60,000 ಸಿಬ್ಬಂದಿಗೆ VRS: ಮೈಕ್ರೋಸಾಫ್ಟ್‌ ಬಿಗ್ ಆಫರ್‌! 4 ದೇಶದ ಟೆಕ್ಕಿಗಳಿಗೆ ಮಾಹಿತಿ

Published : Oct 27, 2026, 07:01 AM IST
microsoft

ಸಾರಾಂಶ

ಕೃತಕ ಬುದ್ಧಿಮತ್ತೆ (ಎಐ) ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಮೈಕ್ರೋಸಾಫ್ಟ್ ಮುಂದಾಗಿದ್ದು, ಭಾರತ ಸೇರಿದಂತೆ 4 ದೇಶಗಳ 60,000 ಉದ್ಯೋಗಿಗಳಿಗೆ ವಿಆರ್‌ಎಸ್ ಆಫರ್ ನೀಡಿದೆ. ಸ್ವಯಂಪ್ರೇರಿತವಾಗಿ ಕೆಲಸ ಬಿಡುವವರಿಗೆ ಉತ್ತಮ ಪ್ಯಾಕೇಜ್ ಘೋಷಿಸಲಾಗಿದೆ.

ನವದೆಹಲಿ: ಕೃತಕ ಬುದ್ಧಿಮತ್ತೆಯ ಮೇಲಿನ ಹೂಡಿಕೆಯನ್ನು ಹೆಚ್ಚಿಸಲು ಮುಂದಾಗಿರುವ ಟೆಕ್‌ ದಿಗ್ಗಜ ಮೈಕ್ರೋಸಾಫ್ಟ್‌, ಸ್ವಯಂಪ್ರೇರಿತವಾಗಿ ಕೆಲಸ ಬಿಟ್ಟರೆ ಉತ್ತಮ ಪ್ಯಾಕೇಜ್‌ ನೀಡುವ ಕುರಿತು ಭಾರತ ಸೇರಿದಂತೆ 4 ದೇಶಗಳ ಒಟ್ಟು 60 ಸಾವಿರ ಉದ್ಯೋಗಿಗಳಿಗೆ ಆಫರ್‌ ನೀಡಿದೆ. ಇದನ್ನು ಟೆಕ್‌ ಲೋಕದ ಬೃಹತ್‌ ಲೇಆಫ್‌ ಎನ್ನಲಾಗಿದೆ.

ಡಿ.1ರ ವರೆಗೆ ಕಾಲಾವಕಾಶ

ಮೈಕ್ರೊಸಾಫ್ಟ್‌ನಲ್ಲಿ ವಿಶ್ವಾದ್ಯಂತ 2,23,000 ಉದ್ಯೋಗಿಗಳಿದ್ದು, ಅವರಲ್ಲಿ ಸುಮಾರು ಶೇ.25ರಷ್ಟು ಮಂದಿಗೆ ಕೆಲಸ ಬಿಡುವ ಆಫರ್‌ ನೀಡಲಾಗಿದೆ. ಭಾರತದ 23 ಸಾವಿರ ಮಂದಿ ಮೈಕ್ರೊಸಾಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ ಎಷ್ಟು ಮಂದಿ ನಿರುದ್ಯೋಗಿಗಳಾಗಲಿದ್ದಾರೆ ಎಂಬ ನಿಖರ ಮಾಹಿತಿ ಇಲ್ಲ. ಕೆಲಸ ಬಿಡುವ ಬಗ್ಗೆ ನಿರ್ಧರಿಸಲು ಡಿ.1ರ ವರೆಗೆ ಕಾಲಾವಕಾಶ ನೀಡಲಾಗಿದೆ.

1 ತಿಂಗಳ ಮೂಲ ವೇತನ

ಭಾರತ, ಅಮೆರಿಕ, ಬ್ರಿಟನ್‌ ಮತ್ತು ಕೆನಡಾ ಮೂಲದ, 70 ಹಾಗೂ ಅದಕ್ಕಿಂತ ಕೆಳಗಿನ ಹಂತದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕೆಲಸ ತೊರೆಯಲು ಸೂಚಿಸಲಾಗಿದೆ. ತಾವಾಗಿಯೇ ಕೆಲಸ ಬಿಡಲು ಮುಂದಾಗುವವರಿಗೆ, ಅವರು ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ 1 ತಿಂಗಳ ಮೂಲ ವೇತನ ನೀಡಲಾಗುವುದು. ಜತೆಗೆ ಆರೋಗ್ಯ ವಿಮೆ ಮತ್ತು ವೃತ್ತಿ ಬದಲಾವಣೆಗೆ ಸಹಕಾರಿಯಾಗುವ ಸೇವೆಗಳು ಲಭಿಸಲಿವೆ ಎನ್ನಲಾಗಿದೆ.

ಜುಲೈನಲ್ಲಿ ಕಂಪನಿ 4,800 ಉದ್ಯೋಗಿಗಳನ್ನು ವಜಾ ಮಾಡಿತ್ತು.

ಕಣ್ಣೊರೆಸುವ ಯತ್ನ

ಟೆಕಿಗಳಿಗೆ ಕೆಲಸ ಬಿಡಲು ಸೂಚಿಸಿರುವ ಮೈಕ್ರೋಸಾಫ್ಟ್‌, ಭಾರತದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲಿದ್ದೇವೆ. 2030ರ ವೇಳೆಗೆ ಭಾರತದಾದ್ಯಂತ 2 ಕೋಟಿ ಜನರಿಗೆ ಎಐ ಕೌಶಲಗಳನ್ನು ಕಲಿಸುತ್ತೇವೆ ಎಂಬ ಭರವಸೆ ನೀಡುವ ಮೂಲಕ, ಉದ್ಯೋಗನಷ್ಟದ ಗಾಯಕ್ಕೆ ಮುಲಾಮು ಸವರುವ ಯತ್ನ ಮಾಡಿದೆ.

PREV
Read more Articles on
click me!

Recommended Stories

ಭಾರತ ಸೇರಿ 60 ಸಾವಿರ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಕೊಟ್ಟು ಮನೆಗೆ ಕಳಿಸ್ತಿರೋ Microsoft
Jobs: ವರ್ಷಕ್ಕೆ ₹1 ಕೋಟಿ ಸಂಬಳ! AI ಯುಗದಲ್ಲಿ ಎಂಜಿನಿಯರ್‌ಗಳಿಗೆ ಬಂಪರ್‌ ಬೇಡಿಕೆ, ಯಾವುದು ಈ ಹೈ-ಪೇಯಿಂಗ್‌ ಕೆಲಸ?