ಪತ್ನಿಯನ್ನು ಕೊಂದು ಮೃತದೇಹವನ್ನು ಪಲ್ಲಂಗದ ಕೆಳಗೆ ಮೂರು ದಿನ ಬಚ್ಚಿಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ. ಹೆಂಡತಿಯನ್ನು ಕೊಂದ ನಂತರ ಘಟನೆ ಬೆಳಕಿಗೆ ಬಾರದಂತೆ ಮೃತದೇಹವನ್ನು ಮಂಚದ ಕೆಳಗೆ ಅಡಗಿಸಿಟ್ಟಿದ್ದ.
ಕಲಬುರಗಿ(ನ.05): ಪತ್ನಿಯನ್ನು ಕೊಂದು ಮೃತದೇಹವನ್ನು ಪಲ್ಲಂಗದ ಕೆಳಗೆ ಮೂರು ದಿನ ಬಚ್ಚಿಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ. ಹೆಂಡತಿಯನ್ನು ಕೊಂದ ನಂತರ ಘಟನೆ ಬೆಳಕಿಗೆ ಬಾರದಂತೆ ಮೃತದೇಹವನ್ನು ಮಂಚದ ಕೆಳಗೆ ಅಡಗಿಸಿಟ್ಟಿದ್ದ.
ಕಲಬುರಗಿಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಯುವಕ ಪತ್ನಿಯನ್ನು ಕೊಲೆ ಮಾಡಿ ಮಂಚದ ಕೆಳಗೆ ಮೃತದೇಹ ಅಡಗಿಸಿಟ್ಟು ಅದೇ ಮಂಚದ ಮೇಲೆ ಮೂರು ದಿನ ಮಲಗಿದ್ದ. ಮೂರು ದಿನ ಕಳೆದಾಗ ವಾಸನೆ ಹಿಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಹಾಸನ: KGF ಸ್ಟೈಲ್‌ನಲ್ಲಿ ಮಗಳ ಮೇಲೆ ಹಲ್ಲೆ ಮಾಡ್ತಾನೆ ಈ ಕ್ರೂರ ತಂದೆ
ಶ್ರೀಶೈಲ ಸಕ್ಕರಗಿ (45) ಎಂಬಾತ ಸಂಗೀತಾ ಸಕ್ಕರಗಿ (35)ಯನ್ನು ಕೊಲೆ ಮಾಡಿದ್ದಾನೆ. ತನ್ನ ಹೆಂಡತಿಯನ್ನೆ ಕೊಲೆ ಮಾಡಿ ಬೆಳಕಿಗೆ ಬರದಂತೆ ಮಂಚದ ಕೆಳಗೆ ಮೂರು ದಿನ ಮುಚ್ಚಿಟ್ಟು ಮಂಚದ ಮೇಲೆ ಮೂರು ದಿನ ನಿದ್ರೆ ಮಾಡಿದ್ದಾನೆ.
ವಾಸನೆ ಬಂದು ಸ್ಥಳಿಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ಕುರಿತು ಮಾದನಹಿಪ್ಪರಗಾ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಶ್ರೀಶೈಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಂಚನಸೂರ್‌ಗೆ 11 ಕೋಟಿ ಸಾಲ ಕೊಟ್ಟಿದ್ದ ಮಹಿಳೆ ಆತ್ಮಹತ್ಯೆ