ಸೋಮವಾರ ಕರ್ನಾಟಕ ಬಂದ್ ?

Published : May 25, 2018, 03:51 PM ISTUpdated : May 25, 2018, 03:56 PM IST
ಸೋಮವಾರ ಕರ್ನಾಟಕ ಬಂದ್ ?

ಸಾರಾಂಶ

ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಇಲ್ಲ ಸಾಲ ಮನ್ನಾ ಮಾಡಲು ಕಷ್ಟ ಎನ್ನುತ್ತಿದ್ದಾರೆ. ತಾವು 2006ರಲ್ಲಿ 20 ತಿಂಗಳು ಅವಕಾಶ ನೀಡದಿದ್ದರೆ ಕುಮಾರಸ್ವಾಮಿ ಅವರು ತಾವು ಏನಾಗಿರುತ್ತಿದ್ದರು ಎಂದು ಆತ್ಮಸಾಕ್ಷಿಯಾಗಿ ಹೇಳಲಿ. 

ಬೆಂಗಳೂರು(ಮೇ.25):  ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡದಿದ್ದರೆ ಮೇ.28ರಂದು ಸೋಮವಾರ ಕರ್ನಾಟಕ ಬಂದ್'ಗೆ ಕರೆ ನೀಡುವುದಾಗಿ  ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರ ಸ್ವಾಮ ಅವರು ಚುನಾವಣಾ ಪೂರ್ವ ಜೆಡಿಎಸ್ ಪಕ್ಷ ನೀಡಿದ ಭರವಸೆಯಂತೆ ರೈತರ ಸಾಲವನ್ನು ಇಂದು ಸಂಜೆಯೊಳಗೆ ಸಂಪೂರ್ಣ ಮನ್ನಾ ಮಾಡದಿದ್ದರೆ ಕರ್ನಾಟಕ ಬಂದ್'ಗೆ ಕರೆ ನೀಡುತ್ತೇವೆ ಎಂದು ಎಚ್ಚರಿಸಿದರು. 
ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಇಲ್ಲ ಸಾಲ ಮನ್ನಾ ಮಾಡಲು ಕಷ್ಟ ಎನ್ನುತ್ತಿದ್ದಾರೆ. ತಾವು 2006ರಲ್ಲಿ 20 ತಿಂಗಳು ಅವಕಾಶ ನೀಡದಿದ್ದರೆ ಕುಮಾರಸ್ವಾಮಿ ಅವರು ತಾವು ಏನಾಗಿರುತ್ತಿದ್ದರು ಎಂದು ಆತ್ಮಸಾಕ್ಷಿಯಾಗಿ ಹೇಳಲಿ ಎಂದ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಾನು ಅವರ ಆಡಳಿತಕ್ಕೆ ಒಂದಿಷ್ಟು ಅಡ್ಡಿ ಬರಲಿಲ್ಲ. ಆದರೆ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ವಚನಭ್ರಷ್ಟರಾದರು ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಒಳಗೊಂಡ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. 

 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ