ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆಗೆ ಸಿದ್ಧ : 8 ಕ್ಷೇತ್ರಗಳ ಅಭ್ಯರ್ಥಿ ಬದಲು ಸಾಧ್ಯತೆ..?

Published : Apr 22, 2018, 01:36 PM ISTUpdated : Apr 22, 2018, 01:49 PM IST
ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆಗೆ ಸಿದ್ಧ : 8 ಕ್ಷೇತ್ರಗಳ ಅಭ್ಯರ್ಥಿ ಬದಲು ಸಾಧ್ಯತೆ..?

ಸಾರಾಂಶ

ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. ಬಿಜೆಪಿ ಈಗಾಗಲೇ ತನ್ನ ಚುನಾವಣಾ ಅಭ್ಯರ್ಥಿಗಳ ಮೂರು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಾಲ್ಕನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲು ಸಿದ್ಧವಾಗಿದೆ.

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. ಬಿಜೆಪಿ ಈಗಾಗಲೇ ತನ್ನ ಚುನಾವಣಾ ಅಭ್ಯರ್ಥಿಗಳ ಮೂರು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಾಲ್ಕನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ನಾಲ್ಕನೇ ಪಟ್ಟಿಯು ಸಿದ್ಧಗೊಂಡಿದ್ದು, ಇದರಲ್ಲಿ 8 ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆ ಸಾಧ್ಯತೆ ಹೆಚ್ಚಿದೆ.

ಅರಸೀಕೆರೆಯಲ್ಲಿ ಟಿಕೆಟ್ ನೀಡಲಾಗಿದ್ದ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಬದಲಿಗೆ  ಬಿಎಸ್’ವೈ ಆಪ್ತ ಮರೀಸ್ವಾಮಿಗೆ ಟಿಕೆಟ್ ನೀಡುವ ಸಾಧ್ಯತೆಗಳಿದೆ. ಇನ್ನು ಬಾಗೇಪಲ್ಲಿ ಕ್ಷೇತ್ರದಲ್ಲಿ ಚಿತ್ರನಟ ಸಾಯಿ ಕುಮಾರ್ ಬದಲಿಗೆ ಕೃಷ್ಣಾರೆಡ್ಡಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ಇನ್ನು ಕೊಪ್ಪಳದಲ್ಲಿ ಟಿಕೆಟ್ ನೀಡಲಾಗಿದ್ದ ಸಿ.ವಿ ಚಂದ್ರ ಶೇಖರ್ ಬದಲಿಗೆ ಕರಡಿ ಸಂಗಣ್ಣ ಅಥವಾ ಅವರ ಪುತ್ರ ಅಮರೇಶ ಕರಡಿಗೆ ಟಿಕೆಟ್  ಸಾಧ್ಯಗಳಿದೆ. ಇತ್ತ ಸಿರಾದಲ್ಲಿ ಬಿ.ಕೆ ಮಂಜುನಾಥ್ ಬದಲಿಗೆ ಎಸ್.ಆರ್ ಗೌಡಗೆ, ಮಂಡ್ಯದಲ್ಲಿ ಬಸವೇಗೌಡ ಬದಲಾಗಿ ಚೆನ್ನಗಾಲ್ ಶಿವಣ್ಣಗೆ ಬಿಜೆಪಿ ನಾಲ್ಕನೇ ಪಟ್ಟಿಯಲ್ಲಿ ಟಿಕೆಟ್ ನೀಡುವ ಸಾಧ್ಯತೆಗಳಿದೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ