ಸುಪ್ರೀಂನಲ್ಲೂ 'ಕೈ'ಗೆ ಹಿನ್ನಡೆ; ಪ್ರಮಾಣವಚನಕ್ಕೆ ತಡೆ ನೀಡಲು ನಕಾರ

Published : May 17, 2018, 12:02 AM ISTUpdated : May 17, 2018, 06:06 AM IST
ಸುಪ್ರೀಂನಲ್ಲೂ 'ಕೈ'ಗೆ ಹಿನ್ನಡೆ;  ಪ್ರಮಾಣವಚನಕ್ಕೆ ತಡೆ ನೀಡಲು ನಕಾರ

ಸಾರಾಂಶ

ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ಇಲ್ಲ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿಕೆ ಶಾಸಕರ ಬೆಂಬಲಪತ್ರದ ಪ್ರತಿ ಸಲ್ಲಿಸುವಂತೆ ಬಿಎಸ್‌ವೈಗೆ  ಸೂಚನೆ

ಬೆಂಗಳೂರು(ಮೇ.16): ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ನೀಡಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂ ಕೋರ್ಟ್ ಪ್ರಮಾಣವಚನಕ್ಕೆ ತಡೆ ನೀಡಲು ನಿರಾಕರಿಸಿದೆ. ಶುಕ್ರವಾರ ಬೆಳಗ್ಗೆ ೧೦.೩೦ಕ್ಕೆ ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂ,  ರಾಜ್ಯಪಾಲರಿಗೆ ಸಲ್ಲಿಸಿರುವ ಶಾಸಕರ ಬೆಂಬಲ ಪತ್ರವನ್ನು ಸಲ್ಲಿಸುವಂತೆ ಬಿಎಸ್‌ವೈಗೆ ಸೂಚಿಸಿದೆ. 

ಪ್ರಮಾಣವಚನಕ್ಕೆ ತಡೆನೀಡಬೇಕೆಂದು ಮನವಿ ಮಾಡಿದ್ದ ಕಾಂಗ್ರೆಸ್-ಜೆಡಿಎಸ್ ಪರ ವಕೀಲ ಅಭಿಶೇಕ್ ಮನು ಸಿಂಘ್ವಿ ಮನವಿಯನ್ನು ಸುಪ್ರೀಂ ತಳ್ಳಿಹಾಕಿತ್ತು. ಕನಿಷ್ಠ  ಪ್ರಮಾಣವಚನವನ್ನು  ಸಂಜೆವರೆಗೆ ಮುಂದೂಡುವಂತೆ ನಿರ್ದೇಶಿಸಲು ಸಿಂಘ್ವಿ ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದಿಸಿದ್ದರು. ಆದರೆ ೩.೩೦ ಗಂಟೆಗಳ ಕಾಲ ವಿಚಾರಣೆ ನಡೆಸಿದ ಯಡಿಯೂರಪ್ಪ ಪ್ರಮಾಣವಚನಕ್ಕೆ  ಗ್ರೀನ್ ಸಿಗ್ನಲ್ ನೀಡಿದೆ.

ಸಿಂಘ್ವಿ ವಾದವನ್ನು ರಾತ್ರಿ ೧.೪೫ಕ್ಕೆ ಆಲಿಸಲು ಆರಂಭಿಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯಪೀಠ, ಅರ್ಜಿಯನ್ನು ವಜಾಗೊಳಿಸಿಲ್ಲ. ಆಮೇಲೆ ಅರ್ಜಿಯನ್ನು ವಿಚಾರಣೆ ನಡೆಸಾಲಾಗುವುದು ಎಂದಿರುವ ಸುಪ್ರೀಂ, ಯಡಿಯೂರಪ್ಪ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೂ ನೋಟಿಸ್ ಜಾರಿ ಮಾಡಿದೆ.

ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ, ಕಾಂಗ್ರೆಸ್ -ಜೆಡಿಎಸ್  ರಾತ್ರಿಯೇ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿದ್ದು, ರಾಜ್ಯಪಾಲರ ಆದೇಶ ರದ್ದುಪಡಿಸಲು ಮುಖ್ಯನ್ಯಾಯಮೂರ್ತಿಗೆ ಮನವಿ ಮಾಡಿದ್ದವು. ಕಾಂಗ್ರೆಸ್ ಪಕ್ಷದ ವರಿಷ್ಠರು ದೂರು ಸಿದ್ದಪಡಿಸಿದ್ದು,ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವ ಕ್ರಮವೇ ಅಸಂವಿಧಾನಕ ಕ್ರಮ ಕಾನೂನು ಬಾಹಿರ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಸಂಖ್ಯಾ ಬಲದ ಆಧಾರದಲ್ಲಿ ಬಿಎಸ್'ವೈ ಅವರಿಗೆ ಅವಕಾಶ ನೀಡಲಾಗಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಪಕ್ಷಕ್ಕೆ 104, ಕಾಂಗ್ರೆಸ್'ಗೆ 78 ಹಾಗೂ ಜೆಡಿಎಸ್'ಗೆ 38 ಸ್ಥಾನ ಲಭಿಸಿದ್ದವು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಅವಕಾಶ ಕೇಳಿದರೆ, ತಾನು ಅತಿ ದೊಡ್ಡ ಪಕ್ಷ ಬಿಜೆಪಿಗೂ ಹಕ್ಕು ಮಂಡಿಸಲು ಅವಕಾಶ ನೀಡುವಂತೆ ಬಿಎಸ್'ವೈ ನೇತೃತ್ವದ ಮುಖಂಡರು ಮನವಿ ಮಾಡಿದ್ದರು.   

 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ