IIMB Recruitment 2022 ಪೆಡಾಗೋಗಿಕಲ್ ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ನೇಮಕಾತಿ

By Suvarna News  |  First Published Apr 3, 2022, 9:40 PM IST

ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು ಖಾಲಿ ಇರುವ ಪೆಡಾಗೋಗಿಕಲ್ ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನಿದ್ದು, ಏಪ್ರಿಲ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ


ಬೆಂಗಳೂರು(ಎ.3): ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು (Indian Institute of Management Bangalore) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪೆಡಾಗೋಗಿಕಲ್ ರಿಸರ್ಚ್ ಅಸೋಸಿಯೇಟ್ ಹುದ್ದೆಗಳನ್ನು (Pedagogical Research Associate) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 30 ರ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು  ಅಧಿಕೃತ ವೆಬ್‌ತಾಣ https://www.iimb.ac.in/ ಗೆ ಭೇಟಿ ನಿಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು ಇಲ್ಲಿ ಖಾಲಿ ಇರುವ ಪೆಡಾಗೋಗಿಕಲ್ ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ  ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೇ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸಬಹುದು. ಆದರೆ ಅಭ್ಯರ್ಥಿಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 04 ವರ್ಷಗಳ ಅನುಭವ ಇರಬೇಕು.

Latest Videos

undefined

BHEL RECRUITMENT 2022: ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗೆ ನೇಮಕಾತಿ

ವಯೋಮಿತಿ: ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು ಇಲ್ಲಿ ಖಾಲಿ ಇರುವ ಪೆಡಾಗೋಗಿಕಲ್ ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ  ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು  ಗರಿಷ್ಠ 60 ವರ್ಷ ನಿಗದಿಪಡಿಸಲಾಗಿದೆ. ವರ್ಗಾನುಸಾರ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು ಇಲ್ಲಿ ಖಾಲಿ ಇರುವ ಪೆಡಾಗೋಗಿಕಲ್ ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ  ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು ಇಲ್ಲಿ ಖಾಲಿ ಇರುವ ಪೆಡಾಗೋಗಿಕಲ್ ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

CCRI Recruitment 2022: ಕಾಫಿ ಲ್ಯಾಬೋರೇಟರಿ ತಂತ್ರಜ್ಞ ಹುದ್ದೆಗೆ ನೇಮಕಾತಿ 

NIMHANS ಖಾಲಿ ಇರುವ 9 ಹುದ್ದೆಗಳಿಗೆ ನೇಮಕಾತಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (National Institute of Mental Health and Neuro Sciences  -NIMHANS ) ಇಲ್ಲಿ ಖಾಲಿ ಇರುವ ವಿವಿಧ  ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.   ಲೆಕ್ಕಾಧಿಕಾರಿ (Accountant), ಯೋಜನೆಯ ಸಂಯೋಜಕರು (Project Coordinator), ಯೋಜನಾ ಅಧಿಕಾರಿ (Project officer) ಹುದ್ದೆಗಳು ಸೇರಿ ಒಟ್ಟು 9 ಹುದ್ದೆಗಳು ಖಾಲಿ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಮೇಲ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್​ 15 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಬೇಕಾದ ಈ ಮೇಲ್ ವಿಳಾಸ apcnimhans@gmail.com   ಹೆಚ್ಚಿನ ಮಾಹಿತಿಗೆ ಆಸಕ್ತ ಅಭ್ಯರ್ಥಿಗಳು  ಅಧಿಕೃತ ವೆಬ್‌ತಾಣ nimhans.ac.in ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಲು ಕೋರಲಾಗಿದೆ.

ಒಟ್ಟು 9 ಹುದ್ದೆಗಳ ಮಾಹಿತಿ
ಯೋಜನೆಯ ಸಂಯೋಜಕರು  : 2
ಯೋಜನಾ ಅಧಿಕಾರಿ: 6
ಲೆಕ್ಕಾಧಿಕಾರಿ​: 1

ಶೈಕ್ಷಣಿಕ ವಿದ್ಯಾರ್ಹತೆ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಜೊತೆಗೆ  ಸಂಶೋಧನೆ ಅಥವಾ ಕೆಲಸದಲ್ಲಿ ಕನಿಷ್ಠ 2 ವರ್ಷಗಳ ಅನುಭವವನ್ನು ಹೊಂದಿರಬೇಕು.

ಯೋಜನೆಯ ಸಂಯೋಜಕರು ಹುದ್ದೆಗೆ ಸಮಾಜಕಾರ್ಯ, ಮನೋವಿಜ್ಞಾನದಲ್ಲಿ ಪದವಿ, M.Phil ಮಾಡಿರಬೇಕು. 
ಪ್ರಾಜೆಕ್ಟ್ ಆಫೀಸರ್ ಹುದ್ದೆಗೆ ಸಮಾಜಕಾರ್ಯ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.
ಅಕೌಂಟೆಂಟ್​ ಹುದ್ದೆಗೆ ವಾಣಿಜ್ಯ ವಿಷಯದಲ್ಲಿ  ಪದವಿ ಪಡೆದಿರಬೇಕು. 

click me!