ಜೈಲರ್, ವಾರ್ಡರ್ ಹುದ್ದೆಗಳಿಗೆ ಕರ್ನಾಟಕ ಕಾರಾಗೃಹ ಇಲಾಖೆ ಅರ್ಜಿ ಆಹ್ವಾನ

By Web Desk  |  First Published Feb 24, 2019, 4:27 PM IST

ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಜೈಲರ್, ವಾರ್ಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


ಬೆಂಗಳೂರು, (ಫೆ.24) ಜೈಲರ್ ಮತ್ತು ವಾರ್ಡರ್  ಒಟ್ಟು 662 ಹುದ್ದೆಗಳ ನೇರ ನೇಮಕಾತಿಮಾಡುವುದಾಗಿ ಕರ್ನಾಟಕ ಕಾರಾಗೃಹ ಇಲಾಖೆ ಪ್ರಕಟಣೆ ಹೊರಡಿಸಿದೆ. 

ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಮಾರ್ಚ್ 9,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

Tap to resize

Latest Videos

undefined

KPTCLನಲ್ಲಿ ಭರ್ಜರಿ ನೇಮಕಾತಿ, 3646 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ 
* ಜೈಲರ್ ಹುದ್ದೆ: ಈ ಹುದ್ದೆಗೆ ಕನಿಷ್ಟ ಯಾವುದಾದರೂ ಒಂದು ಬ್ಯಾಚುಲರ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು. ಸೋಶಿಯಾಲಜಿ ಅಥವಾ ಸೈಕಾಲಜಿ ಅಥವಾ ಕ್ರಿಮಿನಾಲಜಿ ಅಥವಾ ಕರೆಕ್ಷನಲ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಅಥವಾ ತತ್ಸಮಾನ ವಿಷಯದಲ್ಲಿ ಬ್ಯಾಚುಲರ್ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. 
*ವಾರ್ಡರ್ ಹುದ್ದೆ: ಈ ಹುದ್ದೆಗೆ ಎಸ್‌.ಎಸ್‌.ಎಲ್‌.ಸಿ (10ನೇ ತರಗತಿ) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.

ವಯೋಮಿತಿ: ಈ ಹುದ್ದೆಗಳಿಗೆ ಸಲ್ಲಿಸಲು ಕೊನೆ ದಿನ ಮಾರ್ಚ್ 9,2019ಕ್ಕೆ ಅನ್ವಯ ಸಾಮಾನ್ಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಟ 20 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 28 ವರ್ಷಗಳು ಮತ್ತು ಇತರೆ ಅಭ್ಯರ್ಥಿಗಳಿಗೆ 26 ವರ್ಷವಯೋಮತಿಯನ್ನು ಹೊಂದಿರಬೇಕು. 

ವೇತನ ಶ್ರೇಣಿ: ಜೈಲರ್ ಹುದ್ದೆಗಳಿಗೆ ಅಯ್ಕೆಯಾದ ಅಭ್ಯರ್ಥಿಗಳಿಗೆ 33,450 ರಿಂದ 62,600 ರೂ. (ತಿಂಗಳಿಗೆ) ಮತ್ತು ವಾರ್ಡರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ  21,400 ರಿಂದ 42000 ರೂ. (ತಿಂಗಳಿಗೆ).

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ 2A,2B,3A,3B ಗೆ ಸೇರಿದ ಅಭ್ಯರ್ಥಿಗಳಿಗೆ 250 ರೂ.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1 ಅಭ್ಯರ್ಥಿಗಳಿಗೆ 100 ರೂ. ನಿಗದಿಪಡಿಸಲಾಗಿದ್ದು,  ಶುಲ್ಕವನ್ನು ಪಾವತಿಸಲು ಮಾರ್ಚ್11,2019 ಕೊನೆಯ ದಿನವಾಗಿದೆ.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಮತ್ತು ಇಲಾಖೆಯ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ.

click me!