ಕಾಂಗ್ರೆಸ್-ಬಿಜೆಪಿ ಗಲಾಟೆಯಲ್ಲಿ ಈ ಊರಿಗೆ ನೀರೇ ಇಲ್ಲ!

Published : Apr 29, 2018, 04:02 PM IST
ಕಾಂಗ್ರೆಸ್-ಬಿಜೆಪಿ ಗಲಾಟೆಯಲ್ಲಿ ಈ ಊರಿಗೆ ನೀರೇ ಇಲ್ಲ!

ಸಾರಾಂಶ

ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವಿನ ಜಗಳದಿಂದಾಗಿ 2 ದಿನಗಳಿಂದ ಕುಷ್ಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನೀರೇ ಇಲ್ಲ! ಶಾಸಕ ದೊಡ್ಡನಗೌಡ ಪಾಟೀಲ್ ಪ್ರಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಪಡಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. 

ಕೊಪ್ಪಳ (ಏ. 29): ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವಿನ ಜಗಳದಿಂದಾಗಿ 2 ದಿನಗಳಿಂದ ಕುಷ್ಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನೀರೇ ಇಲ್ಲ! ಶಾಸಕ ದೊಡ್ಡನಗೌಡ ಪಾಟೀಲ್ ಪ್ರಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಪಡಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. 

ರೊಚ್ಚಿಗೆದ್ದ ಗ್ರಾಮ ಪಂಚಾಯತ್ ಕಾಂಗ್ರೆಸ್ ಸದಸ್ಯರು ಗ್ರಾಮಕ್ಕೆ ನೀರು ಕಟ್ ಮಾಡಿದ್ದಾರೆ.  ಕಾಂಗ್ರೆಸ್- ಬಿಜೆಪಿ ಇಬ್ಬರ ನಡುವಿನ ಗಲಾಟೆಯಿಂದ ಗ್ರಾಮಕ್ಕೆ ನೀರನ್ನು ಕಡಿತಗೊಳಿಸಲಾಗಿದ್ದು  ನೀರಿಗಾಗಿ 2 ದಿನಗಳಿಂದ ತುಮರಿಕೊಪ್ಪ ಗ್ರಾಮಸ್ಥರು  ಪರದಾಡುತ್ತಿದ್ದಾರೆ.  ಎರಡು ಪಕ್ಷಗಳ‌ ವಿರುದ್ಧ ಗ್ರಾಮಸ್ಥರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗ್ರಾಮಕ್ಕೆ‌ ಹನುಮಸಾಗರ ಪೊಲೀಸರು ಭೇಟಿ ನೀಡಿದ್ದಾರೆ. 
 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ