ಕೆಲಸ ಬಿಟ್ಟು ಹೋಗಿದ್ದ ಉದ್ಯೋಗಿಯನ್ನು ಕರೆತರಲು ₹22000 ಕೋಟಿ ಖರ್ಚು ಮಾಡಿದ್ಯಾಕೆ ಗೂಗಲ್?

By Kannadaprabha NewsFirst Published Oct 1, 2024, 9:03 AM IST
Highlights

ಗೂಗಲ್ ಬರೋಬ್ಬರಿ 22 ಸಾವಿರ ಕೋಟಿ ರೂಪಾಯಿ ಹಣ ನೀಡಿ ಮಾಜಿ ಉದ್ಯೋಗಿಯನ್ನು ತನ್ನ ಕಂಪನಿಗೆ ಹಿಂದಿರುಗಿ ಕರೆಸಿಕೊಂಡದೆ. ಅಷ್ಟಕ್ಕೂ ಗೂಗಲ್ ಇಷ್ಟು ದೊಡ್ಡ ಪ್ಯಾಕೇಜ್ ನೀಡುತ್ತಿರೋದ್ಯಾಕೆ?

ಕ್ಯಾಲಿಫೋರ್ನಿಯಾ: ತನ್ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಕಂಪನಿ ತೊರೆದಿದ್ದ ಅತ್ಯಂತ ಚತುರ ಉದ್ಯೋಗಿಯನ್ನು ಮರುನೇಮಕ ಮಾಡಿಕೊಳ್ಳಲು ಗೂಗಲ್ ಬರೋಬ್ಬರಿ 22000 ಕೋಟಿ ರು. ಖರ್ಚು ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ನಿಜ. ಗೂಗಲ್‌ನಲ್ಲಿ 21 ವರ್ಷ ಕೆಲಸ ಮಾಡಿದ್ದ ನೋಮ್ ಶಜೀರ್, ತನ್ನ ಸಹೋದ್ಯೋಗಿಯೊಂದಿಗೆ ಸೇರಿ ಅಭಿವೃದ್ಧಿ ಪಡಿಸಿದ್ದಚ್ಯಾಟ್‌ಬಾಟ್‌ ಅನ್ನು ಬಿಡುಗಡೆಗೊಳಿಸಲುನಿರಾಕರಿಸಿದ ಕಾರಣ 2021ರಲ್ಲಿ ಕಂಪನಿಯನ್ನು ತೊರೆದಿದ್ದರು. ನಂತರ ಕ್ಯಾರೆಕ್ಟರ್.ಎಐ ಎಂಬ ಸ್ಟಾರ್ಟಪ್ ಸ್ಥಾಪಿಸಿದ್ದರು. ಅದೀಗ ವಿಶ್ವದ ಅತ್ಯಂತ ಪ್ರಭಾವಿ ಎಐ ಸ್ಟಾರ್ಟಪ್‌ಗಳ ಪೈಕಿ ಒಂದಾಗಿದೆ. 

ಇದೀಗ ಎಐ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮತ್ತೆ ನೋಮ್‌ನ ಅವಶ್ಯಕತೆ ಮನಗಂಡು ಗೂಗಲ್ ಅವರನ್ನು ಮರಳಿ ನೇಮಿಸಿಕೊಳ್ಳುವ ಸಲುವಾಗಿ ಆತನ ಕಂಪನಿಯನ್ನೇ 22000 ಕೋಟಿ ರು. ಕೊಟ್ಟು ಖರೀದಿಸಿದೆ. ಈ ಒಪ್ಪಂದದ ಅನ್ವಯ ಕ್ಯಾರೆಕ್ಟರ್.ಎಐನ ತಂತ್ರಜ್ಞಾನ ಗೂಗಲ್ ಪಾಲಾಗಲಿದೆ ಮತ್ತು ನೋಮ್ ಕೂಡಾ ಇನ್ನುಮುಂದೆ ಗೂಗಲ್‌ನಲ್ಲೇ ಕೆಲಸ ಮಾಡಲಿದ್ದಾರೆ.

Latest Videos

ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಖಾಸಗಿ ಕಂಪನಿಯ ಉದ್ಯೋಗಿ ಯಾರು?

ಕೆಲಸದ ಒತ್ತಡ: ಊಟ, ನಿದ್ದೆ ಬಿಟ್ಟ ಉದ್ಯೋಗಿ ಸಾವು? 

ಲಖನೌ: ಕೆಲಸದ ಒತ್ತಡದಿಂದ ನೌಕರರು ಸಾವನ್ನಪ್ಪುತ್ತಿರುವ ಘಟನೆಗಳು ಸಾಕಷ್ಟು ಸುದ್ದಿ ಮಾಡುತ್ತಿರುವ ನಡುವೆಯೇ ಕೆಲಸ ಒತ್ತಡ ತಾಳಲಾಗದೇ ಸಾವನ್ನಪ್ಪುತ್ತಿರುವುದಾಗಿ ಪತ್ರ ಬರೆದಿದ್ದು ವ್ಯಕ್ತಿ ಯೊಬ್ಬರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. 

ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಲಖನೌದ ಬಜಾಜ್ ಫಿನಾನ್ಸ್‌ನ ತರುಣ್ ಸಕ್ಸೆನಾ ಎಂದು ಗುರುತಿಸಲಾಗಿದೆ. ಬಜಾಜ್‌ ಫಿನಾನ್ಸ್‌ನಲ್ಲಿ ಸಾಲ ವಸೂಲಿ ವಿಭಾಗದಲ್ಲಿದ್ದ ತರುಣ್, 'ಏನೇ ಮಾಡಿದರೂ ವಸೂಲಿ ಗುರಿ ಮುಟ್ಟಲಾಗುತ್ತಿಲ್ಲ. ವಸೂಲಿ ಮಾಡಲಾಗದೇ ಇದ್ದಲ್ಲಿ ಬದಲಾಗಿ ಸಾಲದ ಇಎಂಐ ಹಣವನ್ನು ನೀವೆ ಕಟ್ಟಬೇಕೆಂದು ಒತ್ತಡ ಹಾಕುತ್ತಿದ್ದಾರೆ. 45 ದಿನ ಗಳಿಂದ ನಿದ್ದೆ ಮಾಡಿಲ್ಲ. ಸರಿಯಾಗಿ ಊಟವನ್ನೂ ಮಾಡಿಲ್ಲ' ಎಂದು ಪತ್ರ ಬರೆದಿದ್ದು ತರುಣ್ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

30 ಕೋಟಿಯ ಸಂಬಳ, ಜಸ್ಟ್ ಸ್ವಿಚ್ On/Off ಮಾಡೋದು, ಆದ್ರೂ ಈ ಕೆಲಸಕ್ಕೆ ಯಾರೂ ಬರಲ್ಲ!

click me!