ಮೇ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಭಾರತದ ನಿರುದ್ಯೋಗ ಸಮಸ್ಯೆ; 1 ಕೋಟಿ ಮಂದಿಯ ಉದ್ಯೋಗ ನಷ್ಟ!

By Suvarna NewsFirst Published Jun 3, 2021, 8:36 PM IST
Highlights
  • ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಭಾರತದಲ್ಲಿ ನಿರುದ್ಯೋಗ ಹೆಚ್ಚಳ
  • ಒಂದೇ ತಿಂಗಳಲ್ಲಿ ಶೇ. 11.9ಕ್ಕೇರಿದ ನಿರುದ್ಯೋಗ
  • ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ ವರದಿ ಪ್ರಕಟ

ನವದೆಹಲಿ(ಜೂ.03): ಕೊರೋನಾ ವೈರಸ್ ನಿಯಂತ್ರಣಕ್ಕೆ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ವಿಸ್ತರಣೆಯಾಗುತ್ತಲೇ ಇದೆ. ಇದೀಗ ಕರ್ನಾಟಕ ಮತ್ತೆ 14 ದಿನ ಲಾಕ್‌ಡೌನ್ ವಿಸ್ತರಣೆ ಮಾಡಿದೆ. ಹೀಗೆ ರಾಜ್ಯಗಳ ಲಾಕ್‌ಡೌನ್ ವಿಸ್ತರಣೆಯಿಂದ ಭಾರತದ ನಿರುದ್ಯೋಗ ಸಮಸ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಕುರಿತು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ(CMIE) ತನ್ನ ವರದಿಯಲ್ಲಿ ಹೇಳಿದೆ.

ಕೊರೋನಾ ನಿರ್ಬಂಧ: ಏಪ್ರಿಲ್ ಮೊದಲೆರಡು ವಾರದಲ್ಲಿ ನಿರುದ್ಯೋಗ ಸಮಸ್ಯೆ ಶೇ.8ರಷ್ಟು ಹೆಚ್ಚಳ!

ಮೇ ತಿಂಗಳಲ್ಲಿ ಭಾರತದ ನಿರುದ್ಯೋಗ ದರ ಶೇಕಡಾ 11.9ಕ್ಕೆ ಏರಿಕೆಯಾಗಿದೆ. ಎಪ್ರಿಲ್ ತಿಂಗಳಲ್ಲಿ ನಿರುದ್ಯೋಗ ದರ ಶೇಕಡಾ 7.97ರಷ್ಟಿತ್ತು.  2020ರ ಮೇ ತಿಂಗಳ ಕಠಿಣ ಲಾಕ್‌ಡೌನ್‌ ಕಾರಣ 2020ರ ಜೂನ್ ತಿಂಗಳ ನಿರುದ್ಯೋಗ ಶೇಕಡಾ 23ಕ್ಕೆ ಏರಿಕೆಯಾಗಿತ್ತು. ಇದು 29 ವರ್ಷಗಳ ಬಳಿಕ ದಾಖಲಾದ ಗರಿಷ್ಠ ದರ ಇದಾಗಿತ್ತು. 

ಮೇ ತಿಂಗಳ ಹೆಚ್ಚಿನ ನಿರುದ್ಯೋಗ ದರವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ದರವಾಗಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶಗಳು ಕ್ರಮವಾಗಿ ಶೇ 14.73 ಮತ್ತು 10.63 ರಷ್ಟು ನಿರುದ್ಯೋಗ ದರವನ್ನು ಹೊಂದಿವೆ. ಎಪ್ರಿಲ್ ತಿಂಗಳಲ್ಲಿ ನಗರದಲ್ಲಿನ ನಿರುದ್ಯೋಗ ಕ್ರಮವಾಗಿ ಶೇಕಡಾ ಶೇಕಡಾ7.13 ರಿಂದ 9.78  ರಷ್ಟಾಗಿದೆ.

ದೇಶದಲ್ಲಿ 13.5 ಕೋಟಿ ಜನರ ಉದ್ಯೋಗಕ್ಕೇ ಕುತ್ತು?

ಕೊರೋನಾ 2ನೇ ಅಲೆ ಭಾರತಕ್ಕೆ ತೀವ್ರ ಹೊಡೆತ ನೀಡಿದೆ. ಇಷ್ಟೇ ಅಲ್ಲ ಸುಮಾರು 1 ಕೋಟಿಗೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು CMIE ಸಿಇಒ ಮಹೇಶ್ ವ್ಯಾಸ್ ಹೇಳಿದ್ದಾರೆ. ಇನ್ನು ಕೊರೋನಾ ಕಾರಣ ಕಳೆದ ವರ್ಷದಿಂದ ಶೇಕಡಾ 97ರಷ್ಟು ಕುಟುಂಬಗಳ ಆದಾಯ ಕಡಿತಗೊಂಡಿದೆ.

click me!