ಕಾಂಗ್ರೆಸ್’ನಿಂದ 17 ಬಂಡಾಯ ಅಭ್ಯರ್ಥಿಗಳ ಉಚ್ಛಾಟನೆ

First Published May 4, 2018, 8:35 AM IST
Highlights

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಹದಿನೇಳು ಮಂದಿ ಕಾಂಗ್ರೆಸ್ ಮುಖಂಡರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಕಾಂಗ್ರೆಸ್ ಆದೇಶ ಹೊರಡಿಸಿದೆ. 

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಹದಿನೇಳು ಮಂದಿ ಕಾಂಗ್ರೆಸ್ ಮುಖಂಡರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಕಾಂಗ್ರೆಸ್ ಆದೇಶ ಹೊರಡಿಸಿದೆ.

ಈ ಬಗ್ಗೆ ಗುರುವಾರ ಆದೇಶ ಹೊರಡಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ, ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಿಸಿದ್ದ ಜಗಳೂರು ಕ್ಷೇತ್ರದ ಎ.ಎಲ್. ಪುಷ್ಪ, ತಿಪಟೂರಿನ ನಂಜಾಮರಿ ಸೇರಿ ಹದಿನೇಳು ಮಂದಿಯನ್ನು ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಮಖಂಡಿ ಕ್ಷೇತ್ರದ ಆಕಾಂಕ್ಷಿ ಹಾಗೂ ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಶ್ರೀಶೈಲ ಎಂ.ದಳವಾಯಿ, ಮಹದೇವಪುರ ಕ್ಷೇತ್ರದ ನಲ್ಲೂರಹಳ್ಳಿ ನಾಗೇಶ್, ದಾಸರಹಳ್ಳಿ ಕ್ಷೇತ್ರದ ಲೋಕೇಶ್ ಗೌಡ, ಬಸವನಗುಡಿ ಕ್ಷೇತ್ರದ ಆಕಾಂಕ್ಷಿ ವಿಶಾಲ್ ಈಶ್ವರ್, ಸವದತ್ತಿ ಕ್ಷೇತ್ರದ ಆನಂದ ಚೋಪ್ರಾ, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಮೋಹನ್ ಮೋರೆ, ಕೂಡ್ಲಿಗಿ ಕ್ಷೇತ್ರದ ಲೋಕೇಶ್ ವಿ.ನಾಯಕ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಪರಮೇಶ್ವರಪ್ಪ, ಸಿರಗುಪ್ಪ ಕ್ಷೇತ್ರದ ವೆಂಕಟೇಶ ನಾಯ್ಕ್, ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ, ಹನೂರು ಕ್ಷೇತ್ರದ ಸಿದ್ದಪ್ಪ, ಚಿಕ್ಕಬಳ್ಳಾಪುರ ಕ್ಷೇತ್ರದ ನವೀನ್ ಕಿರಣ್, ಕುಡಚಿ ಕ್ಷೇತ್ರದ ಸುರೇಶ್ ತಳವಾರ್, ರಾಯಭಾಗದ ಮಹಾವೀರ್ ಮೋಹಿತೆ, ಹುಕ್ಕೇರಿ ಕ್ಷೇತ್ರದ ಇಫ್ತಿಕಾರ್, ನವಲಗುಂದದ ಪ್ರಕಾಶ್ ಅಂಗಡಿ, ರಾಘವೇಂದ್ರ ತೇರದಾಳ, ರಾಣೆಬೆನ್ನೂರು ಕ್ಷೇತ್ರದ ರುಕ್ಮಿಣಿ ಸಾಹುಕಾರ್, ರಾಯಚೂರು ಗ್ರಾಮಾಂತರದ ರವಿ ಕುಮಾರ್ ಪಾಟೀಲ್, ಮಸ್ಕಿ ಕ್ಷೇತ್ರದ ಲಾಲಪ್ಪ ನಾಯ್ಕ್, ಮಾನ್ವಿ ಕ್ಷೇತ್ರದ ಡಾ.ತನುಶ್ರೀ, ಗುಬ್ಬಿ ಕ್ಷೇತ್ರದ ಜಿ.ಕೃಷ್ಣಪ್ಪ, ತುರುವೇಕೆರೆ ಕ್ಷೇತ್ರದ ನಾರಾಯಣ ಗೌಡ, ಕುಮಟಾ ಕ್ಷೇತ್ರದ ಕೃಷ್ಣೇಗೌಡ ಅವರನ್ನು ಉಚ್ಚಾಟಿಸಲಾಗಿದೆ.

click me!