ರಾಜ್ಯದ ಯುವಕರಿಗೆ ಮಾತ್ರ ಸರಕಾರಿ ನೌಕರಿಯಲ್ಲಿ ಮೀಸಲು: ಮಹತ್ವದ ಘೋಷಣೆ

Published : Aug 18, 2020, 05:49 PM ISTUpdated : Aug 18, 2020, 05:57 PM IST
ರಾಜ್ಯದ ಯುವಕರಿಗೆ ಮಾತ್ರ ಸರಕಾರಿ ನೌಕರಿಯಲ್ಲಿ ಮೀಸಲು: ಮಹತ್ವದ ಘೋಷಣೆ

ಸಾರಾಂಶ

ಸರ್ಕಾರಿ ಕೆಲಸದಲ್ಲಿ ಸ್ಥಳೀಯರಿಗೆ ಮೊದಲ ಪ್ರಾತಿನಿಧ್ಯ ನೀಡಬೇಕೆಂಬ ಕೂಗು ಹಲವು ರಾಜ್ಯಗಳಲ್ಲಿ ಕೇಳಿಬಂದಿದೆ.  ಇದರ ಬೆನ್ನಲ್ಲೇ ಇದೀಗ ಸರ್ಕಾರಿ ಉದ್ಯೋಗಗಳು ಸ್ಥಳೀಯರಿಗೆ ಮಾತ್ರ ಮೀಸಲು ಎಂದು ರಾಜ್ಯವೊಂದು ಘೋಷಣೆ ಮಾಡಿದೆ.

 ಭೋಪಾಲ್, (ಆ.18): ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ಕೇವಲ ರಾಜ್ಯದ ಯುವಕರಿಗೆ ಮಾತ್ರ ಮೀಸಲಿಡಲಾಗುವುದು ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಇಂದು (ಮಂಗಳವಾರ) ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ವೀಡಿಯೋ ಹೇಳಿಕೆ ಬಿಡುಗಡೆ ಮೂಲಕ ಮಹತ್ವದ ತೀರ್ಮಾನವನ್ನು ಘೋಷಿಸಿದರು. 

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಮಧ್ಯಪ್ರದೇಶದ ಸಂಪನ್ಮೂಲಗಳು ಇಲ್ಲಿನ ಮಕ್ಕಳಿಗಾಗಿ ಮಾತ್ರ. ರಾಜ್ಯದ ಯುವನಜಾಂಗಕ್ಕೆ ಸರ್ಕಾರಿ ಉದ್ಯೋಗಗಳ ಮೀಸಲಾತಿಗೆ ಸಂಬಂಧಿಸಿದ ಕಾನೂನು ಕ್ರಮಗಳನ್ನ ಶೀಘ್ರದಲ್ಲೇ ಕೈಗೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.

10 ಮತ್ತು 12ನೇ ತರಗತಿ ಮಾರ್ಕ್ಸ್ಆಧಾರದ ಮೇಲೆ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಕ್ರಮ ಆರಂಭಿಸಲಾಗುವುದು ಎಂದು ಚೌಹಾಣ್ ತಿಳಿಸಿದರು.

ಇನ್ನು ಈ ವಿಡಿಯೋನಲ್ಲಿ OBC ಕೋಟಾವನ್ನು  ಶೇ 14 ರಿಂದ 27ಕ್ಕೆ ಹೆಚ್ಚಿಸುವ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿಯೂ ಹೇಳಿದ್ದಾರೆ. 

PREV
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!