ಜಾಗತಿಕ ಐಟಿ ಸಂಸ್ಥೆ ಟಿಸಿಎಸ್ ಮಾರ್ಚ್ ಒಳಗಾಗಿ ತನ್ನ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ನಿಲ್ಲಿಸಿ ಕಚೇರಿಗೆ ಬಂದು ಕೆಲಸ ಮಾಡಬೇಕು ತಪ್ಪಿದಲ್ಲಿ ಪರಿಣಾಮ ಎದುರಿಸಿ ಎಂದು ವರ್ಕ್ ಫ್ರಮ್ ಹೋಮ್(ಮನೆಯಿಂದಲೇ ಕೆಲಸ) ಮಾಡುತ್ತಿರುವ ತನ್ನ ಉದ್ಯೋಗಿಗಳಿಗೆ ಸಂದೇಶ ಕಳುಹಿಸಿದೆ.
ಬೆಂಗಳೂರು: ನೀವು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಮನೆಯಿಂದ ಕೆಲಸ ಮಾಡುತ್ತಾ ನಿಮ್ಮ ಆಫೀಸ್ ಕೆಲಸವನ್ನು ಎಂಜಾಯ್ ಮಾಡುತ್ತಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್, ಏನದು ಇಲ್ಲಿದೆ ಓದಿ, ಜಾಗತಿಕ ಐಟಿ ಸಂಸ್ಥೆ ಟಿಸಿಎಸ್ ಮಾರ್ಚ್ ಒಳಗಾಗಿ ತನ್ನ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ನಿಲ್ಲಿಸಿ ಕಚೇರಿಗೆ ಬಂದು ಕೆಲಸ ಮಾಡಬೇಕು ತಪ್ಪಿದಲ್ಲಿ ಪರಿಣಾಮ ಎದುರಿಸಿ ಎಂದು ವರ್ಕ್ ಫ್ರಮ್ ಹೋಮ್(ಮನೆಯಿಂದಲೇ ಕೆಲಸ) ಮಾಡುತ್ತಿರುವ ತನ್ನ ಉದ್ಯೋಗಿಗಳಿಗೆ ಸಂದೇಶ ಕಳುಹಿಸಿದೆ.
ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಈಗಾಗಲೇ ಹಲವು ಬಾರಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿದ್ದು, ಕಚೇರಿಯಿಂದಲೇ ಕೆಲಸ ಮಾಡುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಅದಾಗ್ಯೂ ಕೆಲ ಉದ್ಯೋಗಿಗಳು ಇನ್ನೂ ಮನೆಯಿಂದಲೇ ಕೆಲಸ ಮುಂದುವರೆಸಿದ್ದಾರೆ. ಇಂತಹ ಉದ್ಯೋಗಿಗಳಿಗೆ ಮಾರ್ಚ್ ಅಂತ್ಯದೊಳಗೆ ಕಚೇರಿಗೆ ಬರುವುದಕ್ಕೆ ತನ್ನ ಅಂತಿಮ ಗಡುವನ್ನು ಸಂಸ್ಥೆ ವಿಸ್ತರಿಸಿದ್ದು, ಇದು ತನ್ನ ಕೊನೆಯ ಸೂಚನೆಯಾಗಿದ್ದು, ಒಂದು ವೇಳೆ ಈ ಸೂಚನೆಯನ್ನು ಪಾಲಿಸದೇ ಹೋದಲ್ಲಿ ಕಾನೂನು ಪರಿಣಾಮ ಎದುರಿಸಿ ಎಂದು ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.
30 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ದಾಟಿದ ದೇಶದ ಮೊದಲ ಕಂಪನಿ ಎನಿಸಿಕೊಂಡ ಟಾಟಾ ಗ್ರೂಪ್!
ತನ್ನ ಈ ಸೂಚನೆಯನ್ನು ಅಂತಿಮ ಕರೆ ಎಂದು ಹೇಳಿರುವ ಈ ಸಾಫ್ಟ್‌ವೇರ್ ಸಂಸ್ಥೆ ಟಿಸಿಎಸ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನ ಕಚೇರಿಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ನಾವು ತಾಳ್ಮೆಯಿಂದ ಗಮನಿಸುತ್ತಿದ್ದೇವೆ. ಉದ್ಯೋಗಿಗಳು ಕಚೇರಿಗೆ ಮರಳಬೇಕು ಎಂಬ ತಾತ್ವಿಕ ನಿಲುವನ್ನು ತೆಗೆದುಕೊಂಡಿದ್ದೇವೆ. ಈ ಕುರಿತು ನಾವು ಸಿಬ್ಬಂದಿಗೆ ಕೊನೆಯ ಸಂದೇಶವನ್ನು ಈಗಾಗಲೇ ಕಳುಹಿಸಿದ್ದೇವೆ . ಈ ಸೂಚನೆಯನ್ನು ಅವರು ಪಾಲಿಸಲು ಸಿದ್ಧರಿಲ್ಲದೇ ಹೋದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟಿಸಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌ಜಿ ಸುಬ್ರಮಣ್ಯಂ ಇಕನಾಮಿಕ್ ಟೈಮ್ಸ್‌ಗೆ ಹೇಳಿದ್ದಾರೆ ಎಂದು ಅ ವೆಬ್‌ಸೈಟ್ ವರದಿ ಮಾಡಿದೆ.
ಕಚೇರಿಗೆ ಕರೆಸುವುದಕ್ಕೆ ಪ್ರಮುಖ ಕಾರಣ ಇಂಟರ್‌ನೆಟ್ ಅಭದ್ರತೆ
ಕೆಲಸದ ಸಂಸ್ಕೃತಿ ಹಾಗೂ ಭದ್ರತಾ ಸಮಸ್ಯೆ ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆಸಲು ಪ್ರಮುಖ ಕಾರಣ ಎಂದು ಟಿಸಿಎಸ್ ಸಿಇಒ ಹೇಳಿದ್ದಾರೆ. ಮನೆಯಿಂದ ಎಲ್ಲವನ್ನು ಕಂಟ್ರೋಲ್ ಮಾಡುವುದಕ್ಕೆ ಆಗುವುದಿಲ್ಲ, ಅಲ್ಲಿಯೂ ಉದ್ಯಮಕ್ಕೆ ಸಂಬಂಧಿಸಿದಂತೆ ಕೆಲವು ಭದ್ರತಾ ಸಮಸ್ಯೆಗಳು ಉಂಟಾಗಬಹುದು ಕೆಲ ಅಜಾಗರೂಕತೆಯಿಂದ ಸಂಸ್ಥೆ ತೊಂದರೆಗೆ ಒಳಗಾಗಬಹುದು ಎಂದು ಮುಂಬೈ ಮೂಲದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹೇಳಿದ್ದಾರೆ.
ವೇತನ ಹೆಚ್ಚಳ ಮತ್ತು ಬಡ್ತಿಗಾಗಿ ಉದ್ಯೋಗಿಗಳಿಗೆ ಷರತ್ತು ವಿಧಿಸಿದ ಐಟಿ ದಿಗ್ಗಜ ಟಿಸಿಎಸ್
ಕಛೇರಿಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದರೊಂದಿಗೆ, ಕೋವಿಡ್ ಸಾಂಕ್ರಾಮಿಕ ರೋಗ ಬರುವ ಮೊದಲು ಇದ್ದ ಪರಿಸ್ಥಿತಿಗೆ ಹಿಂದಿರುಗುವುದು ಹಾಗೂ ಹೈಬ್ರಿಡ್ ಮಾದರಿಯಿಂದ ಹಿಂದೆ ಸರಿಯುವುದು ಸಂಸ್ಥೆಯ ಸದ್ಯದ ಗುರಿಯಾಗಿದೆ. ವರದಿಯ ಪ್ರಕಾರ ಸಂಸ್ಥೆಗೆ 40 ಸಾವಿರ ಜನ ಕೋವಿಡ್ ಸಮಯದಲ್ಲಿ ಆನ್‌ಲೈನ್ ಮೂಲಕ ಸಂಸ್ಥೆಯನ್ನು ಸೇರಿ ಕೆಲಸ ಮಾಡಿದ್ದರು. ಪ್ರಪಂಚದ ಹಲವು ದೇಶಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, 6 ಲಕ್ಷಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.