10ನೇ ತರಗತಿ ಪಾಸ್ ಆದವರಿಗೆ ಸೆಂಟ್ರಲ್ ಗೌರ್ನಮೆಂಟ್ ಜಾಬ್‌ , ಪರೀಕ್ಷೆ ಇಲ್ದೆ ನೇಮಕಾತಿ

Published : Jan 26, 2026, 03:22 PM IST
Central Government Job

ಸಾರಾಂಶ

Central Government Job : ಸರ್ಕಾರಿ ಕಚೇರಿಯಲ್ಲಿ ಕೆಲ್ಸ ಮಾಡಬೇಕು ಎನ್ನುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಅಂಚೆ ಇಲಾಖೆ ಸಾವಿರಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹತ್ತನೇ ತರಗತಿ ಪಾಸ್ ಆದವರು ಕೆಲ್ಸ ಗಿಟ್ಟಿಸಿಕೊಳ್ಳುವ ಅವಕಾಶ ಸಿಗ್ತಿದೆ.

ಹತ್ತನೇ ತರಗತಿ ಪಾಸ್ ಆದವರಿಗೆ ಖುಷಿ ಸುದ್ದಿ ಒಂದಿದೆ. ಸರ್ಕಾರಿ ಕೆಲ್ಸ (Govt job) ಮಾಡ್ಬೇಕು, ಶಿಕ್ಷಣ ಕಡಿಮೆ ಇದೆ ಅಂತ ಬೇಸರಪಟ್ಟುಕೊಳ್ತಿರುವವರಿಗೆ ಒಳ್ಳೆ ಅವಕಾಶ ಸಿಗ್ತಿದೆ. ಪೋಸ್ಟ್ ಆಫೀಸ್ನಲ್ಲಿ 30 ಸಾವಿರಾರು ಗ್ರಾಮೀಣ ಡಾಕ್ ಸೇವಕ (ಜಿಡಿಎಸ್) ಹುದ್ದೆಗೆ ಶೀಘ್ರವೇ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಯಾವುದೇ ರಿಟರ್ನ್ ಪರೀಕ್ಷೆ ಇರುವುದಿಲ್ಲ. 10 ನೇ ತರಗತಿ ಅಂಕಗಳನ್ನು ಆಧರಿಸಿ ಆಯ್ಕೆ ನಡೆಯಲಿದೆ.

ಒಟ್ಟು ಹುದ್ದೆಗಳು ಮತ್ತು ಅರ್ಜಿ ಸಲ್ಲಿಸುವ ದಿನಾಂಕ

ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2025 ರ ಅಡಿಯಲ್ಲಿ ಒಟ್ಟು 28,740 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಹುದ್ದೆಗಳಲ್ಲಿ ಶಾಖಾ ಪೋಸ್ಟ್ ಮಾಸ್ಟರ್ (ಬಿಪಿಎಂ), ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಮತ್ತು ಅಂಚೆ ಸೇವಕರಂತಹ ಹುದ್ದೆಗಳು ಸೇರಿವೆ. ನೇಮಕಾತಿ ಅಧಿಸೂಚನೆ ಜನವರಿ 31, 2025 ರಂದು ಬಿಡುಗಡೆಯಾಗಲಿದೆ. ಅದೇ ದಿನದಿಂದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 14, 2025. ಮೊದಲ ಮೆರಿಟ್ ಪಟ್ಟಿ ಫೆಬ್ರವರಿ 28, 2025 ರಂದು ಬಿಡುಗಡೆಯಾಗಲಿದೆ.

ಬ್ಯಾಂಕ್ ಉದ್ಯೋಗ ಹುಡುಕುತ್ತಿರುವವರಿಗೆ ನಬಾರ್ಡ್ ಭರ್ಜರಿ ನೇಮಕಾತಿ:

ಯಾರು ಅರ್ಜಿ ಸಲ್ಲಿಸಬಹುದು?

ಯಾವುದೇ ನಿರ್ದಿಷ್ಟ ಅರ್ಹತೆಗಳ ಅಗತ್ಯವಿಲ್ಲ. ನೀವು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಯಸ್ಸಿನ ಮಿತಿ 18 ರಿಂದ 49 ವರ್ಷಗಳು. ಸರ್ಕಾರಿ ನಿಯಮಗಳ ಪ್ರಕಾರ ಮೀಸಲು ವರ್ಗಗಳಿಗೆ ವಯಸ್ಸಿನ ಸಡಿಲಿಕೆ ನೀಡಲಾಗುತ್ತದೆ.

ಶುಲ್ಕ, ಆಯ್ಕೆ ಪ್ರಕ್ರಿಯೆ ಮತ್ತು ಸಂಬಳ

ಈ ಹುದ್ದೆಗಳಿಗೆ ಅರ್ಜಿ ಶುಲ್ಕ 100 ರೂಪಾಯಿ. ಮಹಿಳೆಯರು, ಎಸ್ಸಿ/ಎಸ್ಟಿ, ಪಿಡಬ್ಲ್ಯೂಡಿ ಮತ್ತು ಟ್ರಾನ್ಸ್ವುಮೆನ್ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ಆಯ್ಕೆ ಕೇವಲ ಅರ್ಹತೆಯನ್ನು ಆಧರಿಸಿ ನಡೆಯುತ್ತದೆ. ಪೋಸ್ಟ್ಮಾಸ್ಟರ್ಗಳಿಗೆ 12,000 ರಿಂದ 29,380 ರೂಪಾಯಿ ಸಂಬಳ ಸಿಗಲಿದೆ. ಅಂಚೆ ಸೇವಕರಿಗೆ 10,000 ರಿಂದ 24,470 ರೂಪಾಯಿವರೆಗೆ ಸಂಬಳ ಸಿಗಲಿದೆ. ವಾರ್ಷಿಕ ಶೇಕಡಾ 3ರಷ್ಟು ಹೆಚ್ಚಳವಾಗಲಿದೆ.

ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ

ಆನ್ಲೈನಲ್ಲಿ ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು indiapostgdsonline.gov.in ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ನೋಂದಣಿ ಸಮಯದಲ್ಲಿ, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ ಸೇರಿದಂತೆ ಎಲ್ಲ ಮಾಹಿತಿ ನೀಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಬೇಕು. ನೀವು ಬಯಸಿದರೆ ನೀವು ಫಾರ್ಮ್ ಅನ್ನು ಮುದ್ರಿಸಬಹುದು. ದೇಶದ ಅನೇಕ ರಾಜ್ಯಗಳ ಅಂಚೆ ಕಚೇರಿಗೆ ಈ ಭರ್ತಿ ನಡೆಯಲಿದೆ. , ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ಕೇರಳದಲ್ಲಿ ಅತಿ ಹೆಚ್ಚು ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆ

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ತೀಗಳು ಒಂದಿಷ್ಟು ದಾಖಲೆಗಳನ್ನು ಇಷ್ಟುಕೊಳ್ಳುವುದು ಒಳ್ಳೆಯದು. 10 ನೇ ತರಗತಿಯ ಅಂಕಪಟ್ಟಿ, ಆಧಾರ್ ಅಥವಾ ಮತದಾರರ ಗುರುತಿನ ಚೀಟಿಯಂತಹ ಗುರುತಿನ ಚೀಟಿ, ಜಾತಿ ಪ್ರಮಾಣಪತ್ರ ಪಿಡಬ್ಲ್ಯೂಡಿ ಪ್ರಮಾಣಪತ್ರ, ಇಡಬ್ಲ್ಯೂಎಸ್ ಪ್ರಮಾಣಪತ್ರ, ಜನನ ಪ್ರಮಾಣಪತ್ರ ಮತ್ತು ಸರ್ಕಾರಿ ಆಸ್ಪತ್ರೆಯಿಂದ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿದೆ.

PREV
Read more Articles on
click me!

Recommended Stories

ಭಾರತೀಯ ರೈಲ್ವೆ ಇಲಾಖೆಯ ಭರ್ಜರಿ ಉದ್ಯೋಗ, ಬರೋಬ್ಬರಿ 22,000 ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
ವೃತ್ತಿಜೀವನಕ್ಕೆ ಹೊಸ ತಿರುವು, ಪ್ರಸಾರ ಭಾರತಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ, 50000 ರೂ ವರೆಗೆ ವೇತನ!