’ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಮೇಲೆ ಮಾನನಷ್ಟ ಮೊಕದ್ದಮೆ’

First Published May 10, 2018, 3:14 PM IST
Highlights

ಸಿದ್ದರಾಮಯ್ಯ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ.  ಸಿದ್ದರಾಮಯ್ಯ ಮೇಲೆ  ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ಪ್ರಧಾನಿ ಬಗ್ಗೆ  ಹಗುರ ಮಾತನಾಡುವ ಧೈರ್ಯ  ತೋರಿದ ಸಿದ್ದರಾಮಯ್ಯನಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಬಿಎಸ್ ವೈ ಹೇಳಿದ್ದಾರೆ. 

ಬಾದಾಮಿ (ಮೇ. 10):  ಸಿದ್ದರಾಮಯ್ಯ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ.  ಸಿದ್ದರಾಮಯ್ಯ ಮೇಲೆ  ಮಾನನಷ್ಟ ಮೊಕದ್ದಮೆ ಹಾಕುತ್ತೇವೆ.  ಪ್ರಧಾನಿ ಬಗ್ಗೆ  ಹಗುರ ಮಾತನಾಡುವ ಧೈರ್ಯ  ತೋರಿದ ಸಿದ್ದರಾಮಯ್ಯನಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಬಿಎಸ್ ವೈ ಹೇಳಿದ್ದಾರೆ. 

ಇಡೀ ರಾಷ್ಟ್ರವೇ ಮೋದಿಯನ್ನು  ಗೌರವಿಸುತ್ತದೆ. ಆದರೆ  ಐದು ದಿನದೊಳಗೆ ಮನೆಗೆ ಹೋಗುವರ ಬಗ್ಗೆ ನಾನು ಮಾತನಾಡುವುದು ವ್ಯರ್ಥ. ಸಿದ್ದರಾಮಯ್ಯ ವೀರಶೈವ  -ಲಿಂಗಾಯತ ಧರ್ಮ  ಒಡೆದರು.  ಧರ್ಮ ಒಡೆದು ಶಿವಯೋಗಿ ಮಂದಿರದ ಹಾನಗಲ್ ಕುಮಾರೇಶ್ವರವರಿಗೆ ಅಪಮಾನ ಮಾಡಿದ್ದಾರೆ.  ಜನತೆ ಅವರನ್ನ ಕ್ಷಮಿಸೋದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ  ಆಗಬಾರದು ಎಂದು ಒಂದೇ ಉದ್ದೇಶದಿಂದ ಸಿದ್ದರಾಮಯ್ಯ  ಜಾತಿ ವಿಷ ಬೀಜ ಬಿತ್ತಿದ್ದಾರೆ.  ಜನ ಇದನ್ನ ಕುಂತಲ್ಲಿ ನಿಂತಲ್ಲಿ ಖಂಡಿಸುತ್ತಿದ್ದಾರೆ ಎಂದು ಬಿಎಸ್ ವೈ ವಾಗ್ದಾಳಿ ನಡೆಸಿದ್ದಾರೆ.  

ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲಿನ ಭೀತಿಯಿಂದ ಬಾದಾಮಿಗೆ ಕದ್ದುಮುಚ್ಚಿ ಬಂದು ಸ್ಪರ್ಧಿಸಿದ್ದಾರೆ.  ಬಾದಾಮಿಯಲ್ಲಿ ಸಿದ್ದರಾಮಯ್ಯ  ನೂರಕ್ಕೆ ನೂರು ಸೋಲ್ತಾರೆ.  ವಾಲ್ಮೀಕಿ  ಸಮುದಾಯ ನಾಯಕ ಶ್ರೀರಾಮುಲು ಇಪ್ಪತ್ತೈದು ಸಾವಿರ  ಅಂತರದಿಂದ ಗೆಲ್ತಾರೆ.  ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಾದಾಮಿ ಪ್ರವಾಸೋದ್ಯಮ ಅಭಿವೃದ್ಧಿಗೆ 200 ಕೋಟಿ ಬಿಡುಗಡೆ  ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.  

ಕಳೆದ ಚುನಾವಣೆಯಲ್ಲಿ ನಮ್ಮದೇ ಪಕ್ಷ ಮೂರು ಭಾಗವಾಗಿ ಅದರ ಲಾಭ ಸಿದ್ದರಾಮಯ್ಯರಿಗೆ ಆಯ್ತು.  ಈಗ ನಾವೆಲ್ಲ ಒಟ್ಟಾಗಿದ್ದೇವೆ, ಒಂದಾಗಿದ್ದೇವೆ.  ಜನಬೆಂಬಲ ನಮಗೆ ಪರವಾಗಿದೆ.  ಎಲ್ಲಾ  ಸಮೀಕ್ಷೆಗಳು ಸುಳ್ಳಾಗಲಿದೆ.  ಉತ್ತರ ಪ್ರದೇಶದಲ್ಲಿ ಸಿಕ್ಕ ಗೆಲುವು  ಕರ್ನಾಟಕದಲ್ಲೂ ಸಿಗಲಿದೆ ಎಂದು ಬಿಎಸ್ ವೈ ಹೇಳಿದ್ದಾರೆ.  

click me!