
ಹುಬ್ಬಳ್ಳಿ (ಮೇ 14) : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮತದಾನದ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ ತಮ್ಮನ್ನು ಸೋಲಿಸಲು ಷಡ್ಯಂತ್ರ ನಡೆದಿದೆ ಎಂದು ಅನುಮಾನ ಮತ್ತು ಆತಂಕ ವ್ಯಕ್ತಪಡಿಸಿರುವುದು ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಬೆಟ್ಟಿಂಗ್ ಮೊತ್ತ ಏರುವಂತೆ ಮಾಡಿದೆ.
ಈ ಮೊದಲು ಶೆಟ್ಟರ್ ಗೆಲುವಿನ ಅಂತರದ ಬಗ್ಗೆ ಬೆಟ್ಟಿಂಗ್ ಕಟ್ಟುತ್ತಿದ್ದವರು ಈಗ ಸೋಲು-ಗೆಲುವಿನ ಬಗ್ಗೆ ಭಾರಿ ಪ್ರಮಾಣದಲ್ಲಿ ಬೆಟ್ಟಿಂಗ್ ಆಡುತ್ತಿದ್ದು, ಬೆಟ್ಟಿಂಗ್ ಮೊತ್ತ ಲಕ್ಷಾಂತರ ರು. ಗಳಲ್ಲಿ ಏರಿಕೆ ಕಂಡಿದೆ. ಹಣ ಮಾತ್ರವಲ್ಲದೆ, ಮೊಬೈಲ್, ವಾಚ್, ಕುರಿ, ಮರಳು ತುಂಬಿದ ಲಾರಿಯನ್ನೂ ಪಣಕ್ಕಿಟ್ಟಿದ್ದಾರೆ.
ಚುನಾವಣೆಯಲ್ಲಿ ಮತದಾರರಿಗೆ ವಿತರಣೆಯಾ ಗದೇ ಉಳಿದಿರುವ ಕುಕ್ಕರ್ ಮತ್ತು ಸೀರೆಗಳನ್ನು ಬೆಟ್ಟಿಂಗ್ ಗೆ ಇಟ್ಟಿರುವುದು ವಿಶೇಷ. ಈ ನಡುವೆ ಜೆಡಿಎಸ್ ವರಿಷ್ಠ, ಮುಖ್ಯಮಂತ್ರಿ ಗದ್ದುಗೆಯ ಪ್ರಬಲ ಆಕಾಂಕ್ಷಿ ಎಚ್ .ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯ ಹಳೆ ಮೈಸೂರು
ಭಾಗದ ಭವಿಷ್ಯದ ನಾಯಕ ಎಂದು ಬಿಂಬಿತವಾಗಿರುವ ಸಿ.ಪಿ.ಯೋಗೇಶ್ವರ್ ನಡುವಿನ ಸೆಣಸಾಟ ಸಹ ಬಾಜಿದಾರರಿಗೆ ಪ್ರಶ್ನೆಯಾಗಿ ಕಾಡುತ್ತಿದೆ.