ಸಾಮೂಹಿಕ ವಿವಾಹ ಸಮಾರಂಭದಲ್ಲಿ 51 ನವ ದಂಪತಿಗಳು ಹಸೆಮಣೆ ಏರಿದರು| ನಂತರ 7 ಸಾವಿರ ಸುಮಂಗಲಿಯರಿಗೆ ಒಟ್ಟಿಗೆ ಹೋಳಗಿ, ತುಪ್ಪ ಉಣ್ಬಡಿಸಿ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು| ಮುತೈದೆಯರಿಗೆ ಐದು ಬಳೆ ಕುಪ್ಪಸ ಹೂವಿನ ದಂಡೆ ಮಠದಿಂದ ಕೊಡಲಾಗುತ್ತದೆ| 7 ಸಾವಿರ ಜಂಗಮ ಗಣಾ ರಾಧನೆ ನಡೆಯಿತು| ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು|
ಅಫಜಲ್ಪುರ/ ಕರಜಗಿ(ಅ.17): ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಬಸವಲಿಂಗ ಶ್ರೀ ಮಠದಲ್ಲಿ ಯಾವುದೇ ಜಾತಿ ಭೇದ ಎನ್ನದೆ ನಾವೆಲ್ಲರು ಒಂದೇ ಜಾತಿ ಎಂಬಂತೆ ಹಿಂದು, ಮುಸ್ಲಿಂ ಸಮಾಜದ ಬಾಂಧವರು ಈ ಮಠದಲ್ಲಿ ಭೇದ ಭಾವ ವಿಲ್ಲದೆ ಅಣ್ಣ ತಮ್ಮಂದಿರಂತೆ ಮಠದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾವೈಕ್ಯತೆ ಸಂದೇಶ ಸಾರುತ್ತಿದ್ದಾರೆ. ಬಸವಲಿಂಗೇಶ್ವರ
ಸ್ವಾಮೀಜಿ ಅವರ 87ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ಬೆಳಗ್ಗೆ 5 ಗಂಟೆಗೆ ರು9ದ್ರಾಭೀಷೇಕ ವಚನಾಭಿಷೇಕದೊಂದಿಗೆ ಆರಂಭವಾಯಿತು. 9 ಗಂಟೆಗೆ ಧಾರ್ಮಿಕ ಧ್ವಜಾರೋಹಣ ನಂತರ ಪು. ರೇವಣಸಿದ್ಧ ಶ್ರೀ, ಅಭಿನವ ಬಸವಲಿಂಗ ಸ್ವಾಮೀಜಿ, ಶಾಸಕ ಸಿದ್ರಾಮ ಮೇತ್ರೆ, ಬಿಜೆಪಿ ತಾಲೂಕು ಅಧ್ಯಕ್ಷ ಸಚಿನ ಕಲ್ಯಾಣಶೆಟ್ಟಿ, ಜಿಪಂ ಸದಸ್ಯ ಆನಂದ ತಾನವಾಡೆ, ಗಿರಿಮಲ್ಲ ಗಂಗೊಂಡಾ, ಮಲ್ಲಿನಾಥ ಭಾಸಗಿ, ಭೀಮಾಶಂಕರ ದೋತ್ರಿ ಉಪಸ್ಥಿತಿಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 51 ನವ ದಂಪತಿಗಳು ಹಸೆಮಣೆ ಏರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಂತರ 7 ಸಾವಿರ ಸುಮಂಗಲಿಯರಿಗೆ ಒಟ್ಟಿಗೆ ಹೋಳಗಿ, ತುಪ್ಪ ಉಣ್ಬಡಿಸಿ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. ಮುತೈದೆಯರಿಗೆ ಐ ದು ಬಳೆ ಕುಪ್ಪಸ್ ಹುವಿನ ದಂಡೆ ಮಠದಿಂದ ಕೊಡಲಾಗುತ್ತದೆ. 7 ಸಾವಿರ ಜಂಗಮ ಗಣಾ ರಾಧನೆ ನಡೆಯಿತು. ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ನಾಗಣಸೂರ ಗ್ರಾಮದಲ್ಲಿ ಶ್ರೀಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಗ್ರಾಮದ 121 ಜನರು ರಕ್ತದಾನ, 101 ಜನರು ನೇತ್ರ ತಪಾಸಣೆ ಮಾಡಿದರು.
ವಿಜಯ ಮಹಾಂತೇಶ ಇರಕಲ ಕಾರ್ಗಿಲ್ ಯುದ್ಧ ಕುರಿತು ಮಾಹಿತಿ ನೀಡಿದರು. ಗುರು ಬಸವ ಬಹುದೇಶಿಯ ಸಮಾಜ ಸೇವಾ ಸಂಸ್ಥೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ವ್ಯಕ್ತಿಗಳಿಗೆ ಬಸವಲಿಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರಜಗಿ ಶಿವಾನಂದ ಮಹಾಂತ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಧರ್ಮ ಸಭೆ ನಡೆಯತು. ಗ್ರಾಮದ ಯುವಕ, ಯುವತಿಯರು ತಮ್ಮ ಕೆಸಲದ ಮೊದಲ ತಿಂಗಳ ಸಂಬಳವನ್ನು ಶ್ರೀಮಠಕ್ಕೆ ಅರ್ಪಿಸಿದರು.
ಮಠದ ವಿಶೇಷತೆ:
ಇಲ್ಲಿ ಎಷ್ಟೆ ಭಕ್ತರು ಬಂದರು ಮಠದಲ್ಲಿ ತುಪ್ಪ ಹೋಳಿಗೆ, ಹುಗ್ಗಿ ಖಾಲಿಯಾಗುವುದಿಲ್ಲ. ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ರಾತ್ರಿ 10 ಗಂಟೆಯವರಗೆ ಭಕ್ತರಿಗೆ ಧಾಸೋಹ ನಡೆಯುತ್ತದೆ. ಕೊಪ್ಪಳ ಸಂಸ್ಥಾನಮಠದ ಸಿದ್ಧಲಿಂಗ ದೇವರು 21 ದಿನಗಳಿಂದ ಸಿದ್ಧಾರೂಢರ ಮಹಾತ್ಮೆ ಪ್ರವಚನ ಮುಕ್ತಾಯಗೊಂಡಿತು. ಶ್ರೀನಿವಾಸ ರಾಯಚೂರು, ಶ್ರೀಕಾಂತಕು ಮಾರ ಗದಗ ಸಂಗೀತ ಸೇವೆ ಸಲ್ಲಿಸಿದರು.
ಉಚಿತ ವಾಹನಗಳ ಸೇವೆ:
ಅಕ್ಕಲಕೋಟದಿಂದ ಮಾಶ್ಯಾಳ, ಹೈದ್ರಾ, ಹೊಸೂರ, ಮಣ್ಣೂರ, ತೋಳನೂರ, ಕರಜಗಿಯಿಂದ ಬರುವ ಭಕ್ತಾದಿಗಳಿಗೆ ಉಚಿತ ಜೀಪಿನ ವ್ಯವಸ್ಥೆ ಮಾಡಲಾಗಿತ್ತು.
ಈ ಬಗ್ಗೆ ಮಾತನಾಡಿದ ನಾಗಣಸೂರ ಗ್ರಾಮಸ್ಥ ಚಿಂದಾನಂದ ಮಠಪತಿ ಅವರು, ನಾಗಣಸೂರಿನ ಪ್ರತಿಯೊಬ್ಬರು 200 ರಿಂದ 500 ಮಡಿ ವರೆಗೆ ಹೋಳಿಗೆ ಮಾಡಿ ಮಠಕ್ಕೆ ಕೊಡುತ್ತಾರೆ. ಈ ಮಠದಲ್ಲಿ ಎಷ್ಟೆ ಭಕ್ತರು ಬಂದರು ಅನ್ನ ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದಾರೆ.