ಫುಲ್‌ ಟೈಮ್‌ ಉದ್ಯೋಗ ನೀಡುತ್ತಿರುವ ಸೋಷಿಯಲ್‌ ಮೀಡಿಯಾ

Kannadaprabha News   | Kannada Prabha
Published : Jan 27, 2026, 08:04 AM IST
social media

ಸಾರಾಂಶ

ಸೋಷಿಯಲ್‌ ಮೀಡಿಯಾಗಳು ಮನರಂಜನೆಯ ಟೈಮ್‌ ಪಾಸ್‌ ವೇದಿಕೆಗಳಾಗಿಲ್ಲ. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌, ಟ್ವಿಟ್ಟರ್‌ ಮುಂತಾದವು ಲಕ್ಷ, ಕೋಟಿಗಳ ಆದಾಯ ತಂದುಕೊಂಡುವ ಡಿಜಿಟಲ್‌ ಆಫೀಸ್ ಆಗಿಬಿಟ್ಟಿದೆ.

ಸೋಷಿಯಲ್‌ ಮೀಡಿಯಾಗಳು ಮನರಂಜನೆಯ ಟೈಮ್‌ ಪಾಸ್‌ ವೇದಿಕೆಗಳಾಗಿಲ್ಲ. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌, ಟ್ವಿಟ್ಟರ್‌ ಮುಂತಾದವು ಲಕ್ಷ, ಕೋಟಿಗಳ ಆದಾಯ ತಂದುಕೊಂಡುವ ಡಿಜಿಟಲ್‌ ಆಫೀಸ್ ಆಗಿಬಿಟ್ಟಿದೆ. ಕ್ರಿಕೆಟಿಗ ವಿರಾಟ್‌ ಕೋಹ್ಲಿ 12 ಕೋಟಿ, ನಟಿಯರಾದ ಪ್ರಿಯಾಂಕ ಚೋಪ್ರಾ 3 ಕೋಟಿ, ದೀಪಿಕಾ ಪಡುಕೋಣೆ 1.5 ಕೋಟಿಯಷ್ಟು ಹಣವನ್ನು ಬರೀ ಇನ್‌ಸ್ಟಾಗ್ರಾಮ್‌ನಿಂದಲೇ ದುಡಿಯುತ್ತಾರೆ ಎನ್ನುತ್ತವೆ ಸೋಷಿಯಲ್‌ ಮೀಡಿಯಾ ಎಕನಾಮಿಕ್ಸ್‌.

ಬಿಗ್‌ಬಾಸ್‌ ವಿನ್ನರ್‌ ಗಿಲ್ಲಿ ನಟನ ಇನ್‌ಸ್ಟಾಗ್ರಾಮ್‌ ಪೇಜ್‌ಗೆ 2 ಮಿಲಿಯನ್‌ ಫಾಲೋವರ್ಸ್‌ ಆಗಿದ್ದು ಎಷ್ಟು ಸದ್ದು ಮಾಡಿತೋ ಆತನ ಪೇಜ್‌ ಮ್ಯಾನೇಜ್‌ ಮಾಡುತ್ತಿರುವುದು ಒಂದು ಪಿಆರ್‌ ತಂಡ ಎಂಬುದು ಅಷ್ಟೇ ಕುತೂಹಲ, ಚರ್ಚೆಗೆ ಕಾರಣವಾಯಿತು. ಒಬ್ಬ ಗಿಲ್ಲಿ ನಟ ಮಾತ್ರವಲ್ಲ, ಬಹುತೇಕ ಸೆಲೆಬ್ರಿಟಿ, ಪ್ರಭಾವಿಗಳ ಸೋಷಿಯಲ್‌ ಮೀಡಿಯಾ ಖಾತೆಗಳು ಕಂಪನಿ ಅಥವಾ ಪಿಆರ್‌ ಟೀಮ್‌ಗಳ ಕೈಯಲ್ಲಿವೆ. ಈ ಪೇಜ್‌ಗಳನ್ನು ಅವರು ಆದಾಯದ ಮೂಲವಾಗಿಸಿದ್ದಾರೆ. ಪ್ರತಿ ಪೋಸ್ಟ್‌ಗೂ ಇಂತಿಷ್ಟು ಹಣ ನಿಗದಿ ಮಾಡಿರುತ್ತಾರೆ. ಈ ಸೋಷಿಯಲ್‌ ಮೀಡಿಯಾ ಉದ್ಯೋಗ ಬೆಂಗಳೂರಿನಂತಹ ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿ, ಊರು, ಪಟ್ಟಣ, ನಗರ ಎನ್ನುವ ಯಾವ ಬೇದವೂ ಇಲ್ಲದೆ ಫುಲ್‌ ಟೈಮ್‌ ಉದ್ಯೋಗ ನೀಡುತ್ತಿದೆ.

ಬೇಡಿಕೆಯ ವಿಷಯಗಳು

ಸೋಷಿಯಲ್‌ ಮೀಡಿಯಾ ಉದ್ಯೋಗ, ಆದಾಯದ ಮೂಲವಾಗಿರುವ ಹೊತ್ತಿನಲ್ಲಿ ಕನ್ನಡ ಕಂಟೆಂಟ್‌ ಕ್ರಿಯೇಟರ್‌ಗಳು ಕನ್ನಡದಲ್ಲೇ ಹತ್ತಾರು ವಿಷಯಗಳನ್ನು ರೂಪಿಸುತ್ತಿದ್ದಾರೆ. ಆಹಾರ, ಕೃಷಿ, ಶಿಕ್ಷಣ, ಹಾಸ್ಯ, ಪ್ರವಾಸ, ಸ್ಥಳೀಯ ಇತಿಹಾಸ, ಸಿನೆಮಾ ವಿಷಯಗಳಿಗೆ ಹೆಚ್ಚು ಬೇಡಿಕೆ ಇದೆ. ಇಂಗ್ಲಿಷ್‌ ಅಥವಾ ಹಿಂದಿ ಕಂಟೆಂಟ್‌ಗಳಿಗೆ ಪೋಲಿಸಿದರೆ ಕನ್ನಡ ಕಂಟೆಂಟ್‌ಗಳಿಗೆ ಪ್ರಾಮಾಣಿಕ ಮತ್ತು ನಿಷ್ಠಾವಂತ ಪ್ರೇಕ್ಷಕರು ಇದ್ದಾರೆ. ಜೊತೆಗೆ ಇಲ್ಲಿ ಸ್ಪರ್ಧೆಯೂ ಕಡಿಮೆ ಎಂಬುದು ಕನ್ನಡ ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಇರುವ ದೊಡ್ಡ ಲಾಭ.

ಆದಾಯದ ಮೂಲಗಳು

- ಯೂಟ್ಯೂಬ್‌ ಜಾಹೀರಾತು, ಬ್ರಾಂಡ್‌ ಸಹಕಾರ, ಮೆಂಬರ್‌ಶಿಷ್‌, ಸ್ಪಾನ್ಸರ್ಡ್‌ ವಿಡಿಯೋಗಳ ಮೂಲಕ ಆದಾಯ ನೀಡುತ್ತದೆ. 50 ಸಾವಿರದಿಂದ 1 ಲಕ್ಷದ ವರೆಗೂ ಖಾಯಂ ಸಬ್‌ಸ್ಕ್ರೈಬರ್‌ಗಳಿದ್ದು, ನಿರಂತರವಾಗಿ ಕಂಟೆಂಟ್‌ ಕೊಡುತ್ತಿದ್ದರೆ ಉತ್ತಮ ಮಾಸಿಕ ಆದಾಯ ಸಾಧ್ಯ ಇದೆ.

- ಫೇಸ್‌ಬುಕ್‌ನಲ್ಲಿ ರೀಲ್ಸ್, ಇನ್-ಸ್ಟ್ರೀಮ್ ಜಾಹೀರಾತುಗಳು ಹಾಗೂ ಪೇಜ್ ಬೋನಸ್‌ಗಳ ಮೂಲಕ ಆದಾಯದ ಅವಕಾಶಗಳು ಹೆಚ್ಚಾಗುತ್ತಿದ್ದು, ವಿಶೇಷವಾಗಿ 30 ವರ್ಷ ಮೇಲ್ಪಟ್ಟ ಹಾಗೂ ಸ್ಥಳೀಯ ಕಥೆಗಳನ್ನು ಹೇಳುವ ಕ್ರಿಯೇಟರ್‌ಗಳಿಗೆ ಇಲ್ಲಿ ಒಳ್ಳೆಯ ಅವಕಾಶಗಳಿವೆ.

- ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಹಣಕಾಸು ಬರುವುದು ಕಡಿಮೆ ಇದ್ದರೂ ಬ್ರಾಂಡ್‌ ಡೀಲ್ಸ್‌, ಅಫಿಲಿಯೇಟ್‌ ಲಿಂಕ್ಸ್‌ ಹಾಗೂ ವೈಯಕ್ತಿಕ ಬ್ರಾಂಡಿಂಗ್‌ ಮೂಲಕ ಒಳ್ಳೆಯ ಆದಾಯ ಇದೆ.

- ಭಾಷಣ ಕಾರ್ಯಕ್ರಮಗಳು, ಪುಸ್ತಕ ಮಾರಾಟ, ತರಬೇತಿ ಕಾರ್ಯಾಗಾರಗಳು, ಸಲಹಾ ಸೇವೆಗಳು, ಸ್ಥಳೀಯ ವ್ಯಾಪಾರ ಪ್ರಚಾರ ಇತ್ಯಾದಿಗಳ ಮೂಲಕ ಪರೋಕ್ಷ ಆದಾಯದ ಅವಕಾಶಗಳಿವೆ.

ಪ್ರತಿಭೆಗಿಂತ ಶಿಸ್ತು ಮುಖ್ಯ

ಹಾಗಂತ ರಾತ್ರೋ ರಾತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಅಕೌಂಟ್‌ ಮಾಡಿಕೊಂಡು ಬ್ಯಾಂಕ್‌ ಬ್ಯಾಲೆನ್ಸ್‌ ಚೆಕ್‌ ಮಾಡಕ್ಕೆ ಹೋಗಬೇಡಿ. ಇಲ್ಲಿ ಆದಾಯ ಇರೋದು ಸತ್ಯ. ಅದು ತಕ್ಷಣವಲ್ಲ. ಒಂದು ವರ್ಷದಿಂದ ಮೂರು ವರ್ಷಗಳ ಕಾಲ ನಿರಂತರ ಶ್ರಮ ಹಾಕಿದರೆ ಸಬ್‌ಸ್ಕ್ರೈಬರ್‌ಗಳು ಹೆಚ್ಚಾಗಿ, ವೀಕ್ಷಣೆಗಳು ಜಾಸ್ತಿಯಾಗುತ್ತವೆ. ಇದು ಆದಾಯ ಮೂಲಕವಾಗಿ ಬದಲಾಗುತ್ತದೆ. ಈ ವಿಚಾರದಲ್ಲಿ ಪ್ರತಿಭೆಗಿಂತ ಶಿಸ್ತು ಮುಖ್ಯ.

ಗಮನಿಸಬೇಕಾದ 10 ಸೂತ್ರಗಳು

ಸೋಷಿಯಲ್‌ ಮೀಡಿಯಾ ಆದಾಯ ಸ್ಥಿರವಲ್ಲ. ಹೀಗಾಗಿ ಬೇರೆ ಬೇರೆ ಆದಾಯ ಮೂಲಗಳನ್ನು ರೂಪಿಸಿಕೊಳ್ಳಲು, ನಿರಂತರವಾಗಿ ಹಣ ಬರುವಂತೆ ಮಾಡಿಕೊಳ್ಳುವುದಕ್ಕಾಗಿ ತಜ್ಞರು ಒಂದಿಷ್ಟು ಸಲಹೆ, ಸೂತ್ರಗಳನ್ನು ಹೇಳಿದ್ದಾರೆ. ಇದು ಕನ್ನಡ ಕಂಟೆಂಟ್‌ ಕ್ರಿಯೇಟರ್ಸ್‌ ಪಾಲಿಸಬೇಕಾದ ಸೂತ್ರಗಳು.

1. ಸೋಷಿಯಲ್ ಮೀಡಿಯಾ ಒಂದು ಪೂರ್ಣಕಾಲಿಕ ವೃತ್ತಿಯಾಗಿ ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ರಚನಾತ್ಮಕ ಹಣಗಳಿಕೆಯ ಅವಕಾಶ ಕಲ್ಪಿಸುತ್ತಿದೆ.

2. ಸ್ಥಳೀಯ ಭಾಷೆಯ ನಿಷ್ಠಾವಂತ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡುವ ಕನ್ನಡ ವಿಷಯಳಿಗೆ ಉತ್ತಮ ಬೇಡಿಕೆ ಇದೆ. ಇದು ಯಾವುದೇ ಸ್ಪರ್ಧೆ ಇಲ್ಲದೆ ಸ್ಥಳೀಯ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಕಾರಣವಾಗುತ್ತದೆ.

3. ಜಾಹೀರಾತು, ಸ್ಪಾನ್ಸರ್‌ಶಿಪ್, ಮೆಂಬರ್‌ಶಿಪ್ ಹಾಗೂ ಬ್ರಾಂಡೆಡ್ ಕಂಟೆಂಟ್ ಮೂಲಕ ಯೂಟ್ಯೂಬ್ ಅತ್ಯಂತ ಸ್ಥಿರ ಆದಾಯ ನೀಡುತ್ತದೆ.

4. ರೀಲ್ಸ್, ಇನ್‌-ಸ್ಟ್ರೀಮ್‌ ಜಾಹೀರಾತುಗಳಿಂದ ಫೇಸ್‌ಬುಕ್ ಪ್ರಾದೇಶಿಕ ಕ್ರಿಯೇಟರ್‌ಗಳಿಗೆ ಲಾಭದಾಯಕವಾಗಿದೆ.

5. ಇನ್‌ಸ್ಟಾಗ್ರಾಮ್‌ ಬ್ರಾಂಡಿಂಗ್ ಆದಾಯದ ಮೂಲ ಮುಖ್ಯವಾಗಿ ಬ್ರಾಂಡ್ ಸಹಕಾರ ಮತ್ತು ಅಫಿಲಿಯೇಟ್ ಮಾರ್ಕೆಟಿಂಗ್.

6. ಕಂಟೆಂಟ್‌ ವೈರಲ್‌ ಆಗಲು ನಿರಂತರ ಪ್ರಯತ್ನ ಮುಖ್ಯ. ನಿಯಮಿತ ಪೋಸ್ಟ್ ಆದಾಯವನ್ನು ಕಟ್ಟುತ್ತದೆ.

7. ಸ್ಥಿರ ಆದಾಯಕ್ಕೆ ಸಾಮಾನ್ಯವಾಗಿ 1 ರಿಂದ 3 ವರ್ಷ ಕಾಯಬೇಕು. ಹೀಗಾಗಿ ಆರಂಭದ ವರ್ಷಗಳಲ್ಲಿ ಆದಾಯ ನಿಧಾನ.

8. ಹಲವಾರು ಆದಾಯ ಮೂಲಗಳು ಅಗತ್ಯ. ಹೀಗಾಗಿ ಜಾಹೀರಾತಿನ ಮೇಲೆ ಮಾತ್ರ ಅವಲಂಬನೆ ಅಪಾಯಕಾರಿ.

9. ಶಿಕ್ಷಕರು, ಪತ್ರಕರ್ತರು, ರೈತರು, ತಜ್ಞರು ರೂಪಿಸುವ ಕಂಟೆಂಟ್‌ಗಳು ವೈಯಕ್ತಿಕ ನಂಬಿಕೆಯನ್ನು ಆಧರಿಸಿದ್ದು, ಈ ನಂಬಿಕೆಯೇ ಆದಾಯ ಹೆಚ್ಚಿಸುತ್ತದೆ.

10. ಸೋಷಿಯಲ್ ಮೀಡಿಯಾ ಲಾಭದಾಯಕವಾಗಿದ್ದರೂ ಅಸ್ಥಿರ. ಹೀಗಾಗಿ ದೀರ್ಘಕಾಲಿಕ ಯಶಸ್ಸಿಗೆ ಹಣಕಾಸು ಯೋಜನೆ, ಉಳಿತಾಯ ಅಗತ್ಯ.

PREV
Read more Articles on
click me!

Recommended Stories

ನಾಳೆ 16 ಸಾವಿರ ಉದ್ಯೋಗಿಗಳ ಕಿತ್ತು ಹಾಕಲಿದೆ ಅಮೇಜಾನ್, ಭಾರತದಲ್ಲೇ ಹೆಚ್ಚು
10ನೇ ತರಗತಿ ಪಾಸ್ ಆದವರಿಗೆ ಸೆಂಟ್ರಲ್ ಗೌರ್ನಮೆಂಟ್ ಜಾಬ್‌ , ಪರೀಕ್ಷೆ ಇಲ್ದೆ ನೇಮಕಾತಿ