'ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3.65 ಕೋಟಿ ಉದ್ಯೋಗ ಸೃಷ್ಟಿ'

By Suvarna NewsFirst Published Aug 18, 2020, 8:50 PM IST
Highlights

ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ  3.65 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ನವದೆಹಲಿ, (ಆ.18): ದೇಶದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳ ನಿರ್ಮಾಣದಲ್ಲಿ ಸುಮಾರು 3.65 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಇಂದು (ಮಂಗಳವಾರ) ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಪುರಿ, ಇದುವರೆಗೆ ಪಿಎಂಎವೈ (ಯು) ಅಡಿಯಲ್ಲಿ ಈಗಾಗಲೇ 1.65 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದರು.

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

1.12 ಕೋಟಿ ಬೇಡಿಕೆಗೆ ಸಚಿವಾಲಯವು 1.07 ಕೋಟಿ ಮನೆಗಳನ್ನು ಮಂಜೂರು ಮಾಡಿದ್ದು, ಈ ಪೈಕಿ 67 ಲಕ್ಷ ಮನೆಗಳನ್ನು ನಿರ್ಮಾಣಕ್ಕೆ ನೆಲಸಮ ಮಾಡಲಾಗಿದೆ. ಹಾಗೂ 35 ಲಕ್ಷ ಮನೆಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವರು ತಿಳಿಸಿದ್ದಾರೆ.

ಮಂಜೂರಾದ ಎಲ್ಲಾ ಮನೆಗಳ ನಿರ್ಮಾಣದಲ್ಲಿ ಅಂದಾಜು 3.65 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಈವರೆಗೆ ಪಿಎಂಎವೈ (ಯು) ಅಡಿಯಲ್ಲಿ ನೆಲಸಮವಾಗಿರುವ ಮನೆಗಳ ನಿರ್ಮಾಣದಲ್ಲಿ ಸುಮಾರು 1.65 ಕೋಟಿ ಉದ್ಯೋಗಗಳು ಈಗಾಗಲೇ ಸೃಷ್ಟಿಯಾಗಿವೆ ಎಂದು ಹೇಳಿದರು.

click me!