ಬಿಜೆಪಿ ಸೋಲಿಸಲು ಬಿಜೆಪಿಯಿಂದಲೇ ಅಭಿಯಾನ

First Published Apr 26, 2018, 11:16 AM IST
Highlights

ಮೈಸೂರು ಜಿಲ್ಲೆ ವರುಣ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಪಕ್ಷದ ಅಧಿಕೃತ ಅಭ್ಯರ್ಥಿ ಯನ್ನು ಸೋಲಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ‘ನೋಟಾ ಅಭಿಯಾನ’ ಆರಂಭಿಸಲಾಗಿದೆ.  ‘ನೊಂದ ನಿಷ್ಠಾವಂತ ಕಾರ್ಯ ಕರ್ತರು’ ಹೆಸರಿನಲ್ಲಿ ‘ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ನೋಟಾ ಅಭಿಯಾನ’ ಎಂಬ  ತಲೆಬರಹದ ಕರಪತ್ರಗಳು ಈಗ ವಾಟ್ಸಪ್, ಫೇಸ್‌ಬುಕ್ ಸೇರಿದಂತೆ  ಸಾಮಾಜಿಕ ಜಾಲತಾ ಣಗಳಲ್ಲಿ ಹರಿದಾಡುತ್ತಿವೆ.

ಬೆಂಗಳೂರು: ಮೈಸೂರು ಜಿಲ್ಲೆ ವರುಣ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಪಕ್ಷದ ಅಧಿಕೃತ ಅಭ್ಯರ್ಥಿ ಯನ್ನು ಸೋಲಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ‘ನೋಟಾ ಅಭಿಯಾನ’ ಆರಂಭಿಸಲಾಗಿದೆ. ‘ನೊಂದ ನಿಷ್ಠಾವಂತ ಕಾರ್ಯ ಕರ್ತರು’ ಹೆಸರಿನಲ್ಲಿ ‘ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ನೋಟಾ ಅಭಿಯಾನ’ ಎಂಬ  ತಲೆಬರಹದ ಕರಪತ್ರಗಳು ಈಗ ವಾಟ್ಸಪ್, ಫೇಸ್‌ಬುಕ್ ಸೇರಿದಂತೆ  ಸಾಮಾಜಿಕ ಜಾಲತಾ ಣಗಳಲ್ಲಿ ಹರಿದಾಡುತ್ತಿವೆ. ಬಿಜೆಪಿ ಕಾರ‌್ಯಕರ್ತರು ಪಕ್ಷದ ಅಧಿಕೃತ ಅಭ್ಯರ್ಥಿ ಬದಲು ನೋಟಾಗೆ  ಮತ ಹಾಕಬೇಕು ಎಂಬ ಸಂದೇಶವನ್ನು ಈ ಮೂಲಕ  ಸಾರಲಾಗುತ್ತಿದೆ. 
ಕ್ಷೇತ್ರದ ಅಧಿಕೃತ ಅಭ್ಯರ್ಥಿಯೆಂದೇ ಬಿಂಬಿತರಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಕೊನೇ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿ  ತೋಟದಪ್ಪ ಬಸವರಾಜು ಅವರನ್ನು ಕಣಕ್ಕಿಳಿಸಲಾಗಿತ್ತು. ಇದು ವಿಜಯೇಂದ್ರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾ ಗಿತ್ತು. ಅದರ ಬೆನ್ನಲ್ಲೇ ಈಗ ‘ಕ್ಷೇತ್ರದಲ್ಲಿ  ಅಭ್ಯರ್ಥಿ ಬದಲಾವಣೆ ಮಾಡುವ ಮೂಲಕ ನಿಷ್ಠಾವಂತ ಕಾರ್ಯಕರ್ತರ  ಉತ್ಸಾಹ ಮಣ್ಣುಪಾಲು ಮಾಡಲಾಗಿದೆ. 
ಹೀಗಾಗಿ ವರಿಷ್ಠರ ಗರ್ವಭಂಗಕ್ಕೆ ನೋಟಾ ಚಲಾವಣೆ ಅನಿವಾರ್ಯ. ಈ ಮೂಲಕ ಅತಿ ಹೆಚ್ಚು ನೋಟಾ ಚಲಾವಣೆಯಾಗಿ ಮರುಮತದಾನ  ನಡೆಯಲಿ ಎಂಬುದೇ ನಮ್ಮ ಅಭಿಲಾಷೆ’ ಎಂದು ವಾಟ್ಸಪ್, ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿರುವ ಕರಪತ್ರದಲ್ಲಿ ಮನವಿ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿದ ಒಂದೇ ಕಾರಣದಿಂದಾಗಿ ಚಾಮರಾಜನಗರ, ಮೈಸೂರು ಜಿಲ್ಲೆಯ 9 ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೂ ಭಂಗವಾ ಗಬಹುದು ಎಂಬುದು ತಿಳಿದಿಲ್ಲವೇ ಎಂದು ಇದೇ ವೇಳೆ ಪ್ರಶ್ನಿಸಲಾಗಿದೆ. ಈ ನೋಟಾ ಅಭಿಯಾನ ಕರಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

click me!