
ಬೆಂಗಳೂರು(ಮೇ.02): ಮೇ.12 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರ ಪ್ರಮುಖವಾಗಲಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 2.5 ಕೋಟಿ ಮಹಿಳಾ ಮತದಾರರು ಹಾಗೂ 5055 ತೃತೀಯ ಲಿಂಗಿಗಳು ಸೇರಿ 5.07 ಕೋಟಿ ಮತದಾರರಿದ್ದಾರೆ. ನಮ್ಮ ರಾಜ್ಯದ ಲಿಂಗ ಅನುಪಾತ 974 ರಷ್ಟಿದೆ.
ರಾಯಚೂರು, ಬಳ್ಳಾರಿ,ಉಡುಪಿ-ಚಿಕ್ಕಮಗಳೂರು,ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ರಾಮನಗರ, ಚಾಮರಾಜ ನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಪುರುಷ ಮತದಾರರಿಗಿಂತ ಮಹಿಳಾ ಮತದಾರರೆ ಹೆಚ್ಚಾಗಿದ್ದಾರೆ. ಬಾಗಲಕೋಟೆ, ಕೊಪ್ಪಳ, ಯಾದಗಿರ್, ಮಂಡ್ಯ ಜಿಲ್ಲೆಗಳಲ್ಲಿ ಪುರುಷ ಹಾಗೂ ಮಹಿಳಾ ಮತದಾರರ ನಡುವಿನ ಅಂತರ ಕೇವಲ 2100 ರೊಳಗಿದೆ.
ಇತ್ತೀಚಿನ ದಿನಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಶೇ.16 ರಷ್ಟು ಹೆಚ್ಚಾಗಿದೆ. ಚುನಾವಣಾ ಆಯೋಗವು ಈ ಬಾರಿ ಮಹಿಳೆಯರಿಗಾಗಿ ಮಹಿಳೆಯರೆ ನಿರ್ವಹಿಸಲ್ಪಡುವ ಪಿಂಕ್ ಪೋಲಿಂಗ್ ಬೂತ್'ಗಳನ್ನು ತೆರೆಯಲಿದೆ. ಕಿರುತರೆ ನಟಿಯರಾದ ರಜಿನಿ, ಆರ್.ಬಿ. ವೈಷ್ಣವಿ ಚುನಾವಣಾ ಆಯೋಗದಿಂದ ರಾಯಭಾರಿಗಳಿದ್ದಾರೆ. ಹಲವು ನಟಿಯರು ಕೂಡ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಿಂದ ಪ್ರಚಾರದ ಸ್ಟಾರ್ ಐಕಾನ್'ಗಳಾಗಿದ್ದಾರೆ.