಡಿಯೂರಪ್ಪ ವಿರುದ್ಧದ ಲೊಟ್ಟೆಗೊಲ್ಲಹಳ್ಲಿ ಕೇಸ್ ಗೆ ಮತ್ತೆ ಮರುಜೀವ ಬಂದಿದೆ. ರಾಜ್ಯ ಸರ್ಕಾರ ಹಾಗೂ ಎಸಿಬಿಗೆ ಹೈಕೋರ್ಟ್  ರಜಾಕಾಲದ ಪೀಠ ನೋಟಿಸ್ ನೀಡಿದೆ. 

ಬೆಂಗಳೂರು (ಮೇ. 4):  ಬಿ.ಎಸ್.ಯಡಿಯೂರಪ್ಪ ವಿರುದ್ಧದ ಲೊಟ್ಟೆಗೊಲ್ಲಹಳ್ಲಿ ಕೇಸ್ ಗೆ ಮತ್ತೆ ಮರುಜೀವ ಬಂದಿದೆ. ರಾಜ್ಯ ಸರ್ಕಾರ ಹಾಗೂ ಎಸಿಬಿಗೆ ಹೈಕೋರ್ಟ್  ರಜಾಕಾಲದ ಪೀಠ ನೋಟಿಸ್ ನೀಡಿದೆ. 

ಲೊಟ್ಟೆಗೊಲ್ಲಹಳ್ಳಿ  ಡಿನೋಟಿಪಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಪಿಐಎಲ್ ಸಲ್ಲಿಸಿದ್ದರು.  ಬಿಎಸ್’ವೈ ಸಿಎಂ ಆಗಿದ್ದ ವೇಳೆ 1 ಎಕರೆ 4 ಗುಂಟೆ ಡಿನೋಟಿಫೈ ಮಾಡಿದ್ದ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಜಿ. ಬಿ ಅತ್ರಿ  ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಪ್ರಕರಣದ ಮರು ತನಿಖೆಗೆ ಕೋರಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದಾರೆ. 

ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. 

click me!