
ಬೆಂಗಳೂರು: ಕರ್ನಾಟಕ ಸರಕಾರದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಹಸಿರು ಶಾಲು ಹೊದ್ದ ಯಡಿಯೂರಪ್ಪ ದೇವರು, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ವಾಜುಬಾಯಿ ವಾಲ ಅವರು ಯಡಿಯೂರಪ್ಪ ಅವರಿಗೆ ಗೌಪ್ಯತಾ ಪ್ರಮಾಣ ಬೋಧಿಸಿದರು.
ಕಿಕ್ಕಿರಿದು ಸೇರಿದ ಜನರ ನಡುವೆ ಜಯಘೋಷಗಳೊಂದಿಗೆ ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಪ್ರಮಾಣ ವಚನಕ್ಕೂ ಮುನ್ನ ಯಡಿಯೂರಪ್ಪ ಸಂಜಯ್ ನಗರದ ರಾಧಾ ಕೃಷ್ಣ ಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.