ಬಯಲಾಯ್ತು BYJU'S ಕೆಲಸದ ಸಂಸ್ಕೃತಿ, ಮ್ಯಾನೇಜರನ್ನು ತರಾಟೆಗೆ ತೆಗೆದ ಉದ್ಯೋಗಿ ವಿಡಿಯೋ ವೈರಲ್!

By Suvarna News  |  First Published Jul 23, 2023, 5:55 PM IST

ಆ್ಯಪ್ ಆಧಾರಿತ ಕೋಚಿಂಗ್ ಬೈಜುಸ್ ಕಳೆದ ಕೆಲ ತಿಂಗಳಿನಿಂದ ಸುದ್ದಿಯಲ್ಲಿದೆ. ಉದ್ಯೋಗ ಕಡಿತ ಸೇರಿದಂತೆ ಹಲವು ಕಾರಣಗಳಿಂದ ಬೈಜುಸ್ ಸುದ್ದಿಯಾಗುತ್ತಿದೆ. ಇದೀಗ ಬೈಜುಸ್ ಉದ್ಯೋಗಿ, ಅತೀಯಾದ ಒತ್ತಡ, ಕೆಟ್ಟ ಕೆಲಸದ ಸಂಸ್ಕೃತಿ, ಒಂದು ವರ್ಷದಿಂದ ಇನ್ಸೆಂಟೀವ್ ನೀಡದೆ ಸತಾಯಿಸುತ್ತಿರುವುದಕ್ಕೆ ಗರಂ ಆಗಿದ್ದಾರೆ. ಮ್ಯಾನೇಜರ್ ಸೇರಿದಂತೆ ಇತರ ಹಿರಿಯ ಉದ್ಯೋಗಿಗಳನ್ನು ತೀವ್ರವಾಗಿ ತರಾಟೆಗೆ ತೆಗುದುಕೊಂಡ ವಿಡಿಯೋ ವೈರಲ್ ಆಗಿದೆ.
 


ನವದೆಹಲಿ(ಜು.23) ಕೊರೋನಾ ಬಳಿ ಬೈಜುಸ್ ಕಂಪನಿ ಕೆಲ ಕಾರಣಗಳಿಂದ ಸುದ್ದಿಯಾಗುತ್ತಿದೆ. ಇದೀಗ ಬೈಜುಸ್ ಉದ್ಯೋಗಿಯೊಬ್ಬರ ಎನ್ನಲಾದ ವಿಡಿಯೋ ಭಾರಿ ವೈರಲ್ ಆಗಿದೆ. ಬೈಜುಸ್ ಮ್ಯಾನೇಜರ್, ಹಿರಿಯ ಉದ್ಯೋಗಿಗಳನ್ನು ತೀವ್ರವಾಗಿ ತರಾಟೆಗೆ ತೆದುಕೊಂಡ ಈ ವಿಡಿಯೋಗೆ ಭಾರಿ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಇದು ಬೈಜುಸ್ ಕೆಲಸದ ಸಂಸ್ಕೃತಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅತೀಯಾಗಿ ಕೆಲಸ ಮಾಡುತ್ತಿದ್ದಾರೆ. ಅತೀಯಾದ ಒತ್ತಡ ಹಾಕುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಕೆಲಸ ಸಂಸ್ಕೃತಿ ಬದಲಾಗಿದೆ. ಕೆಟ್ಟ ಸಂಸ್ಕತಿಯನ್ನು ಬೆಳೆಸಿಕೊಂಡಿದ್ದಾರೆ. ಒಂದು ವರ್ಷದಿಂದ ಇನ್ಸೆಂಟೀವ್ ನೀಡದೆ ಸತಾಯಿಸುತ್ತಿದ್ದಾರೆ. ಈ ಕುರಿತು ಇಮೇಲ್, ಮೆಸೇಜ್ ಕಳುಹಿಸಿದರೆ ಪ್ರತಿಕ್ರಿಯೆ ನೀಡಿಲ್ಲ ಎಂದು ಮಹಿಳಾ ಉದ್ಯೋಗಿ ರೊಚ್ಚಿಗೆದ್ದ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದ ಸಂಭಾಷಣೆಯಲ್ಲಿ ಬೈಜುಸ್ ಕಂಪನಿ ವಿಡಿಯೋ ಅನ್ನೋ ಮಾಹಿತಿ ಲಭ್ಯವಿದೆ.  ಮಹಿಳಾ ಉದ್ಯೋಗಿ ಏರು ಧ್ವನಿಯಲ್ಲಿ ಮಾತಾನಡು ಆರಂಭಿಸುತ್ತಿದ್ದಂತೆ, ಇತರ ಮ್ಯಾನೇಜರ್, ಕಿರುಚಾಡುತ್ತಿರುವುದೇಕೆ, ಕುಳಿತು ಮಾತನಾಡು ಎಂದು ಸೂಚಿಸಿದ್ದಾರೆ. ಆದರೆ ಮಹಿಳಾ ಉದ್ಯೋಗಿ ತನ್ನ ಸಿಟ್ಟು, ಆಕ್ರೋಶವನ್ನು ಹೊರಹಾಕಿದ್ದಾಳೆ. 

Latest Videos

undefined

ಬೈಜೂಸ್‌ ಲೆಕ್ಕಪತ್ರ ಪರಿಶೀಲನೆಗೆ ಕೇಂದ್ರದ ಸೂಚನೆ?

ನಾನು ಮ್ಯಾನೇಜರ್ ಬಳಿ ಈ ಕುರಿತು ಹೇಳಿದ್ದೇನೆ. ಆದರೆ ನನಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾನು ಎಲ್ಲರ ಮುಂದೆ ಮಾತನಾಡುತ್ತೇನೆ. ಮ್ಯಾನೇಜರ್‌ಗೆ ಸಮಯವಿಲ್ಲ ಅನ್ನೋದು ನನ್ನ ಸಮಸ್ಯೆ ಅಲ್ಲ. ಇದು ನನ್ನ ಮಾತ್ರ ಸಮಸ್ಸೆಯೂ ಅಲ್ಲ. ನಾವಿಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆ ಸರಿಯಾದ ರೀತಿಯ ಬೆಂಬಲ ಸಿಗುತ್ತಿಲ್ಲ. ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಕೇವಲ ಅತೀಯಾದ ಒತ್ತಡ, ಕೆಟ್ಟ ಸಂಸ್ಕೃತಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆಯನ್ನು ಮಾತ್ರ ಸೃಷ್ಟಿಮಾಡಿದ್ದಾರೆ ಎಂದು ಮಹಿಳಾ ಉದ್ಯೋಗಿ ಮಾತನಾಡಿದ್ದಾರೆ.

 

Kalesh b/w Employee and Byjus Companyy over giving lot’s of mental pressure during job (Unfortunately Girl is missing since then) pic.twitter.com/xzgIUbqjeq

— Ghar Ke Kalesh (@gharkekalesh)

 

ಮಹಿಳಾ ಉದ್ಯೋಗಿಯ ರಂಪಾಟ ಕೇಳಿ ಚೇಂಬರ್‌ನಿಂದ ಹೊರಬಂದ ಮ್ಯಾನೇಜರ್, ಒಳಗೆ ಬಂದು ಮಾತನಾಡುವಂತೆ ಸೂಚಿಸಿದ್ದಾರೆ. ಇದಕ್ಕೆ ಮತ್ತೆ ಗರಂ ಆದ ಮಹಿಳಾ ಉದ್ಯೋಗಿ, ನಾನು ಒಳಗೆ ಬಂದು ಮಾತನಾಡುವ ಯಾವುದೇ ವಿಚಾರವಿಲ್ಲ. ಇಲ್ಲೇ ಮಾತನಾಡುತ್ತೇನೆ. ನಿಮ್ಮಿಂದ ಇದುವರೆಗೂ ಪರಿಹರಿಸಲು ಸಾಧ್ಯವಾಗಿಲ್ಲ. ಕಳೆದ ಒಂದು ವರ್ಷದಿಂದ ಇನ್ಸೆಂಟೀವ್ ಸಿಕಿಲ್ಲ. ಸಮಸ್ಯೆಗಳ ಕುರಿತು ಹಲವು ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಆದರೆ ಪರಿಹಾರ ಸಿಕ್ಕಿಲ್ಲ ಎಂದು ಮಹಿಳಾ ಉದ್ಯೋಗಿ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಬೈಜೂಸ್‌ನಿಂದ ಮತ್ತೆ 1 ಸಾವಿರ ಉದ್ಯೋಗಿಗಳ ವಜಾ

ಇತ್ತ ಹಿರಿಯ ಉದ್ಯೋಗಿಗಳು ಮೊಬೈಲ್ ರೆಕಾರ್ಡ್ ಮಾಡಂತೆ ಸೂಚಿಸುತ್ತಿರುವುದು ಸೆರೆಯಾಗಿದೆ. ಈ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಕಾರ್ಪೋರೇಟ್ ಕಚೇರಿಗಳು ಉದ್ಯೋಗಿಗಳ ಬಳಿ ಇದೇ ರೀತಿ ಕೆಲಸ ಮಾಡಿಸುತ್ತದೆ. ಬಳಿಕ ಹಲವು ಕಾರಣ ನೀಡಿ ವೇತನ ಕಡಿತ, ಸೌಲಭ್ಯ ಕಡಿತ, ಉದ್ಯೋಗ ಕಡಿತ ಮಾಡುತ್ತದೆ ಎಂದು ಕಮೆಂಟ್ ಮಾಡಿದ್ದರೆ

click me!