50 ವರ್ಷದ ಬಳಿಕ ತೆರಳಿ ದತ್ತನ ಆಶೀರ್ವಾದ ಪಡೆದ ದೇವೇಗೌಡರು

By Web Desk  |  First Published Nov 11, 2019, 11:42 AM IST

ಬರೋಬ್ಬರಿ 50 ವರ್ಷಗಳ ಬಳಿಕ ಗಾಣಗಾಪುರದ ದತ್ತನ ಸನ್ನಿಧಿಗೆ ಎಚ್ ಡಿ ದೇವೇಗೌಡರು ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ದತ್ತನ ಆಶೀರ್ವಾದ ಪಡೆದಿದ್ದಾರೆ. 


ಕಲಬುರಗಿ [ನ.11]:  ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವರ ಮೊರೆ ಹೋಗಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪೂರದಲ್ಲಿರುವ ದತ್ತಾತ್ರೆಯ ದೇವಸ್ಥಾನಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿರುವ ದೇವೇಗೌಡರು, ದತ್ತಾತ್ರೇಯ ದೇವಸ್ಥಾನದಲ್ಲಿ ಸ್ವರ್ಣ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Tap to resize

Latest Videos

ಇದೇ ವೇಳೆ ದತ್ತನ ಸನ್ನಿಧಿ ತೆರಳಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ, ಇಲ್ಲಿನ ಅರ್ಚಕರು ಶಾಲು ಹೊದಿಸಿ  ಸನ್ಮಾನಿಸಿದ್ದಾರೆ. 

ಪೂಜೆ ನಡೆಸಿದ ಬಳಿಕ ಕ್ಷೇತ್ರದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ದತ್ತನ ದರ್ಶನ ಮಾಡಲು ಇಲ್ಲಿಗೆ ಬಂದಿದ್ದೇನೆ.. ಗುರು ದತ್ತ‌ನ ಸ್ವರ್ಣ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಇದು ಪವಿತ್ರ ಪುಣ್ಯ ಕ್ಷೇತ್ರವಾಗಿದ್ದು, ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳು ಬಿಟ್ಟು ಶಾಂತಿ ನೆಲೆಸಲು ಪ್ರಾರ್ಥಿಸಿದ್ದೇನೆ. ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು 50 ವರ್ಷಗಳ ಹಿಂದೆ ಗಾಣಗಾಪುರಕ್ಕೆ ಬಂದು ಪೂಜೆ ಸಲ್ಲಿಸಿದ್ದೆ.‌ ಸುದಿರ್ಘವಾಗಿ 60 ವರ್ಷ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿದ್ದು, 50 ವರ್ಷಗಳ ಬಳಿಕ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದರು. 

ಅಲ್ಲದೇ ಜೆಡಿಎಸ್ ಪಕ್ಷ ಬಲಪಡಿಸುವ ವಿಚಾರದ ಕುರಿತಾಗಿಯೂ ಮಾತನಾಡಿದ ದೇವೇಗೌಡರು,  ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡಲಾಗುವುದು ಎಂದರು.‌

click me!